Advertisement
ಪಟ್ಟಣದ ಪುರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ವಾರಕ್ಕೊಂದು ವಾರ್ಡ್ ಸ್ವಚ್ಛತೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಗರಿಕರು ಈ ಮೂಲಕ ಪುರಸಭೆಯೊಂದಿಗೆ ಸಹಕರಿಸಿ ತ್ಯಾಜ್ಯ ಮುಕ್ತ ಸವಣೂರ ಸಂಕಲ್ಪಕ್ಕೆ ಮುಂದಾಗಬೇಕು ಎಂದರು. ಶುದ್ಧ ವಾತಾವರಣ ನಿರ್ಮಾಣವಾಗ ಬೇಕಾದರೆ ಸುತ್ತಮುತ್ತಲಿನ ಪರಿಸರದ ಸ್ವಚ್ಛವಾಗಿರಬೇಕು. ಇದನ್ನು ಮನದಲ್ಲಿಟ್ಟುಕೊಂಡು ಪ್ರತಿಯೊಬ್ಬರೂ ಕಸವನ್ನು ಒಂದೆಡೆ ಶೇಖರಣೆ ಮಾಡಿ ಕಸ ಸಂಗ್ರಹಣಾ ವಾಹನಕ್ಕೆ ಒಪ್ಪಿಸುವ ಮೂಲಕ ನಗರದ ಸ್ವಚ್ಛತೆಗೆ ಪುರಸಭೆ ಯೊಂದಿಗೆ ಕೈಜೋಡಿಸಬೇಕು. ಪುರಸಭೆಯಲ್ಲಿ ಕಾರ್ಯ ನಿರ್ವಹಿಸುವ ಸರ್ವ ಪೌರ ಕಾರ್ಮಿಕರು, ಸಿಬ್ಬಂದಿಯೊಂದಿಗೆ ಜನಪತ್ರಿನಿಧಿಗಳು ಹಾಗೂ ಸಮಾಜ ಸೇವಾಸಕ್ತರು ಭಾಗವಹಿಸಿ ಸ್ವಚ್ಛತೆ ಕೈಗೊಳ್ಳುವ ಮೂಲಕ ಪಟ್ಟಣದ ಸ್ವಚ್ಛತೆಗೆ ಕೈ ಜೋಡಿಸಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ವಾರಕ್ಕೊಂದು ವಾರ್ಡಿನಂತೆ, ಪಟ್ಟಣದ 27 ವಾರ್ಡ್‌ಗಳಲ್ಲಿ ಸಂಪೂರ್ಣ ಸ್ವಚ್ಛತೆಗೆ ಮೊದಲ ಹಂತದ ಕಾರ್ಯ ಆರಂಭಿಸಲಾಗಿದೆ ಎಂದು ತಿಳಿಸಿದರು.
Advertisement
ಹಸಿ ಕಸ-ಒಣ ಕಸ ಬೇರ್ಪಡಿಸಿ ಸಹಕರಿಸಿ: ಶೈಲಾ
02:47 PM Mar 24, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.