Advertisement

ಲೋಕಲ್‌ ಹುಡ್ಗನ ಕ್ಲಾಸಿಕ್‌ ಲವ್‌ ಸ್ಟೋರಿ

06:00 AM Aug 03, 2018 | Team Udayavani |

“ಒಂದು ಸಮುದ್ರ ತೀರ… ದೊಡ್ಡ ದೊಡ್ಡ ಅಲೆಗಳು… ಆ ಅಲೆಗಳಿಗೆ ಮೈಯೊಡ್ಡಿ ನಿಂತ ಕಲ್ಲು ಬಂಡೆಗಳು… ಅವುಗಳ ನಡುವೆ ಇಬ್ಬರು ಪ್ರೇಮಿಗಳು…!
– ಇದಿಷ್ಟೇ ವಿಷಯ ಇಟ್ಟುಕೊಂಡು ಬಂದ ಅದೆಷ್ಟೋ ಚಿತ್ರಗಳು ಇಂದಿಗೂ ಕಾಡುತ್ತಿವೆ. ಆ ರೀತಿಯ ಕಾಡುವ ಕಥೆ ಕಟ್ಟಿಕೊಡಬೇಕೆಂಬ ಕಾರಣಕ್ಕೆ “ಮನಸಿನ ಮರೆಯಲಿ’ ಎಂಬ ಚಿತ್ರ ಮಾಡಿದ್ದಾಗಿ ಹೇಳುತ್ತಾ ಹೋದರು ನಿರ್ದೇಶಕ “ಆಸ್ಕರ್‌’ ಕೃಷ್ಣ. ಸದ್ದಿಲ್ಲದೆಯೇ ಚಿತ್ರ ಮುಗಿಸಿ, ಈಗ ಬಿಡುಗಡೆಗೆ ಸಜ್ಜಾಗಿರುವ ಕೃಷ್ಣ, ಇತ್ತೀಚೆಗೆ ಆಡಿಯೋ ಸಿಡಿ ಬಿಡುಗಡೆ ಕಾರ್ಯಕ್ರಮ ಮಾಡಿದ್ದಾರೆ. ಮಂಡಳಿ ಕಾರ್ಯದರ್ಶಿ ಭಾ.ಮ.ಹರೀಶ್‌ ಆಡಿಯೋ ಸಿಡಿ ಬಿಡುಗಡೆ ಮಾಡಿ ಶುಭಹಾರೈಸಿದ್ದಾರೆ.

Advertisement

ನಿರ್ದೇಶ ಆಸ್ಕರ್‌ ಕೃಷ್ಣಗೆ ಈ ಚಿತ್ರ ಒಳ್ಳೆಯ ಮೆಚ್ಚುಗೆ ಪಡೆಯುತ್ತೆ ಎಂಬ ವಿಶ್ವಾಸ. ಕಾರಣ, ಇದೊಂದು ಅಪ್ಪಟ ಪ್ರೇಮಕಥೆ. ಇಲ್ಲಿ ಸಾಕಷ್ಟು ಏರಿಳಿತಗಳಿವೆ. ಪ್ರೀತಿ ಅಂದಮೇಲೆ, ವಿರೋಧ ಸಹಜ, ಜಾತಿ, ಧರ್ಮ ಇವೆಲ್ಲವೂ ಅಡ್ಡವಾಗುತ್ತವೆ, ಆಸ್ತಿ, ಅಂತಸ್ತು ಕೂಡ ಮುಖ್ಯವಾಗುತ್ತೆ. ಈ ವಿಷಯಗಳಿಗೆ ಪ್ರೀತಿ ಕಿತ್ತುಹೋಗುತ್ತೆ. ಆದರೆ, ಪ್ರೇಮಿಗಳ ನಡುವೆ ಸಣ್ಣದ್ದೊಂದು ಈಗೋ ಬಂದುಬಿಟ್ಟರೆ, ಅವರ ಪ್ರೀತಿ ಎಲ್ಲಿಗೆ ಬೇಕಾದ್ರೂ ಹೋಗಿಬಿಡುತ್ತೆ. ಅದೇ ಈ ಚಿತ್ರದ ಕಥಾವಸ್ತು’ ಎಂಬುದು ನಿರ್ದೇಶಕರ ಮಾತು.

“ಈ ಹಿಂದೆ ಸಿನಿಮಾಗಳಿಗೆ ಫ್ಯಾಮಿಲಿ ಆಡಿಯನ್ಸ್‌ ಬರಲ್ಲ ಎಂಬ ಮಾತಿತ್ತು. ಅದಕ್ಕೊಂದು ಚಿತ್ರ ಮಾಡಿದೆ. ಆದರೆ, ಫ್ಯಾಮಿಲಿ ಆಡಿಯನ್ಸ್‌ ಬರಲೇ ಇಲ್ಲ. ಆಮೇಲೆ ಇನ್ನೆರೆಡು ಚಿತ್ರ ಮಾಡಿದೆ. ಅದು ವಿನಾಕಾರಣ ವಿವಾದಕ್ಕೆ ಗುರಿಯಾಯ್ತು. ಅದೇಕಾಯೊ¤à ಗೊತ್ತಾಗಲೇ ಇಲ್ಲ. ಈಗ “ಮನಸಿನ ಮರೆಯಲಿ’ ಮಾಡಿದ್ದೇನೆ. ಇದು ರೊಮ್ಯಾಂಟಿಕ್‌ ಲವ್‌ಸ್ಟೋರಿ ಇರುವ ಚಿತ್ರ. ಎಲ್ಲಾ ವರ್ಗಕ್ಕೂ ಬೇಕೆನಿಸುವ ಅಂಶಗಳು ಇಲ್ಲಿವೆ. ಹೊಸ ತಂಡ ಕಟ್ಟಿಕೊಂಡು ಹೊಸದೇನನ್ನೋ ಮಾಡಿದ್ದೇನೆ. ಎಲ್ಲರ ಸಹಕಾರ ಇರಲಿ’ ಅಂದರು ಆಸ್ಕರ್‌ ಕೃಷ್ಣ.

ನಾಯಕ ಕಿಶೋರ್‌ಗೆ ಇದು ಮೊದಲ ಚಿತ್ರ. ನಿರ್ದೇಶಕರ ಕಥೆ ಕೇಳಿ, ಅವಕಾಶ ಬಿಡಬಾರದು ಅಂತ ಒಪ್ಪಿ ಮಾಡಿದ್ದಾರೆ. ಅವರದು ಲವ್ವರ್‌ ಬಾಯ್‌ ಪಾತ್ರ. ಯಾವುದೇ ಕಮರ್ಷಿಯಲ್‌ ಚಿತ್ರಗಳಿಗೆ ಕಮ್ಮಿ ಇಲ್ಲದಂತೆ ಚಿತ್ರ ಮಾಡಿರುವ ಬಗ್ಗೆ ಖುಷಿಗೊಳ್ಳುವ ಕಿಶೋರ್‌, ಒಬ್ಬ ಲೋಕಲ್‌ ಹುಡುಗ ಪ್ರೀತಿಗೆ ಬಿದ್ದದಾಗ, ಲೈಫ‌ಲ್ಲಿ ಏನೆಲ್ಲಾ ನಡೆದು ಹೋಗುತ್ತೆ ಎಂಬುದು ಕಥೆ’ ಎಂದರು ಕಿಶೋರ್‌.

ನಾಯಕಿ ದಿವ್ಯಾಗೌಡ ಅವರಿಗೂ ಇದು ಮೊದಲ ಚಿತ್ರವಂತೆ. ಅವರಿಲ್ಲಿ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾಗಿ ಹೇಳಿಕೊಂಡರು. ನಿರ್ಮಾಪಕ ಕಿಂಗ್‌ ಲಿಂಗರಾಜ್‌ಗೆ ಸದಭಿರುಚಿಯ ಚಿತ್ರ ನಿರ್ಮಿಸಿರುವ ಹೆಮ್ಮೆ. ಸಂಗೀತ ನಿರ್ದೇಶಕ ತ್ಯಾಗರಾಜ್‌, ಕಥೆಗೆ ಪೂರಕವಾಗಿರುವ ನಾಲ್ಕು ಹಾಡುಗಳಿಗೆ ಸಂಗೀತ ನೀಡಿದ್ದು, ಮೊದಲ ಸಲ ಹಾಡಿದ್ದಾರೆ. ಮತ್ತೂಬ್ಬ ನಿರ್ಮಾಪಕಿ ಶಬೀನಾ ಚಿತ್ರ ಶುರುವಾಗಿ, ಬಿಡುಗಡೆಯಾಗುತ್ತಿರುವುದಕ್ಕೆ ಖುಷಿಗೊಂಡಿದ್ದಾರೆ. ಆನಂದ್‌ ಆಡಿಯೋ ಮಾಲೀಕ ಶ್ಯಾಮ್‌, ಚಿತ್ರ ಗೆಲುವು ಕೊಡಲಿ ಎಂದು ಹಾರೈಸುತ್ತಿದ್ದಂತೆಯೇ, ಆಡಿಯೋ ಸಿಡಿ ಬಿಡುಗಡೆ ಕಾರ್ಯಕ್ರಮಕ್ಕೆ ತೆರೆಬಿತ್ತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next