Advertisement
ಧ್ವಜಾರೋಹಣ, ವೇದಮಂತ್ರ ಘೋಷದ ಮೂಲಕ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆ ಕೇಂದ್ರೀಯ ಸಮಿತಿಯ ಮಾಜಿ ಅಧ್ಯಕ್ಷ ಉಮೇಶ ಡಿ.ಕೆ. ಉದ್ಘಾಟಿಸಿ, ಜನರಲ್ಲಿ ಸ್ವಚ್ಛತೆಯ ಅರಿವು ಮೂಡಿಸಬೇಕು. ಸ್ವಚ್ಛತೆ ಎಂದರೆ ಕಸ ಹೆಕ್ಕುವುದು ಮಾತ್ರವಲ್ಲ, ಕಸ ಹಾಕದೆ ಇರುವುದು ಕೂಡ. ಕಸ ಹಾಕುವುದರಿಂದ ಪರಿಸರದ ಸ್ವಚ್ಛತೆಯನ್ನು ಹಾಳು ಮಾಡುತ್ತಿದ್ದೇವೆ. ಪ್ರತಿಯೊಂದು ಮನೆಯಲ್ಲೂ ಸ್ವಚ್ಛತೆಯ ಕುರಿತು ಗಮನ ಕೊಡಬೇಕು ಎಂದರು.
ಪಾಣಾಜೆ ಸುಬೋಧ ಶಾಲೆ ನಿವೃತ್ತ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಶಾಸ್ತ್ರಿ ಮಾತನಾಡಿ, ಮೊಟ್ಟೆತಡ್ಕದ ಪರಿಸರದಲ್ಲಿ ಉತ್ತಮ ಪರಿಸರವಿದ್ದರೆ ಆದರ್ಶ ಗ್ರಾಮ ವಾಗುವ ಎಲ್ಲ ಸಾಧ್ಯತೆಗಳಿವೆ. ಆದರೆ ನಿರ್ಲಕ್ಷ ್ಯದಿಂದ ಈ ಪ್ರದೇಶ ಮಲಿನ ಗೊಂಡಿದೆ. ಉತ್ತಮ ಪರಿಸರ, ಹೆಚ್ಚು ಜನವಸತಿ ಇರುವ ಈ ಪ್ರದೇಶದ ಅಭಿವೃದ್ಧಿಗಾಗಿ, ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವುದಕ್ಕಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ನಗರಸಭೆ ಸದಸ್ಯರಾದ ಪಿ.ಜಿ. ಜಗನ್ನಿವಾಸರಾವ್ ಮತ್ತು ಶೈಲಾ ಪೈ, ಪ್ರಮುಖರಾದ ಬಾಲಚಂದ್ರ ರಾವ್, ಗಣೇಶ್ ಆಚಾರ್ಯ, ಚಂದ್ರಶೇಖರ್ ಭಟ್, ನರೇಂದ್ರ ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಹರಿಣಿ ಪುತ್ತೂರಾಯ, ಶಂಕರ್‌ಮಲ್ಯ, ಜಿ. ಕೃಷ್ಣ, ಅಂಬಿಕಾ ಪ. ಪೂ. ವಿದ್ಯಾಲಯದ ಉಪನ್ಯಾಸಕ ಶ್ರೀಕೃಷ್ಣ ಉಪಾಧ್ಯಾಯ ಮತ್ತು ದುರ್ಗಾ ಪರಮೇಶ್ವರ, ವಿನೋದ್ ಆಚಾರ್ಯ, ಮನೋಜ್, ಅಶ್ವತ್, ಸಂದೀಪ್ ಲೋಬೊ, ಹರ್ಷೇಂದ್ರ, ಕೃಷ್ಣ ಭಟ್, ಎಂ.ಜಿ. ನಾಯಕ್, ಯೋಗೀಶ್, ಸೀತಾರಾಮಾಚಾರ್ಯ ಹಾಗೂ ಹರಿಣಾಕ್ಷಿ, ಜೈನಾಬಿ, ಭಾರತಿ, ವಿದ್ಯಾರ್ಥಿ ಜಿತೇಶ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Related Articles
Advertisement