Advertisement
ರಾಮಕೃಷ್ಣ ಮಿಷನ್ ಮಂಗಳೂರು, ನಾಗರಿಕ ಸಲಹಾ ಸಮಿತಿ ಸುರತ್ಕಲ್ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಎಂಆರ್‌ಪಿಎಲ್ ನೆರವಿನೊಂದಿಗೆ ನಡೆಯುತ್ತಿರುವ ರಾಮಕೃಷ್ಣ ಮಿಷನ್ ಸ್ವತ್ಛ ಸುರತ್ಕಲ್ ಅಭಿಯಾನದ 34ನೇ ವಾರದ ಸ್ವತ್ಛತಾ ಶ್ರಮದಾನಕ್ಕೆ ಗೋವಿಂದದಾಸ ಪದವಿಪೂರ್ವ ಕಾಲೇಜಿನ ಪರಿಸರದಲ್ಲಿ ಚಾಲನೆ ನೀಡಿ ಮಾತನಾಡಿದರು. ನಮ್ಮಲ್ಲಿರುವ ಹೆಚ್ಚಿನ ಆರೋಗ್ಯ ಸಮಸ್ಯೆಗಳಿಗೆ ಪರಿಸರವನ್ನು ನಿರ್ಮಲವಾಗಿ ಇಟ್ಟುಕೊಳ್ಳದಿರುವುದೇ ಕಾರಣ. ನಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಪ್ರತಿಯೋರ್ವರೂ ಸೂಕ್ತವಾಗಿ ನಿರ್ವಹಿಸುವುದರಿಂದ ಕಸಮುಕ್ತವಾದ ಸುಂದರ ದೇಶವನ್ನು ಕಟ್ಟಲು ಸಾಧ್ಯ ಎಂದರು.
ಭಾರತ ದೇಶದ ಯುವ ಜನಾಂಗ ಅರ್ಥಪೂರ್ಣವಾಗಿ ಈ ಅಭಿಯಾನದಲ್ಲಿ ಕೈ ಜೋಡಿಸಿದಲ್ಲಿ ನಮ್ಮ ದೇಶವನ್ನು ಸ್ವತ್ಛತೆಯ ವಿಚಾರದಲ್ಲಿ ಬೇರೆಲ್ಲ ಮುಂದುವರಿದ ದೇಶಗಳ ಸಾಲಿನಲ್ಲಿ ಕಾಣಬಹುದು, ನೈರ್ಮಲ್ಯ ಸಮಸ್ಯೆಯಿಂದಾಗಿ ನಮ್ಮ ಪ್ರವಾಸೋದ್ಯಮವು ಹೆಚ್ಚಿನ ಸಂಕಷ್ಟಕ್ಕೆ ಈಡಾಗುತ್ತಿರುವುದು ವಿಷಾದನೀಯ ಎಂದರು. ಗೋವಿಂದದಾಸ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ| ಕೃಷ್ಣಮೂರ್ತಿ, ಗೋವಿಂದದಾಸ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಲಕ್ಷ್ಮೀ, ಉಪ ಪ್ರಾಂಶುಪಾಲೆ ಸುನೀತಾ ಮೊದಲಾದವರು ಉಪಸ್ಥಿತರಿದ್ದರು.
Related Articles
ಗೋವಿಂದದಾಸ ಕಾಲೇಜಿನ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆಯ ಸುಮಾರು 60 ವಿದ್ಯಾರ್ಥಿಗಳ ಉಪನ್ಯಾಸಕರಾದ ವೆಂಕಟರಮಣ ಭಟ್, ಚಿತ್ರಾ ಶೆಟ್ಟಿ ನೇತೃತ್ವದಲ್ಲಿ ಪರಿಸರದಲ್ಲಿದ್ದ ಬೃಹತ್ ಕಸದ ರಾಶಿಯನ್ನು ಎರಡು ವಾಹನಗಳ ನೆರವಿನೊಂದಿಗೆ ತೆರವುಗೊಳಿಸಿದರು. ವಿದ್ಯಾರ್ಥಿಗಳು ಪ್ಲಾಸ್ಟಿಕ್ ತ್ಯಾಜ್ಯ, ಕಟ್ಟಡ ಕಾಮಗಾರಿಯ ತ್ಯಾಜ್ಯ ಇನ್ನಿತರ ತ್ಯಾಜ್ಯವನ್ನು ವಿಂಗಡನೆ ಮಾಡಿ ವಿಲೇವಾರಿ ಮಾಡಿದ್ದು ಶ್ಲಾಘನೀಯ. ನಾಗರಿಕ ಸಮಿತಿ ಕುಳಾಯಿ ಅಧ್ಯಕ್ಷ ಭರತ್ ಶೆಟ್ಟಿ, ಪ್ರಾಧ್ಯಾಪಕಿ ಸಾವಿತ್ರಿ ರಮೇಶ್ ಭಟ್, ಕಾಲೇಜಿನ ಪ್ರಾಧ್ಯಾಪಕರು, ಸಿಬಂದಿ ವರ್ಗದವರು ಶ್ರಮದಾನದಲ್ಲಿ ಕೈ ಜೋಡಿಸಿದ್ದರು. ರಾಮಕೃಷ್ಣ ಮಿಷನ್ ಸ್ವತ್ಛ ಸುರತ್ಕಲ್ ಅಭಿಯಾನದ ಸಂಯೋಜಕ ಸತೀಶ್ ಸದಾನಂದ್ ಸ್ವಯಂ ಸೇವಕರಿಗೆ ಅಗತ್ಯ ಮಾಹಿತಿ ನೀಡಿದರು.
Advertisement