Advertisement
ಇಲ್ಲಿನ ಶಾಂತಿವನದಿಂದ ಲಕ್ಷ್ಮೀನಗರ ಜಂಕ್ಷನ್‌ವರೆಗಿನ ರಸ್ತೆಯ ಎರಡೂ ಬದಿಗಳು ತಿಪ್ಪೆಗುಂಡಿಗಳಾಗಿ ಮಾರ್ಪಟ್ಟಿವೆ. ಉಡುಪಿ ನಗರಸಭಾ ವ್ಯಾಪಿಯ ಈ ರಸ್ತೆಯ ಒಂದು ಭಾಗ ಸುಬ್ರಹ್ಮಣ್ಯ ವಾರ್ಡ್, ಇನ್ನೊಂದು ಭಾಗ ಗೋಪಾಲಪುರ ವಾರ್ಡ್‌ಗೆ ಸೇರಿದೆ. ಲಕ್ಷ್ಮೀನಗರದ ಸ್ವಲ್ಪ ಮುಂದೆ ಕೊಡವೂರು ವಾರ್ಡ್‌ಗೆ ಒಳಪಟ್ಟಿದ್ದು ಎರಡೂ ಇಕ್ಕೆಲಗಳಲ್ಲಿ ವರ್ಷಪೂರ್ತಿ ಕಸದ ರಾಶಿ ಹರಡಿಕೊಂಡಿರುವುದರಿಂದ ಇಲ್ಲಿಯೂ ನಡೆದಾಡುವುದು ಅಸಹ್ಯವಾಗಿದೆ. ರಸ್ತೆಯ ಬದಿಯಲ್ಲಿ ಸಂಗ್ರಹವಾಗಿರುವ ಕಸವನ್ನು ವಿಲೇವಾರಿಗೆ ಸಂಬಂಧಪಟ್ಟ ಆಡಳಿತ ಆದ್ಯತೆ ನೀಡುತ್ತಿಲ್ಲ ಎಂದು ಆರೋಪವೂ ವ್ಯಕ್ತವಾಗಿತ್ತು.
ಕಳೆದು 5-6 ತಿಂಗಳಿನಿಂದ ಇಲ್ಲಿನ ತ್ಯಾಜ್ಯ ವಿಲೇವಾರಿಯಾಗಿರಲಿಲ್ಲ. ದುರ್ವಾಸನೆಯಿಂದಾಗಿ ರಸ್ತೆಯಲ್ಲಿ ಸಂಚರಿಸುವುದೇ ಅಸಹ್ಯವಾಗುತ್ತಿತ್ತು. ತ್ಯಾಜ್ಯ ಎಸೆಯುವವರು ಮಾತ್ರ ರಾತ್ರಿ ಹೊತ್ತು ಕಾರುಗಳಲ್ಲಿ ದ್ವಿಚಕ್ರ ವಾಹನಗಳಲ್ಲಿ ಬಂದು ರಾಜಾರೋಷವಾಗಿ ಎಸೆದು ಹೋಗುತ್ತಾರೆ. ಇಂತಹವರನ್ನು ಕಾದು ಕುಳಿತು ಹಿಡಿಯುವ ಕೆಲಸವಾಗಬೇಕು. ಇಲ್ಲವೆ ಸಿಸಿ ಕೆಮರಾ ಅಳವಡಿಸಿ ಪತ್ತೆ ಹಚ್ಚಬೇಕು. ಶಿಕ್ಷೆಗೊಳಪಡಿಸಬೇಕು.
-ರವಿ, ಲೈನ್‌ಮ್ಯಾನ್, ಶಾಂತಿನಗರ