ಕೊರಟಗೆರೆ : ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಕಲ್ಪಿಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪಾತ್ರ ಬಹಳ ಮುಖ್ಯವಾಗಿದೆ ಎಂದು ಸಾಹಿತಿ ಹಾಗೂ ಶಿಕ್ಷಕ ಸಚ್ಚಿದಾನಂದ ಮೂರ್ತಿ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಕನ್ನಡ ಮನಸ್ಸುಗಳ ಮೇಲೆ ಕನ್ನಡ ಸಾಹಿತ್ಯ ಪರಿಷತ್ತು ಬೀರಿದ ಪ್ರಭಾವ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು ಕನ್ನಡದ ಅಭಿವೃದ್ಧಿಗೆ ಪರಿಷತ್ತು ಎಲ್ಲ ರೀತಿಯಲ್ಲೂ ತನ್ನದೇ ಆದ ಕೊಡುಗೆಯನ್ನು ನೀಡಿದೆ ಎಂದರು.
ಶಿಕ್ಷಣದಲ್ಲಿ ಕನ್ನಡ ಭಾಷಾ ಕಲಿಕೆ ಕಡ್ಡಾಯವನ್ನು ಮೀಸಲು ಮಾಡಲು ಹಾಗೂ ನಾಡಗೀತೆ, ನಾಡ ಧ್ವಜಗಳನ್ನು ನೀಡುವ ಕಾರ್ಯದಲ್ಲಿ ಕಸಾಪ ಹೆಚ್ಚು ಶ್ರಮ ವಹಿಸಿದೆ ಓದುವ ಸಮಾಜವನ್ನು ಸೃಷ್ಟಿ ಮಾಡಿದ ಜೊತೆಗೆ ಸುಸಂಸ್ಕೃತ ಸಮಾಜವನ್ನು ನಿರ್ಮಿಸುವ ಕಾರ್ಯವಾಗಿದೆ. ಸಣ್ಣ ಪುಸ್ತಕಗಳನ್ನು ತಲುಪಿಸುವ ಮೂಲಕ ಎಳೆಯ ಮನಸ್ಸುಗಳಲ್ಲಿ ಕನ್ನಡ ಕಂಪು ಬೀರಿತು. ಕನ್ನಡ ಶ್ರೀಮಂತ ಸಾಹಿತ್ಯ ವಾಗಿದ್ದು ಕನ್ನಡದ ಹಲವು ಮಹತ್ತರ ಗ್ರಂಥಗಳನ್ನು ಕ್ರೋಢೀಕರಿಸಿ ಜನರಿಗೆ ತಲುಪಿಸುವ ಕಾರ್ಯ ಕಸಾಪ ವತಿಯಿಂದ ನಡೆಯಿತು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸುಧಾಕರ್ ಮಾತನಾಡಿ ಮನೆ-ಮನಗಳಿಗೆ ಹುಟ್ಟುವ ರೀತಿ ಕನ್ನಡ ಸಾಹಿತ್ಯ ಪರಿಷತ್ ತಲುಪಲಿ. ಸಂಘಟನೆಯ ಸಂಸ್ಥಾಪನೆಯ ಗುರಿ ಉದ್ದೇಶಗಳ ಈಡೇರಿಸುವಿಕೆಯ ಸ್ಥಿತಿಗತಿ ತಿಳಿಯಲು ಈ ಆಚರಣೆ ಪ್ರಾಮುಖ್ಯತೆ ಹೊಂದಿದೆ ಎಂದರು.
ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಚ್. ಎಂ ರುದ್ರೇಶ್ ಮಾತನಾಡಿ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಎಲ್ಲರೂ ಸಿದ್ಧತೆ ಮಾಡಿಕೊಳ್ಳಬೇಕಿದ್ದು ನೌಕರರ ಸಂಘದ ವತಿಯಿಂದ ದೇಣಿಗೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಾಹಿತಿಗಳಾದ ಎಲೆರಾಂಪುರ ರುದ್ರಮೂರ್ತಿ, ಬಿದಲೋಟಿ ರಂಗನಾಥ, ಕ ಸಾ ಪ ಮಾಜಿ ಅಧ್ಯಕ್ಷರಾದ ಜಿ.ಆರ್. ಪ್ರತಾಪರುದ್ರ, ಕೆ.ಎಂ.ನರಸಿಂಹಮೂರ್ತಿ, ಎಸ್.ಕೆ ನಾಗರಾಜು ಅವರುಗಳನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಕಾರ್ಯದರ್ಶಿ ಶಿವಾನಂದ್, ಕೋಶಾಧ್ಯಕ್ಷ ಕೆಎಸ್ ಈರಣ್ಣ ಸದಸ್ಯರಾದ ಚಿಕ್ಕಪ್ಪಯ್ಯ, ದಾಡಿವೆಂಕಟೇಶ್, ಹೇಮಲತಾ, ನರಸಪ್ಪ, ದಾಕ್ಷಾಯಿಣಿ ರಾಜಣ್ಣ, ದಯಾನಂದ, ಉಮೇಶ್, ನಗರ ಘಟಕದ ತಿಮ್ಮರಾಜು ಮಂಜುಳಾ ದಿನೇಶ್ ಕಾಂತರಾಜು ಮತ್ತಿತರರು ಹಾಜರಿದ್ದರು.