Advertisement
ಹೊಸಬೆಳಕು ಸೇವಾ ಟ್ರಸ್ಟ್ ಸಹಯೋಗದಲ್ಲಿ ರವಿವಾರ ಮಣಿಪಾಲದಲ್ಲಿ ಆಯೋಜಿಸಿದ್ದ “ಮಣ್ಣಿನ ಆಟ’ ಒಂದು ದಿನದ ಆವೆ ಮಣ್ಣಿನ ಕಲಾಕೃತಿ ಶಿಬಿರದಲ್ಲಿ ಈ ದಾಖಲೆ ಸಾಧ್ಯವಾಗಿದೆ. ಶಿಬಿರದಲ್ಲಿ ಅವಿಭಜಿತ ದ.ಕ. ಜಿಲ್ಲೆಯ 50 ಜನರು ಹಾಗೂ ಆಶ್ರಮದ 13 ಸೇರಿದಂತೆ ಒಟ್ಟು 70ಕ್ಕೂ ಅಧಿಕ ಮಂದಿ ಭಾಗವಹಿಸಿ ವಿವಿಧ ಬಗೆ ಕಲಾಕೃತಿಗಳನ್ನು ರಚಿಸಿದರು.
3ರಿಂದ 100ವರ್ಷದ ವರೆಗಿನವರು ಶಿಬಿರದಲ್ಲಿ ಭಾಗವಹಿಸಿದರು. ಪುರುಷರು, ಮಹಿಳೆಯರು, ವಿದ್ಯಾರ್ಥಿಗಳು ಬಹಳ ಖುಷಿಯಿಂದ ತಮ್ಮ ಸ್ಮತಿಪಟಲದಲ್ಲಿ ದಾಖಲಾಗಿದ್ದ ಪ್ರಾಣಿ, ಪಕ್ಷಿ , ಹಣ್ಣು, ದೇವರ ಮೂರ್ತಿ, ಹೂವು, ಮುಖವಾಡ, ಜಾನಪದ ಹಾಗೂ ತುಳುನಾಡಿನ ಸಂಸ್ಕೃತಿ ಬಿಂಬಿಸುವ ಭೂತ ಕೋಲದ ಕಲಾಕೃತಿಗಳನ್ನು ಸೃಷ್ಟಿಸಿ ಸಂಭ್ರಮಿಸಿದರು. 3ರ ಬಾಲೆಗೆ ಕಲಾಕೃತಿ ಪ್ರೀತಿ
ಮಕ್ಕಳಿಗೆ ಮಣ್ಣಿನಲ್ಲಿ ಆಟವಾಡುವುದೆಂದರೆ ಎಲ್ಲಿಲ್ಲದ ಪ್ರೀತಿ. ಮಣಿಪಾಲದ ಸರಳೇಬೆಟ್ಟು ನಿವಾಸಿ ದೀಪಾ ಅವರ ಪುತ್ರಿ ಶ್ಲೋಕಾ (3) ಅವರ ತನ್ನ ಕಲ್ಪನೆಗೆ ರೂಪ ನೀಡುವ ಮೂಲಕ ನೋಡುಗರನ್ನು ಬೆರಗುಗೊಳಿಸಿದರು.
Related Articles
ಆವೆ ಮಣ್ಣಿನ ಶಿಬಿರ ಆಶ್ರಮದ ನಿವಾಸಿಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ. ಶಿಬಿರಕ್ಕೆ ಬಂದವರೊಂದಿಗೆ ಆತ್ಮೀಯತೆಯಿಂದ ಮಾತನಾಡುವ ಮೂಲಕ ತಮ್ಮ ಒಂಟಿತನ ಹಾಗೂ ನೋವನ್ನು ಮರೆತಿದ್ದರು.
Advertisement
ವಿಶ್ವ ಆಹಾರ ದಿನ- ಮಣ್ಣಿನ ಕಲಾಕೃತಿ ಬಿಡುಗಡೆಕಲಾವಿದ ವೆಂಕಿ ಪಲಿಮಾರು, ಶ್ರೀನಾಥ್ ಮಣಿಪಾಲ ಮತ್ತು ಅವರ ವಿಶ್ವ ಆಹಾರ ದಿನದ ಅಂಗವಾಗಿ ಆಹಾರ ಪೋಲು ತಡೆಯುವ ಸಂದೇಶವನ್ನು ನೀಡುವ ವಿಶಿಷ್ಟ ಮಣ್ಣಿನ ಕಲಾಕೃತಿ ಅನಾವರಣಗೊಳಿಸಿದರು. ಈ ಕಲಾಕೃತಿಯು ಎಲ್ಲರ ಮನ ಸೆಳೆಯಿತು ಕಾರ್ಯಕ್ರಮವನ್ನು ಡಾ| ಎ.ವಿ. ಬಾಳಿಗಾ ಆಸ್ಪತ್ರೆಯ ನಿರ್ದೇಶಕ ಡಾ| ಪಿ.ವಿ. ಭಂಡಾರಿ ಉದ್ಘಾಟಿಸಿದರು. ಉಡುಪಿ ಆರ್ಟಿಸ್ಟ್ ಫೋರಂ ಅಧ್ಯಕ್ಷ ರಮೇಶ್ ರಾವ್, ಹೊಸಬೆಳಕು ಸಂಸ್ಥೆಯ ಪೋಷಕ ಮಹೇಶ್ ಠಾಕೂರ್, ಮನೋವೈದ್ಯ ಡಾ| ವಿರೂಪಾಕ್ಷ ದೇವರಮನೆ, ಕಾರ್ಪೊರೇಷನ್ ಬ್ಯಾಂಕ್ ಮಂಗಳೂರಿನ ಸಿಬಂದಿ ತರಬೇತುದಾರ ಕನಕರಾಜ್, ನಗರಸಭಾ ಸದಸ್ಯೆ ವಿಜಯಲಕ್ಷ್ಮೀ, ಸಂಸ್ಥೆಯ ನಿರ್ವಾಹಕಿ ತನುಲಾ ತರುಣ್, ವಿನಯಚಂದ್ರ ಉಪಸ್ಥಿತರಿದ್ದರು. 100ರಲ್ಲಿ ಚುರುಕು ತನ
ಕಲಿಯುವ ಮನಸ್ಸಿದ್ದರೆ ಯಾವ ವಯಸ್ಸಿನಲ್ಲಿ ಬೇಕಾದರೂ ಕಲಿಯಬಹುದು ಎನ್ನುವುದಕ್ಕೆ ಕಲಾಕೃತಿ ಶಿಬಿರದಲ್ಲಿ ಭಾಗವಹಿಸಿದ ಗಿರಿಜಾ (100) ಅವರು ಸಾಬೀತು ಮಾಡಿದ್ದಾರೆ. ಇವರು ಹೊಸ ಬೆಳಕು ಆಶ್ರಮದ ನಿವಾಸಿಯಾಗಿದ್ದಾರೆ. ಶಿಬಿರದಲ್ಲಿ 18 ವರ್ಷದ ಯುವತಿಯರನ್ನು ನಾಚಿಸುವಂತೆ ಲವಲವಿಕೆಯಿಂದ ಸುಮಾರು 6ಕ್ಕಿಂತ ಹೆಚ್ಚಿನ ಹಣತೆ ಹಾಗೂ ಸ್ಮತಿಪಟಲದಲ್ಲಿನ ಚಿತ್ರವನ್ನು ರಚಿಸಿದರು.