Advertisement

ದಿನಪೂರ್ತಿ ಸಿಗಲಿ ಶುದ್ಧ ನೀರು

04:46 PM Mar 20, 2020 | Team Udayavani |

ಅಥಣಿ: ಜಿಲ್ಲೆಯಲ್ಲೇ ಅತಿ ದೊಡ್ಡ ತಾಲೂಕಾದ ಅಥಣಿಯಲ್ಲಿ ಕೆಲ ಕಡೆಗಳಲ್ಲಿ ನೀರಿನ ಕೊರತೆಯಿಂದ ಒಣಭೂಮಿಯಿದ್ದರೆ ಕೆಲವೆಡೆ ಅತಿ ಹೆಚ್ಚಿನ ನೀರಿನಿಂದಾಗಿ ಸವುಳು-ಜವುಳು ಭೂಮಿಯಿದೆ. ಬೇಸಿಗೆಯಲ್ಲಿ ಜನರಿಗೆ ನೀರಿನ ಕೊರತೆ ಹೆಚ್ಚಾಗುವುದರಿಂದ ಕುಡಿಯುವ ನೀರಿನ ಘಟಕಗಳಿಂದ ಜನರು ಶುದ್ಧ ನೀರು ಕುಡಿಯುವಂತಾಗಿದೆ.

Advertisement

ತಾಲೂಕಿನಲ್ಲಿ ಸುಮಾರು 154 ಶುದ್ಧ ಕುಡಿವ ನೀರು ಒದಗಿಸುವ ಘಟಕಗಳಿದ್ದು ಇದರಲ್ಲಿ 8 ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಕೊಟ್ಟಲಗಿ, ಕೋಹಳ್ಳಿ, ಶೆಗುಣಸಿ, ಕೊಕಟನೂರ, ಸಪ್ತಸಾಗರ (ಹಳ್ಳ), ವಿದ್ಯಾನಗರ (ಸಪ್ತಸಾಗರ), ಹಲ್ಯಾಳ, ನದಿ ಇಂಗಳಗಾವನಲ್ಲಿರುವ ಘಟಕಗಳನ್ನು ಬಿಟ್ಟು ಉಳಿದೆಲ್ಲ ಘಟಕಗಳು ಶುದ್ಧ ನೀರು ಒದಗಿಸುತ್ತಿವೆ.

ಗ್ರಾಮದ ಘಟಕ ಶಾಲೆಯ ಪಕ್ಕದಲ್ಲಿ ಇರುವುದರಿಂದ ಸಮಸ್ಯೆಯಾಗುತ್ತದೆ ಎಂಬ ಸಾರ್ವಜನಿಕರ ಒತ್ತಾಯದ ಮೇರೆಗೆ ಅದನ್ನು ಅದೇ ಗ್ರಾಮದಲ್ಲಿ ಬೇರೆ ಕಡೆಗೆ ಸ್ಥಳಾಂತರಿಸುವ ಕಾರ್ಯ  ನಡೆಯುತ್ತಿದೆ. ಶೆಗುಣಸಿ ಗ್ರಾಮ ಘಟಕದ ಸ್ಥಾಪನೆಯ ಕಾರ್ಯ ಪ್ರಗತಿಯಲ್ಲಿದೆ ಎನ್ನುವುದು ಅಧಿಕಾರಿಗಳ ಮಾಹಿತಿ.

ಆದರೆ ವಾಸ್ತವದಲ್ಲಿ ಇನ್ನೂ ಹಲವಾರು ಗ್ರಾಮಗಳಲ್ಲಿ ಸಣ್ಣಪುಣ್ಣ ಸಮಸ್ಯೆಗಳಿವೆ. ಅದು ಕಾಲ ಕಾಲಕ್ಕೆ ಸಮರ್ಪಕ ನಿರ್ವಣೆಯಿಂದಾಗಿ ಸುಸ್ಥಿತಿಯಲ್ಲಿವೆ. ಬೇಸಿಗೆ ಬಂದರೆ ಕುಡಿಯುವ ನೀರಿನ ಸಮಸ್ಯೆ ಸಾಮಾನ್ಯವಾಗಿ ಎಲ್ಲೆಡೆ ತಲೆದೋರುತ್ತದೆ. ಈ ನಿಟ್ಟಿನಲ್ಲಿ ತಾಲೂಕಾಡಳಿತ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಮರ್ಪಕ ಕಾರ್ಯ ನಿರ್ವಹಣೆಯಿಂದಾಗಿ ನಗರ ಅಷ್ಟೇ ಅಲ್ಲ ಗ್ರಾಮೀಣ ಪ್ರದೇಶದ ಜನರಿಗೆ ಆಷ್ಟೊಂದು ಪರದಾಟದ ಸ್ಥಿತಿ ಇಲ್ಲ. ಈ ಹಿಂದೆ ಕೆಆರ್‌ಐಡಿಎಲ್‌ ಅವರ ಮೇಲುಸ್ತುವಾರಿಯಲ್ಲಿ ಸುಮಾರು 109 ಘಟಕಗಳಿದ್ದು, ಉಳಿದ 45 ಘಟಕಗಳನ್ನು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದವರು ನೋಡಿಕೊಳ್ಳುತ್ತಿದ್ದರು. ನಂತರದಲ್ಲಿ ಕೆಆರ್‌ಐಡಿಎಲ್‌ನವರು ಅವೆಲ್ಲ ಘಟಕಗಳನ್ನು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದವರ ಸುಪರ್ದಿಗೆ ಒಪ್ಪಿಸಿದ್ದು, ಸದ್ಯ ಎಲ್ಲ ಘಟಕಗಳ ಮೇಲುಸ್ತುವಾರಿಯನ್ನು ಇದೇ ಇಲಾಖೆ ನಿರ್ವಹಿಸುತ್ತಿದೆ.

ಕೆಆರ್‌ಐಡಿಎಲ್‌ ಅವರ ಮೇಲುಸ್ತುವಾರಿಯಲ್ಲಿದ್ದ ಸುಮಾರು 109 ಘಟಕಗಳನ್ನು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದವರಿಗೆ ಒಪ್ಪಿಸಿದ್ದರಿಂದ ಆ 109 ಘಟಕಗಳನ್ನು ಆಯಾ ಗ್ರಾಮ ಪಂಚಾಯತಿಯವರು ನಿರ್ವಹಣೆ ಮಾಡುತ್ತಿದ್ದಾರೆ. ಉಳಿದ 45 ಘಟಕಗಳನ್ನು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದವರು ಮೊದಲೇ ನೀಡಿದ್ದ ಏಜೆನ್ಸಿಯವರು ನಿರ್ವಹಣೆ ಮಾಡುತ್ತಿದ್ದಾರೆ.

Advertisement

ಏಜೆನ್ಸಿಗಳು ನೀರಿನ ಘಟಕಗಳ ಮೇಲುಸ್ತುವಾರಿಯನ್ನು ನೋಡುತ್ತಿರುವುದರಿಂದ ಇಲ್ಲಿಯವರೆಗೆ ಅಷ್ಟೇನೂ ಸಮಸ್ಯೆಗಳಾಗಿಲ್ಲ ಈಗಾಗಲೇ ಸ್ಥಗಿತಗೊಂಡ 8 ಘಟಕಗಳನ್ನು ಶೀಘ್ರ ಪ್ರಾರಂಭಿಸಿ ಶುದ್ಧ ನೀರನ್ನು ಒದಗಿಸಲಾಗುತ್ತದೆ. ಕೆಆರ್‌ಐಡಿಎಲ್‌ ಅವರಿಂದ ನಿರ್ಮಿತವಾದ 109 ಘಟಕಗಳ ನಿರ್ವಹಣೆಯ ಟೆಂಡರ್‌ಪ್ರಕ್ರಿಯೆ ಶೀಘ್ರ ಮುಗಿಸಿ ಗುಣಮಟ್ಟದ ನೀರು ನೀಡಲಾಗುವುದು.  –ವೀರಣ್ಣಾ ವಾಲಿ, ಎಇಇ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗ, ಅಥಣಿ

 

-ಸಂತೋಷ ರಾ ಬಡಕಂಬಿ

Advertisement

Udayavani is now on Telegram. Click here to join our channel and stay updated with the latest news.

Next