Advertisement

ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ನಿಮಿತ್ತ ಸ್ವಚ್ಛತಾ ಶ್ರಮದಾನ

05:23 PM Sep 27, 2021 | Team Udayavani |

ದಾಂಡೇಲಿ : ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ನಿಮಿತ್ತ ದಾಂಡೇಲಿ-ಜೋಯಿಡಾ ತಾಲೂಕು ರೆಸಾರ್ಟ್ ಮತ್ತು ಹೋಂ ಸ್ಟೇ ಮಾಲಕರ ಅಸೋಶಿಯೇಶನ್ ಆಶ್ರಯದಲ್ಲಿ ಜೋಯಿಡಾ ತಾಲೂಕಿನ ಬಾಪೇಲಿಯಲ್ಲಿರುವ ಬ್ಯಾಕ್ ವಾಟರ್ ಪ್ರದೇಶ ವ್ಯಾಪ್ತಿಯಲ್ಲಿ ಸೋಮವಾರ ಬೆಳಗ್ಗಿನಿಂದ ಸ್ವಚ್ಛತಾ ಶ್ರಮದಾನವನ್ನು ಹಮ್ಮಿಕೊಳ್ಳಲಾಯ್ತು.

Advertisement

ದಾಂಡೇಲಿ-ಜೋಯಿಡಾ ತಾಲೂಕು ರೆಸಾರ್ಟ್ ಮತ್ತು ಹೋಂ ಸ್ಟೇ ಮಾಲಕರ ಅಸೋಶಿಯೇಶನ್ ಇದರ ಅಧ್ಯಕ್ಷರಾದ ವಿಷ್ಣುಮೂರ್ತಿ ರಾವ್ ಅವರು ಮಾತನಾಡಿ ಸ್ವಚ್ಛತೆಯೆ ಎಲ್ಲದಕ್ಕೂ ಮೂಲವಾಗಿದೆ. ಸ್ವಚ್ಚತೆಯಿದ್ದಲ್ಲಿ ಸಮೃದ್ದ ಆರೋಗ್ಯ ನಿರ್ಮಾಣ ಸಾಧ್ಯವಿದೆ. ಪ್ರವಾಸೋದ್ಯಮ ದಿನಾಚರಣೆಯ ನಿಮಿತ್ತವಾಗಿ ಪ್ರವಾಸಿ ಸ್ಥಳಗಳನ್ನು ಸ್ವಚ್ಛವಾಗಿಡುವ ಉದ್ದೇಶ ಹಾಗೂ ಈ ಬಗ್ಗೆ ಜಾಗೃತಿಯನ್ನು ಮೂಡಿಸುವ ನಿಟ್ಟಿನಿಂದ ದಾಂಡೇಲಿ-ಜೋಯಿಡಾ ತಾಲೂಕು ರೆಸಾರ್ಟ್ ಮತ್ತು ಹೋಂ ಸ್ಟೇ ಮಾಲಕರ ಅಸೋಶಿಯೇಶನ್ ಸ್ವಚ್ಛತಾ ಶ್ರಮದಾನವನ್ನು ಹಮ್ಮಿಕೊಂಡಿದೆ. ಸಮೃದ್ದವಾದ ದಟ್ಟ ಅರಣ್ಯವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಪ್ರತಿಜ್ಞೆಯನ್ನು ನಾವು ನೀವೆಲ್ಲರೂ ಮಾಡಬೇಕೆಂದು ಕರೆ ನೀಡಿದರು.

ಇದನ್ನೂ ಓದಿ: ಅ.11ರವರೆಗೆ ನೈಟ್ ಕರ್ಫ್ಯೂ ಮುಂದುವರಿಸಿ ಆದೇಶ

ಸ್ಥಳೀಯ ಅರಣ್ಯ ರಕ್ಷಕರಾದ ರಾಮಚಂದ್ರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಜೀವವೈವಿಧ್ಯತೆಗಳಿಂದ ವಿಶ್ವಮನ್ನಣೆಗೆ ಪಾತ್ರವಾದ ಈ ಭಾಗದ ಅರಣ್ಯ ಸಂಪತ್ತು ಹಾಗೂ ಜೀವವೈವಿಧ್ಯತೆಗಳ ರಕ್ಷಣೆಯ ಜೊತೆಗೆ ಸ್ವಚ್ಛತೆಗೆ ವಿಶೇಷವಾದ ಆದ್ಯತೆಯನ್ನು ನೀಡಬೇಕೆಂದು ಕರೆ ನೀಡಿದರು.

ಹಿರಿಯರಾದ ತುಕರಾಮ ಮಾಂಜ್ರೇಕರ ಅವರು ಮಾತನಾಡಿ ಜೋಯಿಡಾ ಮತ್ತು ದಾಂಡೇಲಿಯ ಪ್ರವಾಸೋದ್ಯಮಿಗಳು ಒಂದಾಗಿ ಸಂಘವನ್ನು ಕಟ್ಟಿ ಕ್ರಿಯಾರ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಸ್ವಾಗತಾರ್ಹ ಈ ಸಂಘದ ಮೂಲಕ ಪ್ರವಾಸೋದ್ಯಮ ಕ್ಷೇತ್ರ ಇನ್ನಷ್ಟು ಸದೃಢಗೊಳ್ಳುವಂತಾಗಲೆಂದು ಶುಭ ಹಾರೈಸಿ, ಪ್ರವಾಸಿಗರನ್ನು ಆಕರ್ಷಿಸುವುದರ ಜೊತೆಗೆ ಜೀವವೈವಿಧ್ಯತೆಗಳ ಆರೋಗ್ಯ ಸಂರಕ್ಷಣೆಯ ದೃಷ್ಟಿಯಿಂದ ಸ್ವಚ್ಚತೆಗೆ ಹೆಚ್ಚಿನ ಆಧ್ಯತೆ ನೀಡಬೇಕೆಂದರು.

Advertisement

ಈ ಸಂದರ್ಭದಲ್ಲಿ ದಾಂಡೇಲಿ-ಜೋಯಿಡಾ ತಾಲೂಕು ರೆಸಾರ್ಟ್ ಮತ್ತು ಹೋಂ ಸ್ಟೇ ಮಾಲಕರ ಅಸೋಶಿಯೇಶನ್ ಪದಾಧಿಕಾರಿಗಳು ಹಾಗೂ ಸದಸ್ಯರುಗಳಾದ ಇಮಾಮ್ ಸರ್ವರ್, ಉಸ್ಮಾನ್ ವಹಾಬ್ ಶೇಖ, ರಾಹುಲ್ ಬಾವಾಜಿ, ರಾಘವೇಂದ್ರ ಶೆಟ್ಟಿ, ನರಸಿಂಹ ರಾಠಿ, ಸುನೀಲ ಪಡವಳಕರ, ಕೇಶವ ಧುರೆ,  ಭರತ್, ಸ್ವರೂಪ್, ರವಿಕುಮಾರ್.ಜಿ.ನಾಯಕ, ಕರೀಂ ಖತೀಬ್,  ಅಜರುದ್ದೀನ್ ಶೇಖ್, ರಿಜ್ವಾನ್ ಶೇಖ್, ವಿಜಯ್ ಗವಸ, ಸ್ವಪ್ನಿಲ್ ಗವಸ, ರಘು ಗವಸ, ಅಲ್ತಾಫ್ ಬಸೀರಕಟ್ಟಿ, ಉಮೇಶ ಧಾರವಾಡಕರ, ಸುಭಾಷ್ ಮಾಂಜ್ರೇಕರ, ಶಿವಕುಮಾರ್ ಮಾಂಜ್ರೇಕರ, ಸೂರಜ್ ಚನ್ನಪ್ಪಗೌಡರ, ಸೂರಜ್ ಹಿರೇಗೌಡರ, ಅತುಲ್ ಮಾಡ್ದೋಳ್ಕರ, ಸುರೇಶ ದಂಡಗಲ್, ರಾಜೇಶ ವೆರ್ಣೇಕರ, ಕುಲದೀಪ್ ರಜಪೂತ್, ಗಣೇಶ ಶೇಟ್, ಸುನೀಲ ಕಮ್ಮಾರ್ ಮೊದಲಾದವರು ಉಪಸ್ಥಿತರಿದ್ದರು. ಕೊನೆಯಲ್ಲಿ ಇಮಾಮ್ ಸರ್ವರ್ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next