Advertisement

ಸ್ನೇಹಿತರ ದಿನಕ್ಕೆ 45 ಲಕ್ಷ ಹಂಚಿದ!

10:26 AM Aug 13, 2018 | Team Udayavani |

ಜಬಲ್ಪುರ: ಸ್ನೇಹಿತರ ದಿನದಂದು ಗೆಳೆಯರ ಕೈಗೆ ಬ್ಯಾಂಡ್‌ ಕಟ್ಟುವುದನ್ನು, ಸಣ್ಣಪುಟ್ಟ ಉಡುಗೊರೆ ನೀಡುವುದನ್ನು ನೋಡಿದ್ದೇವೆ. ಆದರೆ, ಮಧ್ಯಪ್ರದೇಶದ 10ನೇ ತರಗತಿಯ ಬಾಲಕನೊಬ್ಬ ಬರೋಬ್ಬರಿ 45 ಲಕ್ಷ ರೂ.ಗಳನ್ನು ಫ್ರೆಂಡ್‌ಶಿಪ್‌ ಡೇಗೆ ಖರ್ಚು ಮಾಡಿದ್ದಾನೆ.  

Advertisement

ಜಬಲ್ಪುರದ ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರು ಜಮೀನು ಮಾರಿ ಬಂದಿದ್ದ 60 ಲಕ್ಷ ರೂ.ಗಳನ್ನು ಬೀರುವಿನಲ್ಲಿ ಇರಿಸಿದ್ದರು. ಈ ಪೈಕಿ 45 ಲಕ್ಷ ರೂ. ಎತ್ತಿಕೊಂಡು ಹೋದ ಅವರ ಪುತ್ರ, 15 ಲಕ್ಷ ರೂ.ಗಳನ್ನು ದಿನಗೂಲಿ ನೌಕರರೊಬ್ಬನ ಮಗನಿಗೆ, 3 ಲಕ್ಷ ರೂ.ವನ್ನು ಹೋಂವರ್ಕ್‌ ಮುಗಿಸಿದ ಸ್ನೇಹಿತನಿಗೆ “ಉಡುಗೊರೆ’ಯಾಗಿ ನೀಡಿದ್ದಾನೆ. ಸಹಪಾಠಿಗಳು, ಕಷ್ಟದಲ್ಲಿರುವವರು, ಹೀಗೆ ಅಗತ್ಯವಿರುವ ಎಲ್ಲರಿಗೂ ಹಣ ನೀಡಿ ಮುಗಿಸಿದ್ದಾನೆ. 

ಬೀರು ತೆರೆದು ನೋಡುವವರೆಗೆ ತಂದೆಗೆ ಈ ವಿಚಾರವೇ ಗೊತ್ತಿರಲಿಲ್ಲ. ಹಣ ಕಾಣೆಯಾಗಿದ್ದು ಕಂಡ ಕೂಡಲೇ ದೂರು ನೀಡಿದರು. ವಿಚಾರಣೆ ಆರಂಭಿಸಿದ ಬಳಿಕ ಮಗನ ಕೃತ್ಯ ಬೆಳಕಿಗೆ ಬಂದಿದೆ.  ಆತ 35ಕ್ಕೂ ಹೆಚ್ಚು ಸ್ನೇಹಿತರಿಗೆ ಸ್ಮಾರ್ಟ್‌ ಫೋನ್‌, ಬೆಳ್ಳಿ ಬ್ರೇಸ್‌ಲೆಟ್‌ ಮೊದಲಾದವುಗಳನ್ನು ಖರೀದಿಸಿ ನೀಡಿದ್ದಾನೆ. 15 ಲಕ್ಷ ಪಡೆದುಕೊಂಡಾತ ಅದರಿಂದ ಕಾರು ಖರೀದಿಸಿದ್ದಾನೆ. ಹಣ ಪಡೆದುಕೊಂಡವರಿಗೆ 5 ದಿನ ಸಮಯ ನೀಡಲಾಗಿದ್ದು, ಹಣ ವಾಪಸ್‌ ನೀಡಲು ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next