ತೋಕೂರು: ಉತ್ತಮ ಸೌಹಾರ್ದ ವಾತಾವರಣ ನಿರ್ಮಾಣ ಮಾಡಲು ಸ್ವತ್ಛತಾ ಧರ್ಮವನ್ನು ಪರಸ್ಪರ ಪಾಲಿಸೋಣ, ಗ್ರಾಮದ ಅಭಿವೃದ್ಧಿಗೆ ಕೈ ಜೋಡಿಸಿದಲ್ಲಿ ಮಾನವ ಶ್ರಮದಿಂದ ಬಾಂಧವ್ಯವೂ ಬೆಸೆಯುತ್ತದೆ ಎಂದು ತೋಕೂರು ಜಾಮೀಯಾ ಮಸೀದಿಯ ಆಡಳಿತ ಮಂಡಳಿಯ ಅಧ್ಯಕ್ಷ ಎಂ.ಎ. ವಾಹಿದ್ ಹೇಳಿದರು.
ತೋಕೂರು ಜಾಮೀಯಾ ಮಸೀದಿಯ ಅವರಣದಲ್ಲಿ ಮೇ 26ರಂದು ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ನ್ಪೋರ್ಟ್ಸ್ ಕ್ಲಬ್‌ನ ಸಂಯೋಜನೆಯಲ್ಲಿ ನಡೆದ ಸ್ವತ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ವತ್ಛತಾ ಕಾರ್ಯಕ್ರಮ
ಮಂಗಳೂರಿನ ನೆಹರೂ ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮಾರ್ಗದರ್ಶನದಲ್ಲಿ ರಮ್ಜಾನ್ ಹಬ್ಬದ ವ್ರತಾಚರಣೆಯ ಪ್ರಯುಕ್ತ ಸ್ವತ್ಛತಾ ಕಾರ್ಯಕ್ರಮ ನಡೆಸಲಾಯಿತು.
ತ್ಯಾಜ್ಯ ಸಂಗ್ರಹಣೆ
ಸ್ವಚ್ಚತಾ ಕಾರ್ಯದಲ್ಲಿ ಮಸೀದಿಯ ಹೊರಾಂಗಣ ಮತ್ತು ಸುತ್ತ ಮುತ್ತ ಗಿಡ ಗಂಟಿಗಳ ನಿವಾರಣೆ, ಪ್ಲಾಸ್ಟಿಕ್ ಸಹಿತ ತ್ಯಾಜ್ಯವನ್ನು ಸಂಗ್ರಹಿಸಲಾಯಿತು.
ಮಸೀದಿಯ ಖಲೀಲ್, ವಾಸಿಂ ಅಸ್ಸಾದಿ, ನ್ಪೋಟ್ಸ್ ಕ್ಲಬ್‌ನ ಗೌರವಾಧ್ಯಕ್ಷ ಯೋಗೀಶ್ ಕೋಟ್ಯಾನ್, ಅಧ್ಯಕ್ಷ ಪ್ರಶಾಂತ್ ಕುಮಾರ್ ಬೇಕಲ್, ಕಾರ್ಯದರ್ಶಿ ಸಂತೋಷ್ ದೇವಾಡಿಗ, ಕೋಶಾ ಧಿಕಾರಿ ದೀಪಕ್ ಸುವರ್ಣ, ಜತೆ ಕಾರ್ಯದರ್ಶಿ ಗೌತಮ್ ಬೆಲ್ಚಡ, ಕ್ರೀಡಾ ಕಾರ್ಯದರ್ಶಿ ಗಣೇಶ್ ದೇವಾಡಿಗ, ಸಾಂಸ್ಕೃತಿಕ ಕಾರ್ಯದರ್ಶಿ ಸುನಿಲ್ ಜಿ. ದೇವಾಡಿಗ, ಸದಸ್ಯರಾದ ಸುರೇಶ್ ಶೆಟ್ಟಿ, ಜಗದೀಶ್ ಕೋಟ್ಯಾನ್, ಸುರೇಶ್ ಆಚಾರ್ಯ, ಅರ್ಫಾಜ್, ಸುಭಾಷ್ ಅಮೀನ್, ವಿಶ್ವನಾಥ ಕೋಟ್ಯಾನ್, ದೀಪಕ್ ದೇವಾಡಿಗ ಮೊದ ಲಾ ದ ವರು ಪಾಲ್ಗೊಂಡಿದ್ದರು.