Advertisement
ಜಪ್ಪಿನಮೊಗರು ರಾಷ್ಟ್ರೀಯ ಹೆದ್ದಾರಿಯ ಲ್ಲಿರುವ ನೂತನವಾಗಿ ನಿರ್ಮಿಸಲಾದ ಬಸ್ ತಂಗುದಾಣದ ಮುಂಭಾಗದಲ್ಲಿ 27ನೇ ಶ್ರಮದಾನಕ್ಕೆ ರಾಮಕೃಷ್ಣ ಮಿಷನ್‌ನ ‘ವೇದಾಂತ ಕೇಸರಿ’ ಮಾಸಪತ್ರಿಕೆಯ ಪ್ರಧಾನ ಸಂಪಾದಕ ಸ್ವಾಮಿ ಮಹಾಮೇಧಾನಂದಜಿ ಅವರು ಚಾಲನೆ ನೀಡಿದರು.
Related Articles
Advertisement
ಶ್ರಮದಾನಕ್ಕೆ ಚಾಲನೆ ನೀಡಿದ ಸ್ವಾಮಿ ಮಹಾಮೇಧಾನಂದಜಿ ಅವರು ಮಾತ ನಾಡಿ, ಸಮಾಜದ ಉನ್ನತಿಗಾಗಿ ಮನುಷ್ಯ ತನ್ನ ಸ್ವಾರ್ಥವನ್ನು ತ್ಯಾಗ ಮಾಡಬೇಕಾಗುತ್ತದೆ. ನಾವು ಒಳ್ಳೆಯವರಾಗಿದ್ದರೆ ಸಾಲದು ನಮ್ಮ ಸುತ್ತಲಿನವರನ್ನು ಒಳ್ಳೆಯವರನ್ನಾಗಿ ಮಾಡಲು ಪ್ರಯತ್ನಿಸಬೇಕು. ನಿಸ್ವಾರ್ಥ ಜನರು ಮಂಗಳೂರಿನ ಸ್ವಚ್ಛತೆಯಲ್ಲಿ ಒಂದು ತಂಡವಾಗಿ ಕಾರ್ಯ ನಿರ್ವಹಿಸು ತ್ತಿರುವುದರಿಂದ ನಗರ ಸ್ವಚ್ಛವಾಗಿ ಕಾಣಲು ಸಾಧ್ಯವಾಗಿದೆ. ದೇಶಾದ್ಯಂತ ಇರುವ ಎಲ್ಲ ರಾಮಕೃಷ್ಣ ಮಿಷನ್ ಕೇಂದ್ರಗಳಿಗೆ ಸ್ವಚ್ಛ ಮಂಗಳೂರು ಎಂಬ ಮಾದರಿ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ಮಂಗಳೂರಿಗೆ ಸಲ್ಲಬೇಕು ಎಂದು ಹೇಳಿ ಶುಭ ಹಾರೈಸಿದರು.
ಶ್ರಮದಾನ
ಜಪ್ಪಿನಮೊಗರು ರಾಷ್ಟ್ರೀಯ ಹೆದ್ದಾರಿಯ ಬದಿಗಳು ಕಟ್ಟಡ, ಪ್ಲಾಸ್ಟಿಕ್ ತ್ಯಾಜ್ಯದಿಂದ ತುಂಬಿ ಅಸಹ್ಯ ಹುಟ್ಟಿಸುತ್ತಿದ್ದವು. ಪರಿಸರ ವನ್ನು ಸ್ವಚ್ಛಗೊಳಿಸಲಾಯಿತು. ಸ್ವಯಂ ಸೇವಕರು ಜಪ್ಪು ರಸ್ತೆಯಲ್ಲಿರುವ ಹಳೆ ಬಸ್ ತಂಗುದಾಣದ ಸುತ್ತಮುತ್ತ ಹಾಗೂ ನೂತನವಾಗಿ ನಿರ್ಮಿಸಿದ ಬಸ್ ತಂಗುದಾಣದ ಹಿಂಭಾಗ, ಬದಿಗಳನ್ನು ಸ್ವಚ್ಛಗೊಳಿಸಿದರು. ಸ್ವಚ್ಛ ಎಕ್ಕೂರು ತಂಡ ಯಶೋಧರ ಚೌಟ, ಪ್ರಶಾಂತ ಎಕ್ಕೂರ್ ನೇತೃತ್ವದಲ್ಲಿ ನೇತ್ರಾವತಿ ಸೇತುವೆಯ ಬದಿಗಳನ್ನು ಸ್ವಚ್ಛಗೊಳಿಸಿತು. ಸಿಟಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಜೆಸ್ಲಿ ಬಾರ್ವಿನ್, ಹರ್ಷ ಎಲಿಜಬೆತ್ ಮಾರ್ಗದರ್ಶನದಲ್ಲಿ ತೋಡುಗಳಲ್ಲಿದ್ದ ಪ್ಲಾಸ್ಟಿಕ್ ಹಾಗೂ ಕಲ್ಲು , ಮಣ್ಣು ತೆಗೆದು ಶುಚಿ ಮಾಡಿದರು.
ಜಪ್ಪಿನಮೊಗರು ಹೆದ್ದಾರಿಯಲ್ಲಿ ಬಸ್ ಪ್ರಯಾಣಿಕರಿಗೆ ತಂಗುದಾಣ ಇಲ್ಲದೆ ರಸ್ತೆ ಬದಿಯಲ್ಲಿ ನಿಂತುಕೊಳ್ಳಬೇಕಾದ ಪರಿಸ್ಥಿತಿ ಇತ್ತು. ಅಲ್ಲದೇ ಅದು ಅಪ ಘಾತಕ್ಕೆ ಆಹ್ವಾನವನ್ನೂ ನೀಡುತ್ತಿತ್ತು. ಪೊಲೀಸ್ ಇಲಾಖೆಯ ಕೋರಿಕೆ, ಜನರ ಮನವಿಯ ಮೇರೆಗೆ ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದಡಿ ಅಲ್ಲಿ ಇದೀಗ ನೂತನವಾಗಿ ಬಸ್ ತಂಗುದಾಣವನ್ನು ನಿರ್ಮಿಸಿ ಕೊಟ್ಟಿದೆ. ಸ್ವಚ್ಛತೆಯ ಸಂದೇ ಶ ಸಾರುವ ಬೋರ್ಡುಗಳನ್ನು ತಂಗು ದಾಣದಲ್ಲಿ ಅಳವಡಿಸಲಾಗಿದೆ. ಅಭಿಯಾನ ದ ಪ್ರಧಾನ ಸಂಯೋಜಕ ದಿಲ್ರಾಜ್ ಆಳ್ವ ಮುತುವರ್ಜಿಯಲ್ಲಿ ತಂಗುದಾಣ ನಿರ್ಮಾಣವಾಗಿದೆ. ಎಂಆರ್‌ಪಿಎಲ್ ಸಂಸ್ಥೆ ಆರ್ಥಿಕ ನೆರವು ಒದಗಿಸಿ ಸಹಕರಿಸಿದೆ.
ಬಸ್ ತಂಗುದಾಣ ನಿರ್ಮಾಣ ಮಾಡಬೇಕಾಗಿದ್ದ ಸ್ಥಳದಲ್ಲಿ ಹಳೆಯ ಕಟ್ಟಡ ತ್ಯಾಜ್ಯ ಸುರಿದಿದ್ದರು. ಕಳೆದ ಒಂದು ವಾರದಿಂದ ಅದನ್ನೆಲ್ಲ ತೆಗೆದು ಆ ಸ್ಥಳವನ್ನು ಸಮತಟ್ಟುಗೊಳಿಸಿ ಬಸ್ ತಂಗುದಾಣವನ್ನು ನಿರ್ಮಿಸಲಾಗಿದೆ. ಇಂದು ಕೂಡ ಕಟ್ಟಡ, ಪ್ಲಾಸ್ಟಿಕ್ ತ್ಯಾಜ್ಯವನ್ನು ತೆಗೆದು ಜಾಗವನ್ನು ಸಮತಟ್ಟು ಮಾಡಲಾಯಿತು.