Advertisement

ಹೆಣ್ಣಾ ಇವಳು? ವಿದ್ಯಾರ್ಥಿನಿಯ ವಿವಸ್ತ್ರಗೊಳಿಸಲು ಮುಂದಾದ ಶಿಕ್ಷಕಿ !

10:19 AM Aug 04, 2017 | |

ರೂರ್‌ಕೀ: ಅತ್ಯಂತ ಹೇಯ ಮತ್ತು ಕಳವಳಕಾರಿ ಘಟನೆಯೊಂದರಲ್ಲಿ ಕಡಿಮೆ ಆಂಕ ಪಡೆದಿದ್ದಾಳೆ ಎಂಬ ಕಾರಣಕ್ಕೆ 6 ನೇ ತರಗತಿಯ ವಿದ್ಯಾರ್ಥಿನಿಯನ್ನು ವಿವಸ್ತ್ರಗೊಳಿಸಲು ಶಿಕ್ಷಕಿಯೊಬ್ಬಳು ಮುಂದಾಗಿದ್ದಾಳೆ.

Advertisement

ಗುರುವಾರ ಘಟನೆ ನಡೆದಿದ್ದು ಒಂದೂವರೆ ಅಂಕ ಪಡೆದುದಕ್ಕಾಗಿ ಶೆಫಾಲಿ ಎಂಬ ಶಿಕ್ಷಕಿ ವಿದ್ಯಾರ್ಥಿನಿಯನ್ನು ಎಳೆದೊಯ್ದು ಶರ್ಟ್‌ ಬಟನ್‌ ಬಿಚ್ಚಲು ಮುಂದಾಗಿದ್ದಾಳೆ. 

 ‘ಶಿಕ್ಷಕಿ ನನ್ನಲ್ಲಿ ಬಟ್ಟೆಗಳನ್ನು ಬಿಚ್ಚುವಂತೆ ಗದರಿಸಿದರು. ನಾನು ನಿರಾಕರಿಸಿದಾಗ ಚೆನ್ನಾಗಿ ಥಳಿಸಿ ಬಲವಂತವಾಗಿ ಬಟ್ಟೆ ಬಿಚ್ಚಲು ಮುಂದಾದರು’ ಎಂದು ವಿದ್ಯಾರ್ಥಿನಿ ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ನೋವು ತೋಡಿಕೊಂಡಿದ್ದಾಳೆ. 

ಶಾಲೆಯ ಪ್ರಿನ್ಸಿಪಾಲ್‌ ಶಿಕ್ಷಕಿಯನ್ನು ಅಮಾನತು ಮಾಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next