Advertisement

ಸೌಲಭ್ಯ ಕಲ್ಪಿಸಲು ಸಹಕಾರ ಸಂಘ ಪೂರಕ

12:49 PM Nov 20, 2020 | Suhan S |

ಹೊಸಕೋಟೆ: ಹಾಲು ಉತ್ಪಾದಕರ ಹಿತ ಕಾಪಾಡುವುದರೊಂದಿಗೆ ಗ್ರಾಮಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಲ್ಲಿ ಸಹಕಾರ ಸಂಘ ಗಳ ಪಾತ್ರ ಅಭಿ ನಂದನಾರ್ಹ ಎಂದು ಶಾಸಕ ಶರತ್‌ ಬಚ್ಚೇಗೌಡ ಹೇಳಿದರು. ತಾಲೂಕಿನ ಓಬಳಹಳ್ಳಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು.

Advertisement

ಕೇವಲ ಹೈನುಗಾರಿಕೆಯನ್ನು ಪ್ರೋತ್ಸಾಹಿಸುವುದ ರೊಂದಿಗೆ ಗ್ರಾಮ ಸ್ಥರ ಆರೋಗ್ಯ ಕಾಪಾಡಿಕೊಳ್ಳಲು ಅನುವಾಗುವಂತೆ ಶುದ್ಧ ಕುಡಿಯುವ ನೀರಿನ ಘಟಕ ವನ್ನು ಸ್ಥಾಪಿಸುವ ಮೂಲಕ ಸಾಮಾಜಿಕ ಕಾಳಜಿಯನ್ನು ಪ್ರದರ್ಶಿಸಿದಂತಾಗಿದೆ ಎಂದರು.

ತಾಲೂಕಿನಲ್ಲಿ ಈಗಾಗಲೇ ತಮ್ಮ ಸ್ವಂತ ವೆಚ್ಚದಲ್ಲಿ ಹಾಗೂ ದಾನಿಗಳ ಸಹಕಾರದೊಂದಿಗೆ 100ಕ್ಕೂ ಹೆಚ್ಚು ಘಟಕಗಳನ್ನು ಪ್ರಾರಂಭಿಸಿ ಅನು ಕೂಲ ಕಲ್ಪಿಸಲಾಗಿದೆ.ಸಂಘವು ಗಳಿಸಿದ ಲಾಭಾಂಶದಲ್ಲಿ ಗ್ರಾಮಗಳ ಬೆಳವಣಿಗೆಗೂ ಸಹ ಗಮನಹರಿಸಲಾಗುತ್ತಿದೆ. ನೀರು ಅತ್ಯ ಮೂಲ್ಯವಾದ ನೈಸರ್ಗಿಕ ಸಂಪತ್ತಾಗಿದ್ದು ಮಿತವಾಗಿ ಬಳಸಬೇಕಾದ್ದು ಅತ್ಯವಶ್ಯ ವಾಗಿದೆ ಎಂದು ತಿಳಿಸಿದರು. ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದಾಗಲೂ ಅಂತರ್ಜಲ ಮಟ್ಟದಲ್ಲಿ ನಿರೀಕ್ಷಿತ ಸುಧಾರಣೆ ಕಂಡು ಬಂದಿಲ್ಲ. ಈಗಲೂ ಸಹ ಕೊಳವೆಬಾವಿಗಳಿಂದ ನೀರು ಪಡೆಯಲು 2 ಸಾವಿರ ಅಡಿಗಳಷ್ಟು ಕೊರೆಯಬೇಕಾದ ಪರಿಸ್ಥಿತಿಯಿದೆ ಎಂದರು.

ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಸಿ. ಮಂಜುನಾಥ್‌ ಮಾತನಾಡಿ, ತಾಲೂಕಿನಲ್ಲಿರುವ 198 ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಪ್ರತಿದಿನ 1.5 ಲಕ್ಷ ಲೀ.ಗಳಷ್ಟು ಹಾಲು ಸಂಗ್ರಹಗೊಳ್ಳುತ್ತಿದ್ದು ಗುಣಮಟ್ಟ ಕಾಪಾಡಿಕೊಳ್ಳಲು ಆದ್ಯತೆ ನೀಡಲಾಗಿದೆ. ಒಕ್ಕೂಟದ ವ್ಯಾಪ್ತಿಯಲ್ಲಿನ 175ರಲ್ಲಿ ತಾಲೂಕಿನಲ್ಲಿ ಇದುವರೆವಿಗೂ 49 ಶುದ್ಧ ಕುಡಿಯುವ ನೀರಿನ ಘಟಕ ಗಳು ಕಾರ್ಯನಿರ್ವಹಿಸುತ್ತಿದ್ದು 2 ಲಕ್ಷ ರೂ.ಗಳ ಸಹಾಯಧನ ಸಹ ನೀಡಲಾಗುತ್ತಿದೆ. ಒಕ್ಕೂಟದಿಂದ ಕೋವಿಡ್ ಸೋಂಕು ತಡೆಗಟ್ಟುವ ಸಲುವಾಗಿ ಎಲ್ಲಾ 298ಗ್ರಾಮಗಳಲ್ಲೂಸಹಸೋಡಿಯಂಹೈಪೊಕ್ಲೋರೈಟ್‌ ರಾಸಾಯನಿಕ ದ್ರಾವಣ ಸಿಂಪಡಿಸುವ ಕಾರ್ಯ ಸಹ ಕೈಗೊಳ್ಳಲಾಗಿತ್ತು ಎಂದರು.

ಉತ್ಪಾದಕರಿಗೆ ರಿಯಾಯಿತಿ ದರದಲ್ಲಿ ಪಶು ಆಹಾರ ಒಳಗೊಂಡಂತೆ ವಿಮಾ ಯೋಜನೆಗೆ ನೋಂದಣಿಗೂ ಸಹ ಅವಕಾಶ ಮಾಡಿಕೊಡ ಲಾಗಿದೆ. ಕಳೆದ 6-7 ತಿಂಗಳುಗಳಲ್ಲಿ ಹಾಲಿನ ಮಾರಾಟ ಸಹ ಕಡಿಮೆಯಾಗಿದ್ದಾಗ್ಯೂ ಸಹ ಉತ್ಪಾದಕರ ಹಿತ ಕಾಪಾಡುವ ಉದ್ದೇಶದಿಂದ ನಿರಂತರವಾಗಿ ಹಾಲು ಸಂಗ್ರಹಣೆ ಮಾಡಲಾಗುತ್ತಿದೆ. ಪರಿಸ್ಥಿತಿ ಇದೀಗ ಸುಧಾರಣೆಗೊಳ್ಳುತ್ತಿದ್ದು ಮಾರಾಟ ದರ ಏರಿಕೆ‌ ಮಾಡಿದ್ದಲ್ಲಿ ಉತ್ಪಾದಕರಿಗೂ ಹೆಚ್ಚಳ ಮಾಡಲಾಗುವುದು ಎಂದು ತಿಳಿಸಿದರು.

Advertisement

ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸಿದ್ದಲಿಂಗಾರಾಧ್ಯ ಸ್ಥಾಪಿಸಲು ಸೂಲಿಬೆಲೆ ಹೋಬಳಿ ರಾಂಪುರ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಧರ್ಮೇಶ್‌, ತಾಪಂ ಮಾಜಿ ಅಧ್ಯಕ್ಷ ಟಿ.ಎಸ್‌. ರಾಜಶೇಖರ್‌, ಗ್ರಾಪಂ ಮಾಜಿ ಉಪಾಧ್ಯಕ್ಷ ಜಗದೀಶ್‌, ಬೆಂಗಳೂರು ಹಾಲು ಒಕ್ಕೂಟದ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ವಿಜಯಭಾಸ್ಕರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next