ಮೇಲುಕೋಟೆ: ಹೋಬಳಿಯ ಹೊಸಕೋಟೆ ಗ್ರಾಮದಲ್ಲಿರುವ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿದೆ ಎನ್ನಲಾಗುತ್ತಿರುವ ಪಾಳು ಕಲ್ಯಾಣಿಯನ್ನು ರೈತ ಸಂಘದ ಕಾರ್ಯಕರ್ತರು, ದರ್ಶನ್ ಪುಟ್ಟಣ್ಣಯ್ಯ ಅಭಿಮಾನಿಗಳು, ಪರಿಸರ ಬಳಗದ ಸದಸ್ಯರು ಹಾಗೂ ಗ್ರಾಮಸ್ಥರು ಶುಚಿಗೊಳಿಸಿ ಪರಿಸರ ಪ್ರೇಮ ಮೆರೆದರು.
1200 ವರ್ಷದ ಎನ್ನಲಾದ ಕಲ್ಯಾಣಿಯಲ್ಲಿ ಗಿಡ, ಹೂಳು ಹಾಗೂ ಕಲ್ಲು ಮಣ್ಣುಗಳಿಂದ ತುಂಬಿ ಹೋಗಿ ನಿರ್ಲಕ್ಷಿತವಾಗಿತ್ತು. ಕೆರೆಕಟ್ಟೆ, ಕಲ್ಯಾಣಿಗಳ ಮಹತ್ವದ ಬಗ್ಗೆ ಅರಿವು ಮೂಡಿಸಿ ಅವುಗಳಪುನಶ್ಚೇತನಕ್ಕೆ ಕಾರ್ಯಕ್ರಮ ರೂಪಿಸುತ್ತಿರುವಅರಕೆರೆ ಪ್ರಸನ್ನ ಎನ್.ಗೌಡ, ಪರಿಸರ ಕಾಳಜಿಹೊಂದಿರುವ ರೈತ ಸಂಘದ ಕಾರ್ಯಕರ್ತರ ಸಹಕಾರದೊಂದಿಗೆ ಮೇಲುಕೋಟೆ ಸಮೀಪದ ಕದಲಗೆರೆಯ ಕೊಳವನ್ನೂ ಸಹ ಇತ್ತೀಚೆಗೆ ಸ್ವಚ್ಛ ಮಾಡಿದ್ದರು.
ಇದೇ ಮಾದರಿ ಕಾರ್ಯ ಯೋಜನೆ ರೂಪಿಸಿಶನಿವಾರ ಬೆಳಗ್ಗೆಯಿಂದಲೇ ಹೊಸಕೋಟೆಯಕೊಳದ ಹೂಳೆತ್ತಿ, ಗಿಡಗಂಟಿಗಳನ್ನು ಸ್ವತ್ಛಗೊಳಿಸಿನೀರು ಸಂಗ್ರಹಕ್ಕೆ ಬೇಕಾದ ಎಲ್ಲ ಸೌಕರ್ಯ ಮಾಡಿದ್ದಾರೆ.
ಪುರಾತನ ಕೊಳಗಳ ಪುನಶ್ಚೇತನ:
ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಸನ್ನ, ಪುರಾತನ ಕಾಲದಲ್ಲಿ ನಿರ್ಮಿಸುತ್ತಿದ್ದ ಕಲ್ಯಾಣಿ,ಕೆರೆಕಟ್ಟೆಗಳು, ಕುಡಿಯುವ ನೀರಿನ ಸಾಮೂಹಿಕಮೂಲವಾಗುವ ಜತೆಗೆ ಮಳೆ ನೀರು ಸಂಗ್ರಹಮಾಡಿ, ಅಂತರ್ಜಲ ಹೆಚ್ಚಿಸಲು ವೈಜ್ಞಾನಿಕವಾಗಿ ನಿರ್ಮಾಣವಾಗಿದ್ದವು. ಆದರೆ ನಾವುಇವುಗಳನ್ನು ನಿರ್ಲಕ್ಷಿಸಿರುವ ಕಾರಣ ಅಂತರ್ಜಲಮಟ್ಟ ಕುಸಿಯುತ್ತಿದೆ. ಇಂಥ ಕೊಳಗಳನ್ನುಪುನಶ್ಚೇತನ ಮಾಡುವ ಕಾರ್ಯವನ್ನುಮಾಡಿದ್ದೇವೆ. ಇನ್ನಷ್ಟು ಪುರಾತನ ಕೊಳಗಳಪುನಶ್ಚೇತನ ಮಾಡುವ ಕಾರ್ಯ ಯೋಜನೆಇದೆ ಎಂದರು.
ರೈತ ಸಂಘದ ಮುಖಂಡ ಕೆ.ಟಿ.ಗೋವಿಂದೇಗೌಡ ಕೊಳದ ಹೂಳೆತ್ತುವ ಕಾರ್ಯದಲ್ಲಿ ಭಾಗಿಯಾಗಿ ಕಾರ್ಯಕರ್ತರನ್ನು ಹುರಿದುಂಬಿಸಿದರು.