Advertisement

ರೋಗ ನಿಯಂತ್ರಣಕ್ಕೆ ಸ್ವಚ್ಛತೆ ಮುಖ್ಯ

12:37 PM Oct 04, 2020 | Suhan S |

ದೊಡ್ಡಬಳ್ಳಾಪುರ: ಗಾಂಧಿ ಜಯಂತಿ ದಿನದಂದು ಶ್ರೀಅಂಜನಾದ್ರಿ ಚಾರಿಟಬಲ್‌ ಟ್ರಸ್ಟ್‌ ನೇತೃತ್ವದಲ್ಲಿ ನಗರ ಸ್ವತ್ಛತಾಕಾರ್ಯ ಕೈಗೊಳ್ಳಲಾಯಿತು.

Advertisement

ತ್ಯಾಗರಾಜನಗರದಲ್ಲಿ ಮಹಾತ್ಮ ಗಾಂಧಿ ಭಾವಚಿತ್ರಕ್ಕೆ ಪುಷ್ಟ ನಮನ ಸಲ್ಲಿಸಿ ಸ್ವಚ್ಛತಾ‌ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅಂಜನಾದ್ರಿ ಚಾರಿಟಬಲ್‌ ನಿರ್ದೇಶಕ ಧೀರಜ್‌ ಮುನಿರಾಜು, ಕೋವಿಡ್‌ಸೇರಿದಂತೆಇನ್ನಿತರೆಸಾಂಕ್ರಾಮಿಕ ರೋಗಗಳನ್ನುನಿಯಂತ್ರಣಕ್ಕೆ ತರಬೇಕಾದರೆ ಸ್ವಚ್ಛತೆ ಗಮನ ಹರಿಸಬೇಕೆಂದು ಹೇಳಿದರು.

ಪ್ರತಿದಿನ ನಗರದ 31 ವಾರ್ಡ್‌ಗಳಲ್ಲೂ ನಗರ ಪೌರಕಾರ್ಮಿಕರು ನಮ್ಮ ಆರೋಗ್ಯ ಹಿತರಕ್ಷಣೆಗಾಗಿ ಶ್ರಮಿಸುತ್ತಿದ್ದಾರೆ. ಆದರೂ ಸಾರ್ವಜನಿಕರು ನಿಗದಿತ ಸ್ಥಳಗಳಲ್ಲಿ ಕಸ ಎಸೆದು ಮಾರಕ ಖಾಯಿ ಲೆಗಳು ಹರಡುವಂತೆ ಮಾಡುತ್ತಿದ್ದಾರೆ. ನಮ್ಮಮನೆಸ್ವತ್ಛವಾಗಿದ್ದರೆ,ಖಾಯಿಲೆಗಳು ಬರುವುದಿಲ್ಲ ಎಂಬ ಭ್ರಮೆ ಬಿಟ್ಟು ನಾವಿರುವ ಪ್ರದೇಶ ಸ್ವಚ್ಛವಾಗಿಟ್ಟುಕೊಳ್ಳಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಪರಿಸರಸಿರಿ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಮಂಜುನಾಥ್‌, ಶ್ರೀಅಂಜನಾದ್ರಿ ಚಾರಿಟಬಲ್‌ ಸಂಸ್ಥಾಪಕ ಅಧ್ಯಕ್ಷ ಪಿ. ಮುನಿರಾಜು, ರಾಜಶ್ರೀ ಕಂಫಾಟ್ಸ್‌ ಮಾಲೀಕ ಪದ್ಮರಾಜ್‌, ಜೋನಾಮಲ್ಲಿಕಾರ್ಜುನ್‌, ಮೋದಿಜಿ ಬಾಯ್ಸ  ಅಧ್ಯಕ್ಷ ನರೇಂದ್ರ, ಲೇಖಕ ಯಲ್ಲಪ್ಪ. ಜಿ, ಪರಿಸರಸಿರಿ ಕ್ಷೇಮಾಭಿವೃದ್ಧಿಯ ರಾಜ ಶೇಖರ್‌, ಸುಚೇತನ ಚಾರಿಟಬಲ್‌ ಎಜುಕೇಶನ್‌ಟ್ರಸ್ಟ್‌ನಮಂಜುನಾಥ್‌,ಪ್ರವೀಣ್‌,  ನವೀನ್‌, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ನಿರ್ದೇಶಕ ಎನ್‌.ಕೆ. ರಮೇಶ್‌. ವೆಂಕಟೇಶ್‌ ಬಂತಿ, ಶ್ರೀನಿವಾಸ್‌ ಬಾಸ್ಕರ್‌ ನಾಯ್ಕ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next