ಆನೇಕಲ್: ನಮ್ಮ ಮನೆಯನ್ನು ಸ್ವಚ್ಚವಾಟ್ಟುಕೊಂಡಂತೆ ಮನೆಯ ಮುಂದಿನ ರಸ್ತೆ, ಮೈದಾನ, ಕೆರೆ ಸ್ವತ್ಛವಾಗಿಟ್ಟುಕೊಳ್ಳಬೇಕು. ಅರಣ್ಯವನ್ನು ರಕ್ಷಿಬೇಕು ಎಂದು ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನ ಸಂಸ್ಥೆ (ಪರಿಸರ ಮತ್ತು ಜೀವ ಶಾಸ್ತ್ರ ಇಲಾಖೆ)ಯ ನಿರ್ದೇಶಕ ಕೆ.ಎಚ್.ವಿನಯ್‌ಕುಮಾರ್ ಸಲಹೆ ನೀಡಿದ್ದಾರೆ.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾ® ವನ ವ್ಯಾಪ್ತಿಯಲ್ಲಿ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನ ಸಂಸ್ಥೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “”ನಾವು ನಮ್ಮ ಮನೆ ತ್ಯಾಜ್ಯವಿರಲು ಹೇಗೆ ಬಿಡುವುದಿಲ್ಲವೋ ಹಾಗೆ ರಸ್ತೆ ಬದಿಗಳಲ್ಲಿ ಕೆರೆ ಮೈದಾನಗಳಲ್ಲಿ ಅರಣ್ಯ ಪ್ರದೇಶಗಳಲ್ಲೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹಾಕದಂತೆ ನೋಡಿಕೊಳ್ಳ ಬೇಕು. ಇದು ಪ್ರತಿಯೊಬ್ಬ ನಾಗರೀಕರನ ಜವಾಬ್ದಾರಿಯಾಗಬೇಕು,”ಎಂದರು.
ಬೆಂಗಳೂರು ನಗರದಲ್ಲಿ ದಿನವೊಂದಕ್ಕೆ 40 ಸಾವಿರ ಮೆಟ್ರಿಕ್ ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಇದರಿಂದ ನಮ್ಮ ಪರಿಸರದ ಮೇಲೆ ದುಷ್ಪರಿಣಾಮವುಂಟಾಗುತ್ತಿದೆ. ಅಲ್ಲದೆ ನಾವು ಬಳಸುವ ಪ್ಲಾಸ್ಟಿಕ್ ಎಲ್ಲೆಂದರಲ್ಲಿ ಎಸೆಯುವುದರಿಂದ ಚರಂಡಿ ವ್ಯವಸ್ಥೆ ಹಾಳಾಗುತ್ತಿದೆ. ಪ್ಲಾಸ್ಟಿಕ್ ನೆಲದೊಳಗೆ ಸೇರಿ ನೀರಿನ ಮೂಲಗಳನ್ನು ಹಾನಿ ಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ಲಾಸ್ಟಿಕ್‌ನಿಂದಾಗುವ ಅನಾಹುತ, ಅದನ್ನು ಬಳಸದೆ ಇರುವುದರ ಬಗ್ಗೆ ಸಂಸ್ಥೆ ವತಿಯಿಂದ ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಕಾರ್ಯಾಗಾರ ನಡೆಸಿ ಕೊಂಡು ಬರಲಾಗುತ್ತಿದೆ. ಅದರ ಸಾಲಿನಲ್ಲಿ ಇಂದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸುವರ್ಣ ಮುಖೀ ಅರಣ್ಯ ಭಾಗದಲ್ಲಿನ ಪ್ಲಾಸ್ಟಿಕ್ ಸಂಗ್ರಹಿಸುವ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಹಾಯಕ ಅರಣ್ಯಸಂರಕ್ಷಣಾಕಾರಿ ಸುರೇಶ್ ಮಾತನಾಡಿದರು. ರಾಷ್ಟ್ರೀಯ ಉದ್ಯಾನವನದ ಉಪ ಅರಣ್ಯ ಸಂರಕ್ಷಣಾಕಾರಿ ಜಾವೇದ್ ಮಮ್ತಾಜ್, ವಲಯ ಅರಣ್ಯಾಕಾರಿ ಮುನಿತಿಮ್ಮಯ್ಯ, ಬನ್ನೇರುಘಟ್ಟ ಗ್ರಾಮದ ಮುಖಂಡ ಮಹದೇವ್, ಪಿಡಿಒ ರಮೇಶ್, ಹಿರಿಯ ತರಬೇತುದಾರ ಬಸವರಾಜು, ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನ ಸಂಸ್ಥೆ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.