Advertisement
ಸ್ಮಾರ್ಟ್ ಸಿಟಿ ಮಂಗಳೂರು ಇದರ ಪ್ರಧಾನ ವ್ಯವಸ್ಥಾಪಕ ಡಿ.ಮಹೇಶ್ ಕುಮಾರ್, ಶಿಕ್ಷಕಿ ರಾಜೀವಿ ಚಂದ್ರಶೇಖರ್ ಶ್ರಮದಾನಕ್ಕೆ ಹ್ಯಾಮಿಲ್ಟನ್ ವೃತ್ತದ ಬಳಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
Related Articles
Advertisement
ಮತ್ತೂಂದೆಡೆ ಹಳೆಯ ಬಂದರು ರಸ್ತೆಯಲ್ಲಿ ಮೆಹಬೂಬ್ ಖಾನ್, ಅವಿನಾಶ್ ಅಂಚನ್ ಹಾಗೂ ಕಾರ್ಯಕರ್ತರು ಶ್ರಮದಾನ ಕೈಗೊಂಡರು. ಉಮಾಕಾಂತ್ ಸುವರ್ಣ ನೇತೃತ್ವದಲ್ಲಿ ಕಾರ್ಯಕರ್ತರು ಆಲ್‌ಬದ್ರಿಯಾ ಕಾಲೇಜು ಎದುರಿನ ತ್ಯಾಜ್ಯ ರಾಶಿಯನ್ನು ಶುಚಿಗೊಳಿಸಿ ಅಲ್ಲಿ ಹೂಕುಂಡಗಳನ್ನಿಟ್ಟರು. ಬಂದರು ಪ್ರದೇಶದಲ್ಲಿದ್ದ ತ್ಯಾಜ್ಯರಾಶಿಗಳನ್ನು ಜೆಸಿಬಿ ಸಹಾಯದಿಂದ ತೆರವು ಮಾಡಲಾಯಿತು. ಆ ಜಾಗದಲ್ಲಿ ಆಲಂಕಾರಿಕ ಹೂಕುಂಡ ಗಳನ್ನಿಡಲಾಗಿದೆ.
ಸ್ವಚ್ಛಗೊಳಿಸಿದ ಸ್ಥಳಗಳಲ್ಲಿ ಮತ್ತೆ ಸಾರ್ವಜನಿಕರು ಕಸ ತಂದು ಸುರಿಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸ್ವಚ್ಛತಾ ಯೋಧರು ಗಸ್ತು ತಿರುಗಲಿದ್ದಾರೆ. ಜತೆಗೆ ಹತ್ತಿರದ ಅಂಗಡಿಮುಂಗಟ್ಟುಗಳಿಗೆ ತೆರಳಿ ಮಾರ್ಗಗಳ ಬದಿಯಲ್ಲಿ ಕಸ ಎಸೆಯದಂತೆ ಮನವಿ ಮಾಡಿದ್ದಾರೆ.
ಬಸ್ ತಂಗುದಾಣ ನಿರ್ವಹಣೆರಾಮಕೃಷ್ಣ ಮಿಷನ್‌ನಿಂದ ನಿರ್ಮಿಸಿದ್ದ ಪಡೀಲ್ ಪ್ರಯಾಣಿಕರ ತಂಗುದಾಣವನ್ನು ಸ್ವಯಂಸೇವಕರು ಪುನೀತ್ ಪೂಜಾರಿ ನೇತೃತ್ವದಲ್ಲಿ ಶುಚಿಗೊಳಿಸಿದರು. ಆಸನಗಳಿಗೆ ಬಣ್ಣಬಳಿದು, ನೆಲವನ್ನು ತೊಳೆದು, ಸ್ವಚ್ಛತೆ ಸಂದೇಶದ ಫ್ಲೆಕ್ಸ್ ಅಳವಡಿಸಲಾಯಿತು. “ಕಸದ ಬುಟ್ಟಿ ಉಪಯೋಗಿಸಿ ಸ್ವಚ್ಛತೆಯಲ್ಲಿ ಕೈಜೋಡಿಸಿ’ ಅಭಿಯಾನ ಸಂಪನ್ನ ರಾಮಕೃಷ್ಣ ಮಿಷನ್ ವತಿಯಿಂದ ಹಮ್ಮಿಕೊಂಡ ಕಸದಬುಟ್ಟಿ ಉಪಯೋಗಿಸಿ ಸ್ವಚ್ಛತೆಯಲ್ಲಿ ಕೈಜೋಡಿಸಿ’ ಅಭಿಯಾನದಡಿ ಒಟ್ಟು 500 ಕಸದ ಬುಟ್ಟಿಗಳನ್ನು ನಗರದ ವಿವಿಧೆಡೆಯಲ್ಲಿ ಸಣ್ಣ ಮತ್ತು ಮಧ್ಯಮ ವರ್ಗದ ವ್ಯಾಪಾರಿ ಮಳಿಗೆಗಳಿಗೆ ನೀಡಲಾಯಿತು. ಕಸದ ಬುಟ್ಟಿ ವಿತರಣೆಯ ಜತೆಗೆ ಜಾಗೃತಿ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಯಿತು. ಸತತ ಒಂದು ತಿಂಗಳುಗಳ ಕಾಲ ಈ ಕಾರ್ಯಕ್ರಮ ಜರುಗಿ ಈ ವಾರ ಸಂಪನ್ನವಾಯಿತು. ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಈ ಎಲ್ಲ ಚಟುವಟಿಕೆಗಳಿಗೆ ಎಂ.ಆರ್.ಪಿ.ಎಲ್ ಸಂಸ್ಥೆ ಪ್ರಾಯೋಜಕತ್ವ ನೀಡಿ ಪ್ರೋತ್ಸಾಹಿಸುತ್ತಿದೆ.