Advertisement

ಕಡಲ ತೀರದಲ್ಲಿ ಸರಕಾರಿ ಅಧಿಕಾರಿಗಳಿಂದ ಸ್ವಚ್ಛತಾ ಸಂಕಲ್ಪ

10:57 AM Jun 02, 2018 | Team Udayavani |

ಮಹಾನಗರ: ಕರಾವಳಿ ಯ ಪ್ರವಾಸೋದ್ಯಮದ ಪ್ರಮುಖ ತಾಣಗಳಾಗಿರುವ ಸಮುದ್ರ ತೀರಗಳನ್ನು (ಬೀಚ್‌)ಸ್ವಚ್ಛವಾಗಿಡುವ ಉದ್ದೇಶ ದಿಂದ ಸರಕಾರಿ ಅಧಿಕಾರಿಗಳೇ ಇದೀಗ ಫೀಲ್ಡಿಗೆ ಇಳಿದಿ ದ್ದಾರೆ. ತಲಪಾಡಿಯಿಂದ ಸಸಿಹಿತ್ಲು ವರೆಗಿನ ಎಲ್ಲ ಬೀಚ್‌ಗಳನ್ನು ಪ್ಲಾಸ್ಟಿಕ್‌ ಮುಕ್ತವಾಗಿಸುವ ಜತೆಗೆ ಸ್ವಚ್ಛ ತೆ ಕಾಪಾಡುವ ಉದ್ದೇಶದಿಂದ ಸರಕಾರಿ ಅಧಿಕಾರಿಗಳು, ವಿವಿಧ ಸಂಘ- ಸಂಸ್ಥೆ ಹಾಗೂ ಶಾಲಾ ಮಕ್ಕಳ ಸಹಕಾರದೊಂದಿಗೆ ವಿಶೇಷ ಅಭಿಯಾನವನ್ನು ಆಯೋಜಿಸಿದ್ದಾರೆ.

Advertisement

ಈ ವರ್ಷದ ‘ವಿಶ್ವ ಪರಿಸರ ದಿನಾಚರಣೆ’ಗೆ ಭಾರತವು ಅತಿಥೇಯ ರಾಷ್ಟ್ರವಾಗಿದ್ದು, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯ ಹಾಗೂ ಕರ್ನಾಟಕ ಸರಕಾರದ ಅರಣ್ಯ, ಪರಿಸರ ಜೀವಿಶಾಸ್ತ್ರ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ದ.ಕ. ಜಿಲ್ಲಾಡಳಿತ, ಮೀನುಗಾರಿಕಾ ಮಹಾವಿದ್ಯಾಲಯ ಹಾಗೂ ಮಂಗಳೂರಿನ ಸಹ್ಯಾದ್ರಿ ಕಾಲೇಜ್‌ ಅಫ್‌ ಎಂಜಿನಿಯರಿಂಗ್‌ ಮ್ಯಾನೇಜ್‌ಮೆಂಟ್‌ ಸಹಯೋಗದೊಂದಿಗೆ ದ.ಕ. ಜಿಲ್ಲೆಯಲ್ಲಿ ವಿಶ್ವ ಪರಿಸರ ದಿನವನ್ನು ಜೂ. 1ರಿಂದ 5ರ ವರೆಗೆ ಆಚರಿಸಲಾಗುತ್ತದೆ.

11 ದಿನಗಳ ಸ್ವಚ್ಛತಾ ಕಾರ್ಯ
ಇದರಂತೆ ಕರಾವಳಿಯ ಪಣಂಬೂರು ಬೀಚನ್ನು ಸ್ವಚ್ಛಗೊಳಿಸಲು ಮೊದಲಿಗೆ ನಿರ್ಧರಿಸಲಾಗಿತ್ತು. ಆದರೆ, ಕರಾವಳಿ ಭಾಗದಲ್ಲಿ ಸೋಮೇಶ್ವರ, ಉಳ್ಳಾಲ, ಪಣಂಬೂರು, ಸಸಿಹಿತ್ಲು, ತಣ್ಣೀರುಬಾವಿ ಸೇರಿದಂತೆ ಹಲವು ಬೀಚ್‌ಗಳು ಇರುವ ಕಾರಣದಿಂದ ಈ ಎಲ್ಲ ಬೀಚ್‌ಗಳ ಸ್ವಚ್ಛತೆ ಕೈಗೊಳ್ಳುವ ಬಗ್ಗೆ ದಕ್ಷಿಣ ಕನ್ನಡದ ಆಡಳಿತ ವ್ಯವಸ್ಥೆ ಗಮನಹರಿಸಿದ ಹಿನ್ನೆಲೆಯಲ್ಲಿ 5 ದಿನದ ಕಾರ್ಯಕ್ರಮವನ್ನು 11 ದಿನಗಳವರೆಗೆ ಮಾಡಲು ನಿರ್ಧರಿಸಲಾಗಿದೆ. ಜತೆಗೆ
ಈ ಸ್ವತ್ಛತಾ ಆಂದೋಲನ 11 ದಿನದ ಅನಂತರವೂ ಮುಂದುವರಿಸುವ ಬಗ್ಗೆಯೂ ಚಿಂತಿಸಲಾಗಿದೆ.

ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ವಿವಿಧ ಸರಕಾರಿ ಇಲಾಖೆಗಳು, ಸಂಘ-ಸಂಸ್ಥೆಗಳು, ಶಾಲಾ- ಕಾಲೇಜುಗಳು, ಸ್ವಸಹಾಯ ಗುಂಪುಗಳು ಕಡಲ ತೀರಗಳಲ್ಲಿ ಸಂಗ್ರಹಣೆ ಗೊಂಡಿರುವ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಸ್ವಚ್ಛಗೊಳಿಸುವುದರ ಜತೆಗೆ ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿ ಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜಿಲ್ಲೆಯ ವಿವಿಧ ಪರಿಸರ ಸಂರಕ್ಷಣಾ ಮನೋವೃತ್ತಿಯವರು, ಸಂಘ-ಸಂಸ್ಥೆಗಳು, ಶಾಲಾ -ಕಾಲೇಜುಗಳು, ಸ್ವಸಹಾಯ ಗುಂಪುಗಳು ಪರಿಸರ ಸಂರಕ್ಷ ಣೆಯ ಹಿತದೃಷ್ಟಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತದೆ.

‘ಪ್ಲಾಸ್ಟಿಕ್‌ ಮಾಲಿನ್ಯ ಹಿಮ್ಮೆಟ್ಟಿಸಿ’
ಈ ಸಾಲಿನ ವಿಶ್ವ ಪರಿಸರ ದಿನಾಚರಣೆಯನ್ನು ‘ಪ್ಲಾಸ್ಟಿಕ್‌ ಮಾಲಿನ್ಯ ಹಿಮ್ಮೆಟ್ಟಿಸಿ’ ಎಂಬ ಘೋಷ ವಾಕ್ಯದೊಂದಿಗೆ ಆಚರಿಸಲು ನಿರ್ಧರಿಸಲಾಗಿದೆ.

Advertisement

ಬೆಳಗ್ಗೆ 8ರಿಂದ 10.30ರ ವರೆಗೆ
ಶುಕ್ರವಾರ ಬೆಳಗ್ಗೆ 8ರಿಂದ ಪಣಂಬೂರು ಬೀಚ್‌ನಲ್ಲಿ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುಮಾರು 150ರಿಂದ 200ರಷ್ಟು ಜನರು ಇದರಲ್ಲಿ ಪಾಲ್ಗೊಂಡಿದ್ದರು. ಮುಂದೆ 11 ದಿನವೂ ಬೆಳಗ್ಗೆ 8ರಿಂದ 10.30ರ ವರೆಗೆ ಕರಾವಳಿಯ ಬೇರೆ ಬೇರೆ ಬೀಚ್‌ನಲ್ಲಿ ಸ್ವಚ್ಛತೆ ಆಯೋಜಿಸಲಾಗುತ್ತದೆ. ಸಂಘ-ಸಂಸ್ಥೆ ಹಾಗೂ ಶಾಲಾ ಮಕ್ಕಳು ಇದರಲ್ಲಿ ವಿಶೇಷವಾಗಿ ಪಾಲ್ಗೊಳ್ಳಲಿದ್ದಾರೆ. ಮುಖ್ಯವಾಗಿ ಅರಣ್ಯ, ಪರಿಸರ ಜೀವೀಶಾಸ್ತ್ರ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಸ್ವಚ್ಛತಾ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next