Advertisement

ಸ್ವಚ್ಛ ಭಾರತ್‌ ನಮ್ಮೆಲ್ಲರಿಗಾಗಿ  

11:43 AM Oct 08, 2017 | |

ನಂಜನಗೂಡು: ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತರಲು ಪ್ರಯತ್ನಿಸುತ್ತಿರುವ ಸ್ವಚ್ಛ ಭಾರತದ ಕಲ್ಪನೆ ದೇಶಕ್ಕಾಗಿ ಅಲ್ಲ ಇದು ನಮ್ಮೆಲ್ಲರ ಒಳಿತಾಗಿ ಎಂಬುದನ್ನು  ಪ್ರತಿಯೊಬ್ಬ ಪ್ರಜೆ ಅರಿತು ನಡೆಯಬೇಕಾಗಿದೆ ಎಂದು ರೋಟರಿ 3181 ನ ಗೌರ್ನರ್‌ ಎಂ.ಎಂ.ಸುರೇಶ್‌ ಚೆಂಗಪ್ಪ ಅಭಿಪ್ರಾಯಪಟ್ಟರು. ನಂಜನಗೂಡು ರೋಟರಿ ಕ್ಲಬ್‌ನ ಅಧಿಕೃತ ಭೇಟಿ ವೇಳೆ ಕ್ಲಬ್‌ನ ವತಿಯಿಂದ ನಗರದ ಈಶ್ವರ್‌ ಭವನದಲ್ಲಿ ಆಯೋಜಿಸಲಾಗಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ಪರಿಸರ ಸಂರಕ್ಷಿಸಿ: ನಮ್ಮ ಸುತ್ತಮುತ್ತಲಿನ ಪರಿಸರ ಚೆನ್ನಾಗಿದ್ದಲ್ಲಿ ನಾವೂ ಆರೋಗ್ಯವಂತರಾಗಿರುತ್ತೇವೆ. ಈ ನಿಟ್ಟಿನಲ್ಲಿ ಮೋದಿರವರು ಕೈಗೊಂಡಿರುವ ಅಭಿಯಾನ ಕೇವಲ ದೇಶಕ್ಕಾಗಿ ಅಲ್ಲ ದೇಶದ ಪ್ರತಿಯೊಬ್ಬ ವ್ಯಕ್ತಿಗಾಗಿ ಎಂಬುದನ್ನು ಮನಗಾಣಿ ಎಂದು ತಿಳಿಸಿದರು. ಇನ್ನು ಮರಗಿಡಗಳ ಬಗ್ಗೆ ಹೇಳುವುದಾದರೆ, ಹಲವು ಕಾಮಗಾರಿಗಳ ನೆಪದಲ್ಲಿ ಮರಗಳನ್ನು ಕಡಿಯಲಾಗುತ್ತಿದೆ.

ಅವು ನಮಗೆ ಎಷ್ಟು ಅವಶ್ಯಕ ಎನ್ನುವುದನ್ನು ಮರೆತು  ಕಡಿಯುತ್ತಿದ್ದೇವೆ. ನಮ್ಮಿಂದ ಇಂಗಾಲವನ್ನು ಪಡೆದು ಉತ್ತಮ ಅಮ್ಲಜನಕ ನೀಡುವ  ಮರಗಳನ್ನು ಕಡಿಯುತ್ತಿರುವುದು ದುರಂತ. ಮನೆಗೊಂದು ಮರದಂತೆ ಬೆಳೆದರೆ, ನಮ್ಮ ಮನೆಯ ರಸ್ತೆ, ನಂತರ ಊರು, ರಾಜ್ಯ ಅಂತೆಯೇ ದೇಶವೂ ಹಸಿರಿನಿಂದ ಕಂಗೊಳಿಸುತ್ತದೆ ಎಂದರು.

ಉತ್ತಮ ಸೇವೆ: ರೋಟರಿ ಜಾತಿ, ಮತ, ಧರ್ಮಗಳನ್ನು ಮೀರಿ ನಿಂತಿರುವ ಅಂತರಾಷ್ಟ್ರೀಯ ಸಂಸ್ಥೆ ಇದರ ಮೂಲಕ ಸೇವೆ ಸಲ್ಲಿಸಲು ಇರುವ ನಾವೇ ಧನ್ಯ ಎಂದ ಅವರು, ಶಾಂತಿ-ಸೇವೆಗೆ ಮತ್ತೂಂದು ಹೆಸರೇ ರೋಟರಿ ಎಂದು ಹೆಮ್ಮೆ ವ್ಯಕ್ತಪಡಿಸಿದರು. 

ನಂಜನಗೂಡು ಕ್ಲಬ್‌ ಕೈಗೊಂಡಿರುವ ಸುಮಾರು 278 ಕಣ್ಣಿನ ತಪಾಸಣೆ ಶಿಬಿರದಲ್ಲಿ, 240 ಶಿಬಿರದಲ್ಲಿ ಪಾಲ್ಗೊಂಡು ಶಿಬಿರದ ಯಶಸ್ಸಿಗೆ ಕಾರಣರಾದ ಹಾಗೂ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿರುವ ಮೈಸೂರು ರೇಸ್‌ ಕ್ಲಬ್‌ ವೈದ್ಯಾಧಿಕಾರಿ ಡಾ.ಜಗನ್ನಾಥ್‌ ಶೆಟ್ಟಿ ಅವರನ್ನು ಗೌರವಿಸಲಾಯಿತು.

Advertisement

ದಮಯಂತಿ ಚೆಂಗಪ್ಪ, ಸಹಾಯಕ ಗೌರ್ನರ್‌ ರೊ.ಪ್ರವೀಣ್‌ ಕುಮಾರ್‌, ವಲಯ ಪ್ರತಿನಿಧಿ ವಿಶ್ವಾಸ್‌, ನಂಜನಗೂಡು ರೋಟರಿ ಕ್ಲಬ್‌ ಅಧ್ಯಕ್ಷ ರೊ.ಎನ್‌.ಶಿವಾನಂದ, ಕಾರ್ಯದರ್ಶಿ ಕೆ.ಜಿ.ರಾಮಚಂದ್ರ, ಹಿರಿಯ ಸದಸ್ಯರಾದ ಬಾಲಸುಬ್ರಹ್ಮಣ್ಯಂ, ಆರ್‌.ವಿ.ಮಹದೇವಸ್ವಾಮಿ, ಸದಸ್ಯರಾದ ಶ್ರೀನಿವಾಸ್‌ ಪಿ ರೆಡ್ಡಿ, ರಾಕೇಶ್‌ ಜೈನ್‌, ಮಹೇಶ್‌, ಪ್ರಕಾಶ್‌ ಚಂದ್‌ ಜೈನ್‌, ಡಾ.ಶ್ರೀಕಾಂತ್‌, ಡಾ.ಧರ್ಮರಾಜ್‌, ಸಂಸ್ಥೆ ಅಧ್ಯಕ್ಷರಾದ ಶಿಲ್ಪಾ, ಕಲ್ಪನಾ ಮತ್ತಿತರರಿದ್ದರು.

ಒಬ್ಬ ಆರೋಗ್ಯವಂತ ಮನುಷ್ಯನಿಗೆ ಉತ್ತಮ ಪರಿಸರದ ಅವಶ್ಯಕತೆ ಇದೆ. ದಿನ ನಿತ್ಯ ಉಸಿರಾಡಲು ಆಮ್ಲಜನಕದ ಅವಶ್ಯಕತೆ ಎಷ್ಟಿದೆ ಎಂಬುದು, ತುರ್ತು ನಿಗಾ ಘಟಕದಲ್ಲಿ ರೋಗಿಯೋರ್ವನಿಗೆ ಕೃತಕ ಉಸಿರಾಟಕ್ಕಾಗಿ ಅಳವಡಿಸಿರುವ ಸಿಲಿಂಡರ್‌  ಕಂಡಾಗಲೇ ತಿಳಿಯುತ್ತದೆ. 
-ಎಂ.ಎಂ.ಸುರೇಶ್‌ ಚೆಂಗಪ್ಪ, ರೋಟರಿ ಗೌರ್ನರ್‌  

Advertisement

Udayavani is now on Telegram. Click here to join our channel and stay updated with the latest news.

Next