Advertisement

ಇಂದಿನಿಂದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಚಂದನ ತರಗತಿ –ಇಲ್ಲಿದೆ ವಿವರ

12:45 AM Jul 20, 2020 | Hari Prasad |

ಬೆಂಗಳೂರು: ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಸೋಮವಾರದಿಂದ ದೂರದರ್ಶನದ ಚಂದನ ವಾಹಿನಿಯಲ್ಲಿ ವಿವಿಧ ವಿಷಯಗಳ ತರಗತಿ ಆರಂಭವಾಗಲಿದೆ.

Advertisement

2020-21ನೇ ಸಾಲಿನ ಶೈಕ್ಷಣಿಕ ತರಗತಿಗಳ ಆರಂಭ ಕೋವಿಡ್ 19ನಿಂದಾಗಿ ವಿಳಂಬವಾಗುತ್ತಿರುವುದರಿಂದ ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳಿಗಾಗಿ ಸೇತುಬಂಧ ಬೋಧನಾ ಕಾರ್ಯಕ್ರಮಗಳನ್ನು ಸರಕಾರ ಸೋಮವಾರದಿಂದ ಪ್ರಸಾರ ಮಾಡಲಿದೆ.

ವಿದ್ಯಾರ್ಥಿಗಳು ಮನೆಯಲ್ಲೇ ಟಿವಿ ನೋಡಿ ಪಾಠ ಕೇಳಬೇಕು. ಇದಕ್ಕಾಗಿ ಮೆಂಟರ್‌ ಶಿಕ್ಷಕರ ಆಯೋಜನೆ ನಡೆದಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ದಿನಕ್ಕೆ 4 ತಾಸುಗಳಲ್ಲಿ 8 ವಿಷಯಗಳನ್ನು ಪ್ರಸಾರ ಮಾಡಲಾಗುತ್ತದೆ. 10ನೇ, 9ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ ಒಂದೂವರೆ ತಾಸು (3 ತರಗತಿ) ಹಾಗೂ 8ನೇ ತರಗತಿ ವಿದ್ಯಾರ್ಥಿಗಳಿಗೆ 1 ತಾಸು (2 ತರಗತಿ) ಪ್ರಸಾರವಾಗಲಿವೆ.

ಪ್ರತೀ ದಿನ ಬೆಳಗ್ಗೆ 9.30ರಿಂದ 11, 11.30ರಿಂದ 12 ಹಾಗೂ ಅಪರಾಹ್ನ 3ರಿಂದ 4.30, ಸಂಜೆ 5ರಿಂದ 5.30ರವರೆಗೆ ತರಗತಿಗಳು ನಡೆಯಲಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next