Advertisement

17 ರ ನಾಲ್ವರಿಂದ 16 ರ ವಿದ್ಯಾರ್ಥಿನಿಯ ಗ್ಯಾಂಗ್‌ರೇಪ್‌, ಗರ್ಭಪಾತ

04:51 PM Sep 18, 2018 | Team Udayavani |

ಡೆಹರಾಡೂನ್‌: ಇಲ್ಲಿನ ಶಾಲೆಯೊಂದರ ಹಾಸ್ಟೆಲ್‌ನಲ್ಲಿ  10 ನೇ ತರಗತಿಯ  ವಿದ್ಯಾರ್ಥಿನಿಯೊಬ್ಬಳ ಮೇಲೆ ಹಿರಿಯ ವಿದ್ಯಾರ್ಥಿಗಳು ಗ್ಯಾಂಗ್‌ ರೇಪ್‌ ನಡೆಸಿದ್ದು, ಪರಿಣಾಮವಾಗಿ ಆಕೆ ಗರ್ಭಿಣಿಯಾಗಿದ್ದಾಳೆ. ವಿಚಾರ ಗಮನಕ್ಕೆ ಬಂದೊಡನೆ ಶಾಲೆಯ ಪ್ರಿನ್ಸಿಪಾಲ್‌ ಇತರರೊಡನೆ ಸೇರಿಕೊಂಡು ಗರ್ಭಪಾತ ಮಾಡಿಸಿದ್ದಾರೆ.

Advertisement

ಅಗಸ್ಟ್‌ 14 ರಂದು ಘಟನೆ ನಡೆದಿದ್ದು ಸಂತ್ರಸ್ತೆ ಹಾಸ್ಟೆಲ್‌ನಲ್ಲಿದ್ದ ತನ್ನ ಸಹೋದರಿಯರಿಗೆ ವಿಚಾರ ತಿಳಿಸಿದ್ದಳು. ಬಾಲಕಿ ಗರ್ಭಿಣಿಯಾದ ವಿಚಾರ ತಿಳಿದ ಪ್ರಿನ್ಸಿಪಾಲ್‌, ಆತನ ಪತ್ನಿ ಮತ್ತು ಹಾಸ್ಟೆಲ್‌ ಸಿಬಂದಿ ಆಕೆಗೆ ಮಾತ್ರೆ ಮತ್ತು ಔಷಧಿಗಳನ್ನು ನೀಡಿ ಗರ್ಭಪಾತ ಮಾಡಿಸಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದಾರೆ.

ಈ ವಿಚಾರ ಬಾಲಕಿಯ ಪೋಷಕರಿಗೆ ತಿಳಿದು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಿನ್ಸಿಪಾಲ್‌ ಸಹಿತ ಶಾಲೆಯ ಐದು ಸಿಬಂದಿಗಳು ಮತ್ತು ನಾಲ್ವರು ರೇಪ್‌ ಆರೋಪಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ.

ನಾಲ್ವರು ಆರೋಪಿಗಳು 17 ವರ್ಷದ ವರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next