Advertisement

ನಾಳೆಯಿಂದ ತರಗತಿ ಬಹಿಷ್ಕಾರ ಚಳವಳಿ

12:16 PM Jun 30, 2019 | Team Udayavani |

ಯಲಬುರ್ಗಾ: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು (1ರಿಂದ5) ವೃಂದಕ್ಕೆ ಸೇರ್ಪಡೆ ಮಾಡಿ ಸೀಮಿತಗೊಳಿಸಿ ಅನ್ಯಾಯ ಮಾಡುತ್ತಿರುವ ಕ್ರಮವನ್ನು ಖಂಡಿಸಿ ಕರ್ನಾಟಕ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಪದಾಧಿಕಾರಿಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಶನಿವಾರ ಬಿಇಒ ಶರಣಪ್ಪ ವಟಗಲ ಅವರಿಗೆ ಮನವಿ ಸಲ್ಲಿಸಿದರು.

Advertisement

ಸಂಘದ ಅಧ್ಯಕ್ಷ ಜಗದೀಶ ಬಳಿಗಾರ ಮಾತನಾಡಿ, ಕರ್ನಾಟಕ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ವತಿಯಿಂದ 1ರಿಂದ 7ನೇ ತರಗತಿಗಳಿಗೆ ನೇಮಕಾತಿಯಾದ ಶಿಕ್ಷಕರಲ್ಲಿ ಪದವಿ ವಿದ್ಯಾರ್ಹತೆ ಮತ್ತು ಸೇವಾನುಭವ ಹೊಂದಿರುವ ಪರವೀಧರ ಸೇವಾನಿರತ ಶಿಕ್ಷಕರನ್ನು 1ರಿಂದ 5ಕ್ಕೆ ಸೇರಿಸಿ ಹಿಂಬಡ್ತಿ ನೀಡುವುದನ್ನು ವಿರೋಧಿಸಿ ಜು. 1ರಿಂದ ತರಗತಿಗಳ ಬೋಧನಾ ಬಹಿಷ್ಕಾರ ಚಳವಳಿ ಹಮ್ಮಿಕೊಂಡಿದ್ದೇವೆ. 20ರಿಂದ 25 ವರ್ಷ ಸೇವಾನುಭವ ಹೊಂದಿದ ಶಿಕ್ಷಕರು ಇದ್ದಾರೆ. ಮುಂಬಡ್ತಿ ಹಾಗೂ ಆರ್ಥಿಕ ಸೌಲಭ್ಯ ನೀಡದೇ ವಂಚಿಸುತ್ತಿರುವುದು ಖಂಡನೀಯಯವಾಗಿದೆ. ಶೀಘ್ರದಲ್ಲಿ ಸರಕಾರ ಹಾಗೂ ಇಲಾಖೆ ಮರುಪರಿಶೀಲನೆ ನಡೆಸಿ 6-8 ತರಗತಿ ವೃಂದಕ್ಕೆ ಸೇರ್ಪಡೆ ಮಾಡಿ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.

ಬಿಇಒ ಶರಣಪ್ಪ ವಟಗಲ್ ಮಾತನಾಡಿ, ನಿಮ್ಮ ಬೇಡಿಕೆಗಳು ನ್ಯಾಯಯುತವಾಗಿದ್ದು ಮನವಿ ಪತ್ರವನ್ನು ಮೇಲಾಧಿಕಾರಿಗಳಿಗೆ ಕಳುಹಿಸಿ ಕೊಡಲಾಗುವುದು ಎಂದರು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ವೈ.ಜಿ.ಪಾಟೀಲ, ಶೇಖರಗೌಡ ಪಾಟೀಲ, ದ್ಯಾಮಣ್ಣ ಮುಗಳಿ, ಪ್ರಭು ವಕ್ಕಳದ, ಮಹಿಬೂಬ, ಮಲ್ಲಿಕಾರ್ಜುನ ಕುಂಬಾರ, ಯೋಗಪ್ಪ ಪೂಜಾರ, ಹೆಚ್.ಎಲ್. ಹೊಸಗೌಡ್ರ, ಹನುಮಂತಪ್ಪ ಉಪ್ಪಾರ, ಬಸವರಾಜ ಬಿಲ್ಲಾರ, ಶಿವುಕುಮಾರ ಮುತ್ತಾಳ, ಲಕ್ಷ್ಮಣ್ಣ, ಯಲ್ಲಪ್ಪ ಜರಕುಂಟಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next