ಕಟಪಾಡಿ: ಇಲ್ಲಿನ ಮಟ್ಟು ಬೀಚ್ ನಲ್ಲಿ ನೇಶನ್ ಫಸ್ಟ್ ಟೀಮ್ ಉಡುಪಿ ಇದರ ಸುಮಾರು 70 ಸದಸ್ಯರು ಹಾಗೂ ಸ್ಥಳೀಯರು ಸ್ವಚ್ಛತಾ ಕಾರ್ಯ ನಡೆಸಿದರು.
ಸ್ವಚ್ಛತೆಯ ಸಂದರ್ಭದಲ್ಲಿ ಮುಖ್ಯವಾಗಿ ಬೀಚ್ ನಲ್ಲಿ ಬಿಸಾಕಿದ್ದ ಪ್ಲಾಸಿಕ್, ಬೀಯರ್ ಮತ್ತು ಮದ್ಯದ ಬಾಟಲಿ ಗಳನ್ನು ತೆರವುಗೊಳಿಸಲಾಯಿತು. ಬೆಳಿಗ್ಗೆ 8 ಗಂಟೆಗೆ ಸ್ವಚ್ಛತಾ ಕಾರ್ಯಕ್ರಮ ಆರಮಭವಾಗಿದ್ದು, ಸುಮಾರು ಒಂದೂವರೆ ಕಿ. ಮೀ ತನಕ ಬೀಚ್ ಸ್ವಚ್ಛಗೊಳಿಸಲಾಯಿತು.
ಸುಮಾರು 3 ಲೋಡ್ ಗಳಷ್ಟಿದ್ದ ತಾಜ್ಯವನ್ನು ಕೋಟೆ ಗ್ರಾ.ಪಂ ಸದಸ್ಯ ನಾಗರಾಜ್ ಮೆಂಡನ್ ರವರ ಸಹಕಾರದಿಂದ ತೆರವುಗೊಳಿಸಲಾಯಿತು. ಇವರೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ ಕೋಟೆ ಗ್ರಾ.ಪಂ ನ ನಿಕಟಪೂರ್ವ ಉಪಾಧ್ಯಕ್ಷರಾದ ನ್ಯಾಯವಾದಿ ಗಣೇಶ್ ಕುಮಾರ್ ಮಟ್ಟು ಮಾತನಾಡಿ ನಾವು ಇದುವರೆಗೆ ಹಲವಾರು ಬಾರಿ ಮಟ್ಟು ಬೀಚನ್ನು ಸ್ವಚ್ಛಗೊಳಿಸಿದ್ದು ಈ ರೀತಿಯಾಗಿ 1.5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಇಷ್ಟೊಂದು ಸದಸ್ಯರು ಒಟ್ಟುಗೂಡಿ ಶ್ರದ್ದೆಯಿಂದ ಮಾಡಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಇದನ್ನೂ ಓದಿ:ನೃತ್ಯದಲ್ಲಿ ಟಾಪ್ 50ರಲ್ಲಿ ಎರಡನೇ ಸ್ಥಾನ ಗಿಟ್ಟಿಸಿಕೊಂಡ ಸುಳೇಭಾವಿ ಬಾಲಕಿಯ ಮೆಗಾ ಝಲಕ್
ಈ ಸಂದರ್ಭದಲ್ಲಿ ನೇಷನ್ ಫಸ್ಟ್ ತಂಡದ ಮಾರ್ಗದರ್ಶಕರಾದ ಪ್ರಕಾಶ್ ರಾವ್, ನಿಯೋಜಕರಾದ ಸೂರಜ್ ಕಿದಿಯೂರು, ಉಡುಪಿಯ ಎನ್ ಸಿಸಿ ಕೆಡೆಟ್, ಎಕ್ಸ್ ಆರ್ಮಿ ಕೆಡೆಟ್ ಗಳು, ಸ್ಥಳೀಯ ಬೀಚ್ ಫ್ರೆಂಡ್ಸ್ ನ ಸದಸ್ಯರಾದ ಹರ್ಷ, ಕಮಲ್, ದಿನೇಶ, ಯಶವಂತ್ ಇತರರು ಉಪಸ್ಥಿತರಿದ್ದರು.