Advertisement
ಜಿಲ್ಲೆಯಲ್ಲಿಯೇ ಎರಡನೇ ದೊಡ್ಡ ಪಟ್ಟಣದ ಜೊತೆಗೆ ವಾಣಿಜ್ಯ ನಗರಿ ಖ್ಯಾತಿಯ ಗಜೇಂದ್ರಗಡ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪಟ್ಟಣವಾಗಿದೆ. ಜನದಟ್ಟಣೆ, ವಾಹನ ಸಂಚಾರದ ಮಧ್ಯೆಯೂ ಪುರಸಭೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸ್ವಚ್ಛ ಹಾಗೂ ಸುಂದರ ಪಟ್ಟಣವನ್ನಾಗಿ ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಡೆಸಿದ ಸ್ವತ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ದೇಶಕ್ಕೆ 89 ನೇ ರ್‍ಯಾಂಕ್, ರಾಜ್ಯಕ್ಕೆ 16 ನೇ ರ್‍ಯಾಂಕ್ ಗಳಿಸಿ ಉತ್ತಮ ಸಾಧನೆಗೈದಿದೆ.
Related Articles
Advertisement
ಏನಿದು ಸ್ವಚ್ಛ ಸರ್ವೇಕ್ಷಣೆ?: ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಪ್ರತಿ ವರ್ಷ ಸ್ವಚ್ಛ ಸರ್ವೇಕ್ಷಣೆ ನಡೆಸುತ್ತದೆ. ಸ್ವಚ್ಛ ಭಾರತ ಅಭಿಯಾನದ ಭಾಗವಾಗಿ ಇದನ್ನು ಆರಂಭಿಸಲಾಗಿದ್ದು, ಪ್ರತಿ ವರ್ಷ ದೇಶಾದ್ಯಂತ ಸ್ವಚ್ಛತಾ ಸಮೀಕ್ಷೆ ನಡೆಸಲಾಗುತ್ತದೆ. ಸಮೀಕ್ಷೆ ಆಧರಿಸಿ ದೇಶದ ವಿವಿಧ ರಾಜ್ಯಗಳಿಗೆ ಈ ಶ್ರೇಯಾಂಕದ ಆಧಾರದ ಮೇಲೆ ಶ್ರೇಣಿ ನೀಡಲಾಗುತ್ತದೆ. ನಗರಗಳ ಆರೋಗ್ಯ ಮತ್ತು ತ್ಯಾಜ್ಯ ನೀರಿನ ವಿಲೇವಾರಿ ಮುಂತಾದ ಇತರ ಪ್ರಮುಖ ಮಾನದಂಡಗಳ ಆಧಾರದ ಮೇಲೆ ಪಾಯಿಂಟ್ಸ್ ನೀಡಲಾಗುತ್ತದೆ. ಇದು ಈ ಬಾರಿಯ (2022) ಸ್ವಚ್ಛ ಸರ್ವೇಕ್ಷಣೆಯ 6ನೇ ಆವೃತ್ತಿಯಾಗಿದೆ. ಹೆಚ್ಚು ಅಂಕಕ್ಕೆ ಬೇಕಾದ ಅಂಶಗಳು: 1) ರಸ್ತೆ ಸ್ವಚ್ಛತೆ 2) ಬೀದಿಗಳ ಸ್ವಚ್ಛತೆ, 3) ಸಾರ್ವಜನಿಕರ ಅಭಿಪ್ರಾಯ 4) ಘನತ್ಯಾಜ್ಯ ವಿಲೇವಾರಿ, 5) ಹಸಿ ಮತ್ತು ಒಣ ಕಸ ವಿಂಗಡಿಸಲು ಡಸ್ಟ್‌ಬಿನ್ ವಿತರಣೆ, 6) ವಾಹನ ಮೂಲಕ ಕಸ ಸಂಗ್ರಗಣೆ, 6) ಎರೆಹುಳು ಗೊಬ್ಬರ, 7) ಪೌರಕಾರ್ಮಿಕರಿಗೆ ಬೆಳಿಗ್ಗೆ ತಿಂಡಿ ವಿತರಣೆ ಹೀಗೆ ಅನೇಕ ನಿಯಮಗಳನ್ನು ರೂಪಿಸಲಾಗಿದೆ.
ಜಿಲ್ಲೆಗೆ ಪ್ರಥಮ: ಗದಗ ಜಿಲ್ಲೆಯಲ್ಲಿ 1 ನಗರಸಭೆ, 5 ಪುರಸಭೆ, 3 ಪಪಂ ಕಾರ್ಯಾಲಯಗಳಿವೆ. ಆದರೆ, ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಗಜೇಂದ್ರಗಡ ಪುರಸಭೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಜಿಲ್ಲೆಯಲ್ಲಿಯೇ ಉತ್ತಮ ಸಾಧನೆಗೈದಿದೆ. ದೇಶದಲ್ಲಿ 25 ಸಾವಿರ ಜನಸಂಖ್ಯೆ ಮೇಲ್ಪಟು 50 ಸಾವಿರ ಒಳಗಿನ ಜನಸಂಖ್ಯೆ ಹೊಂದಿರುವ ಪುರಸಭೆಗಳಲ್ಲಿ ಗಜೇಂದ್ರಗಡ 89 ಸ್ಥಾನ ಪಡೆದುಕೊಂಡಿದೆ. ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಗಜೇಂದ್ರಗಡ ಪುರಸಭೆ ರಾಜ್ಯಕ್ಕೆ 16ನೇ ರ್‍ಯಾಂಕ್ ಪಡೆದಿದೆ. ಪೌರಕಾರ್ಮಿಕರ ನಿರಂತರ ಶ್ರಮ, ಸಾರ್ವಜನಿಕರ ಸಹಕಾರ ಮತ್ತು ಸಹಭಾಗಿತ್ವವೇ ಈ ಸಾಧನೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲೂ ಸ್ವಚ್ಛತೆ ಕಾಪಾಡುವ ಮೂಲಕ ಸುಂದರ ಪಟ್ಟಣವನ್ನಾಗಿಸಲು ನಮ್ಮ ಜೊತೆ ಸಾರ್ವಜನಿಕರು ಕೈ ಜೋಡಿಸಬೇಕಿದೆ. –ಮಹಾಂತೇಶ ಬೀಳಗಿ, ಪುರಸಭೆ ಮುಖ್ಯಾಧಿಕಾರಿ
ಜಿಲ್ಲೆಯ ದೊಡ್ಡ ಪಟ್ಟಣ ಗಜೇಂದ್ರಗಡಕ್ಕೆ ಸ್ವಚ್ಛತೆಯ ಗರಿ ದೊರೆತಿರುವುದು ನಮ್ಮಗಳ ಕರ್ತವ್ಯಕ್ಕಿಂತ, ಪೌರಕಾರ್ಮಿಕರ ಶ್ರಮದ ಫಲವಾಗಿದೆ. ಇನ್ನಷ್ಟು ಸ್ವಚ್ಛವಾಗಿಡಲು ಸಾರ್ವಜನಿಕರ ಸಹಭಾಗಿತ್ವ ಬೇಕಿದೆ. –ರಾಘವೇಂದ್ರ ಮಂತಾ, ಪುರಸಭೆ ಆರೋಗ್ಯ ಅಧಿಕಾರಿ