Advertisement
ಜತೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧದ ಆರೋಪವನ್ನೂ ಆಯೋಗ ಇತ್ಯರ್ಥಪಡಿಸಿದೆ. ರಾಜಸ್ಥಾನದ ಬಾರ್ಮರ್‌ನಲ್ಲಿ ಇತ್ತೀಚೆಗೆ ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡುವ ಸಂದರ್ಭದಲ್ಲಿ ಭಾರತದ ಬಳಿಯೂ ಅಣ್ವಸ್ತ್ರಗಳಿವೆ. ಅದನ್ನು ದೀಪಾವಳಿ ಸಂದರ್ಭಕ್ಕಾಗಿ ಇರಿಸಿಕೊಂಡಿಲ್ಲ ಎಂದು ಹೇಳಿದ್ದರು. ಈ ಹೇಳಿಕೆ ವಿರುದ್ಧ ಆಯೋಗಕ್ಕೆ ದೂರು ಸಲ್ಲಿಕೆಯಾಗಿತ್ತು. ಅದನ್ನು ಪರಿಶೀಲಿಸಿದ ಆಯೋಗ ಪ್ರಧಾನಿ ಮಾತುಗಳಿಂದ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲ ಎಂದು ಹೇಳಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಳಕೆ ಮಾಡಿದ ಶಬ್ದ ಪ್ರಯೋಗದ ವಿರುದ್ಧ ಸಲ್ಲಿಕೆಯಾಗಿದ್ದ ದೂರನ್ನು ಚುನಾವಣ ಆಯೋಗ ಇತ್ಯರ್ಥಪಡಿಸಿ, ಕ್ಲೀನ್ ಚಿಟ್ ನೀಡಿದೆ. ಅವರು ಬಳಕೆ ಮಾಡಿದ “ಕೊಲೆ ಆರೋಪಿ’ ಎಂಬ ಪದ ಬಳಕೆಯಿಂದ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲ ಎಂದು ಆಯೋಗ ಹೇಳಿದೆ.