Advertisement

ಬ್ರಿಟಿಷರ ಕಾಲದ ಶುದ್ದೀಕರಣ ಘಟಕ: ಡಾ.ಕೆ. ಸುಧಾಕರ್ ಕಿಡಿ

09:33 AM Sep 20, 2019 | keerthan |

ಚಿಕ್ಕಬಳ್ಳಾಪುರ: ತಮ್ಮ ಸ್ವ ಕ್ಷೇತ್ರ ಚಿಕ್ಕಬಳ್ಳಾಪುರದಲ್ಲಿ ಪ್ರವಾಸ ಕೈಗೊಂಡಿರುವ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ಕೆ.ಸುಧಾಕರ್, ಒಳಚರಂಡಿ ನೀರು ಶುದ್ಧೀಕರಣ ಘಟಕವನ್ನುವ ಖುದ್ದು ಪರಿಶೀಲನೆ ನಡೆಸಿದರು.

Advertisement

ಮೊದಲಿಗೆ ಚಿಕ್ಕಬಳ್ಳಾಪುರ ನಂದಿ ಕ್ರಾಸ್ ನಲ್ಲಿರುವ ಕೋಚಿಮುಲ್ ಮೇಗಾ ಡೇರಿಗೆ ಬೇಟಿ ನೀಡಿ ಅಲ್ಲಿನ ತ್ಯಾಜ್ಯ ನೀರಿನ ಘಟಕ ಪರಿಶೀಲನೆ ಬಳಿಕ ನೇರವಾಗಿ ನಗರಸಭೆಯ ಒಳಚರಂಡಿ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟಕ ಸಮರ್ಪಕವಾಗಿ ಕೆಲಸ ಮಾಡದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇದು ಬ್ರಿಟಿಷರ ಕಾಲದ ಶುದ್ಧೀಕರಣ ಘಟಕವಾಗಿದೆ. ಇದರಿಂದ ಏನು ಪ್ರಯೋಜನವಾಗಲ್ಲ ಎಂದರು. ಕೂಡಲೇ ಇದನ್ನು ಬದಲಾಯಿಸಿ ಹೊಸ ತಂತ್ರಜ್ಞಾನದ ಘಟಕ ಅಳವಡಿಸಬೇಕೆಂದು ನಗರಸಭೆ ಅಧಿಕಾರಿಗಳಿಗೆ ಸೂಚಿಸಿಸಿದರು.

ನಂತರ ನಗರದ ಹೊರ ವಲಯದ ಪುಟ್ಟತಿಮ್ಮನಹಳ್ಳಿ ಸಮೀಪ ತೆರೆದಿರುವ ಘನ ತ್ಯಾಜ್ಯ ನಿರ್ವಹಣೆ ಘಟಕವನ್ನು ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪ್ರಾದೇಶಿಕ ಪರಿಸ ಅಧಿಕಾರಿ ಮಧುಸೂದನ್, ಪಿಡಿ ರೇಣುಕಾ, ನಗರಸಭೆ ಆಯುಕ್ತ ಉಮಾಕಾಂತ್ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next