Advertisement

ಸ್ವಚ್ಛ ಕಡಲತೀರ, ಹಸುರು ಕೋಡಿ ಅಭಿಯಾನ

10:45 PM Sep 26, 2021 | Team Udayavani |

ಕುಂದಾಪುರ: ಬ್ಯಾರೀಸ್‌ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ವಿಶ್ವ ಹಸುರು ಕಟ್ಟಡ ಸಪ್ತಾಹದ ಅಂಗವಾಗಿ ಕೋಡಿ ಕಡಲ ತೀರದ ಸ್ವಚ್ಛತ ಕಾರ್ಯಕ್ರಮ ರವಿವಾರ ನಡೆಯಿತು.

Advertisement

ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್‌ ರೆಡ್ಡಿ ಮುಖ್ಯ ಅತಿಥಿಯಾಗಿ ಮಾತನಾಡಿ, ಯಾವುದು ಪರಿಸರದ ಹೊರಗಡೆ ಇದೆಯೋ ಅವೆಲ್ಲವೂ ನಮ್ಮ ದೇಹದ ಒಳಗಡೆ ಸೇರುತ್ತದೆ. ಪರಿಸರ ಕಲುಷಿತಗೊಂಡರೆ ಗಾಳಿ, ನೀರು, ಆಹಾರ ಸೇವನೆಯಿಂದ ನಮ್ಮ ದೇಹದ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಪ್ಲಾಸ್ಟಿಕ್‌ ನಂತಹ ವಸ್ತುಗಳ ಬಳಕೆ ತಡೆಯುವುದು, ಪರಿಸರ ಸ್ನೇಹಿ ವಸ್ತುಗಳನ್ನು ಮರುಬಳಕೆಗೆ ಒಳಪಡಿಸುವುದು ಈ ರೀತಿಯಲ್ಲಿ ಪರಿಸರ ಸಂರಕ್ಷಣೆ ಮಾಡಬಹುದು ಎಂದರು.

ಬ್ಯಾರೀಸ್‌ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸೈಯ್ಯದ್‌ ಮೊಹಮ್ಮದ್‌ ಬ್ಯಾರಿ ಕಾರ್ಯಕ್ರಮ ರೂಪಿಸಿ ಸ್ವಚ್ಛತ ಅಭಿಯಾನಕ್ಕೆ ಚಾಲನೆ ನೀಡಿ, ಕೋಡಿ ಕಡಲತೀರ ಸ್ವಚ್ಛತ, ಹಸುರು ಕೋಡಿ ಯೋಜನೆಯಿಂದ ವಿಶ್ವದಲ್ಲಿ ಕೋಡಿ ಪರಿಸರವು ವಿಶೇಷವಾಗಿ ಗುರುತಿಸಲ್ಪಡುವಂತಾಗಬೇಕು ಎಂದರು.

ಇದನ್ನೂ ಓದಿ:ಶಿಕ್ಷಕರ ಅರ್ಹತಾ ಪರೀಕ್ಷೆ : ಬ್ಲೂಟೂತ್‌ ಶೂ ಧರಿಸಿ ಮೋಸ ಮಾಡುವ ಯತ್ನ

ಬ್ಯಾರೀಸ್‌ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ದೋಮ ಚಂದ್ರಶೇಖರ್‌ ಪ್ರಸ್ತಾವಿಸಿದರು.ಬ್ಯಾರೀಸ್‌ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ. ಎಂ. ಅಬ್ದುಲ್‌ ರೆಹಮಾನ್‌, ಕೋಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಉಮೇಶ್‌ ನಾಯಕ್‌, ಪುರಸಭೆ ಸದಸ್ಯರಾದ ಕಮಲಾ, ಲಕ್ಷ್ಮೀ, ಪುರಸಭೆ ನಾಮ ನಿರ್ದೇಶಿತ ಸದಸ್ಯ ನಾಗರಾಜ್‌ ಕಾಂಚನ್‌, ಬ್ಯಾರೀಸ್‌ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರಾದ ಸಿದ್ದಪ್ಪ ಕೆ. ಎಸ್‌., ಡಾ| ಶಮೀರ್‌, ಡಾ| ಫಿರ್ದೋಸ್‌, ಅಶ್ವಿ‌ನಿ ಶೆಟ್ಟಿ , ಜಯಂತಿ , ದುರ್ಗಿ ಪಟೆಗಾರ್‌,ಸುಮಿತ್ರಾ, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪ್ರಭಾಕರ್‌ ಕೆ., ಕೋಶಾಧಿಕಾರಿ ಅಬ್ದುಲ್‌ ಕೆ., ಸದಸ್ಯರಾದ ಶಂಕರ್‌ ಪೂಜಾರಿ, ಸಂಜೀವ ಪೂಜಾರಿ, ಭಾಸ್ಕರ್‌ ಪುತ್ರನ್‌, ರಫೀಕ್‌, ತಿಮ್ಮಪ್ಪ ಖಾರ್ವಿ, ರಾಮಕೃಷ್ಣ ಪೂಜಾರಿ, ಗೋಪಾಲ ಪೂಜಾರಿ, ಶಿಕ್ಷಕ-ರಕ್ಷಕ ಸಂಘದ ಮುಖ್ಯ ಸಲಹೆಗಾರ ಅಬು ಶೇಕ್‌, ಉಪಾಧ್ಯಕ್ಷರಾದ ಮುಸ್ತರಿನ್‌, ಪ್ರಕಾಶ್‌, ಖಜಾಂಚಿ ರಫೀಕ್‌ ಉಪಸ್ಥಿತರಿದ್ದರು.ಹಳೆ ಅಳಿವೆಯಿಂದ ಡೆಲ್ಟಾ ಪಾಯಿಂಟ್‌ ವರೆಗಿನ ಕಡಲತೀರದ ಸ್ವಚ್ಛತ ಕಾರ್ಯ ನಡೆಯಿತು. ಜಯಶೀಲ ಶೆಟ್ಟಿ ನಿರೂಪಿಸಿ, ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next