Advertisement

ಹಗೆ ಸಾಧಿಸಿದ ವಿದ್ಯಾರ್ಥಿ : ಶಿಕ್ಷಕನ ಮೇಲೆ ಗುಂಡು ಹಾರಿಸಿದ 10 ನೇ ತರಗತಿ ವಿದ್ಯಾರ್ಥಿ

08:36 AM Sep 25, 2022 | Team Udayavani |

ಲಕ್ನೋ : ಶಾಲಾ ವಿದ್ಯಾರ್ಥಿಯೋರ್ವ ತನ್ನ ಶಾಲೆಯ ಶಿಕ್ಷಕನ ಮೇಲೆ ಗುಂಡು ಹಾರಿಸಿದ ಘಟನೆ ಉತ್ತರ ಪ್ರದೇಶದ ಸೀತಾರಾಪುರದಲ್ಲಿ ಶನಿವಾರ ನಡೆದಿದೆ.

Advertisement

ವಿದ್ಯಾರ್ಥಿ ತರಗತಿಯಲ್ಲಿ ಇತರ ಸಹಪಾಠಿಗಳೊಂದಿಗೆ ಜಗಳವಾಡಿದ್ದ ಇದನ್ನು ಶಿಕ್ಷಕ ತಡೆದು ಬುದ್ದಿವಾದ ಹೇಳಿದ್ದಾರೆ ಆದರೂ ಅದನ್ನು ಕೇಳದ ವಿದ್ಯಾರ್ಥಿ ಶಿಕ್ಷರ ವಿರುದ್ಧ ವಾದ ಮಾಡಲು ಮುಂದಾಗಿದ್ದಾನೆ ಇದರಿಂದ ಕೋಪಗೊಂಡ ಶಿಕ್ಷಕ ವಿದ್ಯಾರ್ಥಿಗೆ ಹೊಡೆದಿದ್ದಾರೆ, ಇದರಿಂದ ಕೋಪಗೊಂಡ ವಿದ್ಯಾರ್ಥಿ ತರಗತಿಯಿಂದ ಹೊರನಡೆದು ಹೋಗಿದ್ದಾನೆ ಶನಿವಾರ ಪಿಸ್ತೂಲ್ ಹಿಡಿದುಕೊಂಡು ತರಗತಿಗೆ ವಿದ್ಯಾರ್ಥಿ ಬಂದಿದ್ದಾನೆ, ಈ ವೇಳೆ ಶಿಕ್ಷಕ ಶಾಲೆ ಪಕ್ಕದಲ್ಲಿ ನಿರ್ಮಾಣಗೊಳ್ಳುತ್ತಿದ್ದ ಕಟ್ಟಡವನ್ನು ವೀಕ್ಷಣೆ ಮಾಡಲು ಹೋಗಿದ್ದಾರೆ, ಇದನ್ನು ಕಂಡ ವಿದ್ಯಾರ್ಥಿ ಅಲ್ಲಿಗೆ ತೆರಳಿ ಶಿಕ್ಷಕನ ಮೇಲೆ ಮೂರು ಸುತ್ತು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಘಟನೆಯಲ್ಲಿ ಶಿಕ್ಷಕ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಕುರಿತು ಕೇಸು ದಾಖಲಿಸಿಕೊಂಡ ಪೊಲೀಸರು ಆರೋಪಿ ಬಾಲಕನ ಪತ್ತೆಗೆ ಬಲೆ ಬಿಸಿದ್ದಾರೆ.

ಇದನ್ನೂ ಓದಿ : ಪಂಚ್‌ ಕ್ಯಾಮೊ ವಿಶೇಷ ಎಡಿಶ‌ನ್‌ ಬಿಡುಗಡೆ; ನಾಲ್ಕು ವೇರಿಯೆಂಟ್‌ಗಳಲ್ಲಿ ಲಭ್ಯ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next