Advertisement

“ಬದುಕಿನ ಜೀವಶಕ್ತಿ ಸತ್ವ ವೃದ್ಧಿಸಲು ಶಾಸ್ತ್ರೀಯ ಸಂಗೀತ ಪೂರಕ’

11:55 PM Apr 08, 2019 | Sriram |

ಸುರತ್ಕಲ್‌: ಬದುಕಿನ ಜೀವಶಕ್ತಿ ಸತ್ವಗಳನ್ನು ವೃದ್ಧಿಸಲು ಶಾಸ್ತ್ರೀಯ ಸಂಗೀತ ಪೂರಕ. ಸಂಗೀತ ಉಪಾಸನೆಯು ನಿರಂತರವಾಗಿ ನಡೆದಾಗ ಆತ್ಮಜ್ಞಾನದ ಆನಂದ ಲಭ್ಯವಾಗ ಬಲ್ಲುದು ಎಂದು ಸುರತ್ಕಲ್‌ನ ಉದ್ಯಮಿ ಅಗರಿ ರಾಘವೇಂದ್ರ ರಾವ್‌ ನುಡಿದಿದ್ದಾರೆ.

Advertisement

ಸುರತ್ಕಲ್‌ ನಾಗರಿಕ ಸಲಹಾ ಸಮಿತಿ, ಸುರತ್ಕಲ್‌ ಮಣಿಕೃಷ್ಣ ಸ್ವಾಮಿ ಅಕಾಡೆಮಿ ವತಿಯಿಂದ ಸುರತ್ಕಲ್‌ ಮೇಲು ಸೇತುವೆಯ ತಳಭಾಗದಲ್ಲಿ ಆಯೋಜಿಸುತ್ತಿರುವ ಉದಯರಾಗ ಸರಣಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದ 2ನೇ ವರ್ಷದ ಪ್ರಥಮ ಕಾರ್ಯಕ್ರಮ ಉದಯರಾಗ 14ರಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಮನೋಕ್ಲೇಶಗಳ ನಿವಾರಣೆಗೆ ಅರುಣೋದಯ ಸುಂದರ ವಾತಾವರಣ ದಲ್ಲಿ ಸಂಗೀತದ ಆಸ್ವಾದನೆ ವಿಶಿಷ್ಟ ಅನುಭವವಾಗಿದ್ದು, ಉದಯರಾಗ ಸರಣಿ ಕಾರ್ಯಕ್ರಮ ಅದ್ಭುತ ಯಶಸ್ಸು ಕಂಡಿದೆ ಎಂದು ಶ್ಲಾಘಿಸಿದರು. ಶಾಸ್ತ್ರೀಯ ಸಂಗೀತದ ಪಿತಾಮಹ ಪುರಂದರದಾಸರ ಬಗ್ಗೆ ಪರಿಚಯಾತ್ಮಕ ಭಾಷಣವನ್ನು ಕಲಾವಿದೆ ಸುಮೇಧಾ ಕೆ.ಎನ್‌. ನಡೆಸಿಕೊಟ್ಟರು. ಉದಯರಾಗ ತಂಡದ ಪ್ರೊ| ಕೆ. ರಾಜ ಮೋಹನ್‌ ರಾವ್‌, ಶ್ರೀನಿವಾಸ ರಾವ್‌ ಪಿ., ಗಣೇಶ್‌ ಆಚಾರ್‌, ಸುಜಾತಾ ಕೆ.ವಿ., ರಾಜಶ್ರೀ ರವಿರಾಜ್‌ ಸಚ್ಚಿದಾನಂದ್‌, ಸತೀಶ್‌ ಸದಾನಂದ್‌ ಉಪಸ್ಥಿತರಿದ್ದರು.ಮಂಗಳೂರು ನಾದ ಸರಸ್ವತಿ ಸಂಗೀತ ವಿದ್ಯಾಲಯದ ಕಲಾವಿದರಾದ ದ್ವಿತಿಕಾ ಕೆ., ನಿರೀಕ್ಷಾ ಯು.ಕೆ., ಸಂಜನಾ, ಮಾನಸಾ ಕಾಮತ್‌ ಅವರಿಂದ ಹಾಡುಗಾರಿಕೆ ನಡೆಯಿತು.

ಧನಶ್ರೀ ಶಬರಾಯ ,ಶೈಲೇಶ್‌ ರಾವ್‌ ಹಿಮ್ಮೇಳದಲ್ಲಿ ಸಹಕರಿಸಿದರು. ಪಿ. ನಿತ್ಯಾನಂದ ರಾವ್‌ ಸ್ವಾಗತಿಸಿದರು. ಪ್ರೊ| ಕೃಷ್ಣ ಮೂರ್ತಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next