Advertisement
ಪಟ್ಟಣದ ಸಮೀಪದ ಬಸ್ತಿಹಳ್ಳಿ ಮುಖ್ಯ ರಸ್ತೆಯಲ್ಲಿರುವ ನೀರಿನ ಟ್ಯಾಂಕ್ (ನೀರಿನ ತೊಟ್ಟಿ), ಅಂಬೇಡ್ಕರ್ ಕಾಲೋನಿ, ಚೀಲನಾಯ್ಕನ ಹಳ್ಳಿ, ಜೋಡಿತಿಪ್ಪನಹಳ್ಳಿ , ಹಳೇಬೀಡಿನ ಹೊಯ್ಸಳ ಬಡಾವಣೆ,ಬೇಲೂರು ಮುಖ್ಯ ರಸ್ತೆ ಸೇರಿದಂತೆ ಸುಮಾರು 35ಕ್ಕೂ ಹೆಚ್ಚು ನೀರಿನ ತೊಟ್ಟಿ ಸ್ವಚ್ಛಗೊಳಿಸುವ ಕಾರ್ಯವನ್ನು ಗ್ರಾಪಂನಿಂದ ಮಾಡಲಾಗುತ್ತಿದೆ.
Related Articles
Advertisement
ಅದರಂತೆ ಗ್ರಾಪಂಗಳ ಆವರಣ ಸ್ವಚ್ಛತೆ, ಸುತ್ತಮುತ್ತಲಿನ ಪರಿಸರ ಸ್ವಚ್ಛಗೊಳಿಸುವುದು, ಬಡಾವಣೆಗಳ ಸ್ವಚ್ಛತಾ ಕಾರ್ಯ ವಿಶೇಷವಾಗಿ ಜನ ಮತ್ತು ಜಾನುವಾರುಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಕಲ್ಪಿಸುವುದು. ಈ ನಿಟ್ಟಿನಲ್ಲಿ ಹಳೇಬೀಡು ಗ್ರಾಪಂ ಎಲ್ಲಾ ರೀತಿಯ ಕ್ರಮ ಕೈಗೊಂಡು ಮಾದರಿ ಗ್ರಾಪಂ ಎನಿಸಿಕೊಂಡಿದೆ. ಈ ರೀತಿಯ ಕಾರ್ಯಮಾಡಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರವಿಕುಮಾರ್ ಹಾಗೂಗ್ರಾಪಂ ಪದಾಧಿಕಾರಿಗಳು, ಸಿಬ್ಬಂದಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದುಜಿಲ್ಲಾ ಕಾರ್ಯನಿರ್ವಾಹಣ ಅಧಿಕಾರಿ ಕಾಂತರಾಜ್ ತಿಳಿಸಿದ್ದಾರೆ.
ತೊಟ್ಟಿ ಒಳಭಾಗದಲ್ಲಿ ಗ್ರಾಪಂ ನಾಮಫಲಕ :
ಹಳೇಬೀಡು ಗ್ರಾಪಂ ವ್ಯಾಪ್ತಿಯ ಎಲ್ಲಾ ನೀರಿನ ತೊಟ್ಟಿಗಳನ್ನು ಪಟ್ಟಿ ಮಾಡಿಸಿ, ಸುಮಾರು 35ಕ್ಕೂ ತೊಟ್ಟಿಗಳನ್ನು ಗುರುತಿಸಿ, ಅವುಗಳನ್ನು ಸ್ವಚ್ಛ ಮಾಡುವ ಕಾರ್ಯ ಮಾಡುತ್ತಿದ್ದೇವೆ. ಒಂದೊಂದು ತೊಟ್ಟಿಗಳನ್ನು ಸ್ವಚ್ಛಗೊಳಿಸಿ, ಸುಣ್ಣ ಮತ್ತು ಬಣ್ಣ ಹಾಕಿ ತೊಟ್ಟಿ ಒಳಭಾಗದಲ್ಲಿ ಗ್ರಾಪಂ ನಾಮಫಲಕ ಹಾಕಿಸಲಾಗಿದೆ. ಜನರು ಈ ತೊಟ್ಟಿಗಳನ್ನು ಸ್ವಚ್ಛವಾಗಿ ಇಟ್ಟುಕೊವಂತೆ ನಿರ್ದೇಶನ ಮಾಡಿದ್ದು, ಜನರು ಅದನ್ನು ಸ್ವಚ್ಛವಾಗಿಟ್ಟುಕೊಂಡು ಜಾನುವಾರುಗಳಿಗೆ ಶುದ್ಧ ನೀರು ಕಲ್ಪಿಸಿದರೆ,ನಾವು ಮಾಡಿದ ಕಾರ್ಯ ಸಾರ್ಥಕವಾಗುತ್ತದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಕುಮಾರ್ ತಿಳಿಸಿದ್ದಾರೆ.
ಬೇಲೂರು ತಾಲೂಕಿನಲ್ಲೇ ಹಳೇಬೀಡು ಸ್ವಚ್ಛತೆಯಲ್ಲಿ ಮಾದರಿ ಗ್ರಾಪಂ ಆಗಿರುವುದ ಸಂತೋಷದ ಸಂಗತಿ. ಮುಂದಿನ ದಿನಗಳಲ್ಲಿ ಪ್ರತಿ ಬಡಾವಣೆಗಳ ಸ್ವಚ್ಛತೆಗೆ ದಿನಾಂಕ ನಿಗದಿ ಮಾಡಿಕೊಂಡು ರಸ್ತೆ, ಚರಂಡಿ ಸ್ವಚ್ಛತೆಯನ್ನು ಆಯಾ ವಾರ್ಡ್‌ಗಳಸದಸ್ಯರ ನೇತೃತ್ವದಲ್ಲಿ ಕಾರ್ಯರೂಪಕ್ಕೆ ತರಲಾಗುವುದು. – ಗೀತಾ ಅರುಣ್, ಗ್ರಾಪಂ ಅಧ್ಯಕ್ಷೆ, ಹಳೇಬೀಡು