Advertisement

ಖಾಲಿದ್ ಗೆ ಆಹ್ವಾನ; ದೆಹಲಿ ವಿವಿಯಲ್ಲಿ ಎಬಿವಿಪಿ,ಎಐಎಸ್ ಎ ಮಾರಾಮಾರಿ

03:36 PM Feb 22, 2017 | Team Udayavani |

ನವದೆಹಲಿ:ಜೆಎನ್ ಯು ವಿದ್ಯಾರ್ಥಿ ಉಮರ್ ಖಾಲಿದ್ ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದನ್ನು ವಿರೋಧಿಸಿ ಎಬಿವಿಪಿ ಮತ್ತು ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಶನ್ (ಎಐಎಸ್ ಎ) ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದ ಘಟನೆ ದೆಹಲಿ ವಿವಿಯ ರಾಮ್ಜಾಸ್ ಕಾಲೇಜಿನಲ್ಲಿ ಬುಧವಾರ ನಡೆದಿದೆ.

Advertisement

ಸಭೆಗೆ ಉಮರ್ ಖಾಲಿದ್ ನನ್ನು ಆಹ್ವಾನಿಸಿದ್ದಕ್ಕೆ ಎಬಿವಿಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಸಂದರ್ಭದಲ್ಲಿ ಉಭಯ ವಿದ್ಯಾರ್ಥಿ ಸಂಘಟನೆಗಳ ನಡುವೆ ಹೊಯ್ ಕೈ ನಡೆದಿದೆ. ಪೊಲೀಸರು ಮಧ್ಯಪ್ರವೇಶಿಸಿದಾಗ ಅಲ್ಲಿಯೂ ಘರ್ಷಣೆ ನಡೆದಿದ್ದು, ಇದರಿಂದಾಗಿ ಉಪನ್ಯಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉಮರ್ ಖಾಲಿದ್ ಆಹ್ವಾನವನ್ನು ರದ್ದುಪಡಿಸಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಕಳೆದ ವರ್ಷ ಜೆಎನ್ ಯುನಲ್ಲಿ ನಡೆದಿದ್ದ ದೇಶದ್ರೋಹ ಆರೋಪದ ಪ್ರಕರಣದಲ್ಲಿ ಉಮರ್ ಖಾಲಿದ್ ಕೂಡಾ ಒಬ್ಬನಾಗಿದ್ದ.

ರಮ್ಜಾಸ್ ಕಾಲೇಜಿನಲ್ಲಿ ಭಾಷಣಕಾರನನ್ನಾಗಿ ಉಮರ್ ಖಾಲಿದ್ ನನ್ನು ಆಹ್ವಾನಿಸಿದ್ದಕ್ಕೆ ಮಂಗಳವಾರ ಎಬಿವಿಪಿ ಕಾಲೇಜಿನ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿ, ದೇಶ ವಿರೋಧಿಗಳಿಗೆ ಮಣೆ ಹಾಕಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿತ್ತು. ತದನಂತರ ಕಾಲೇಜಿನತ್ತ ಕಲ್ಲು ತೂರಾಟ ನಡೆಸಿ, ಸೆಮಿನಾರ್ ಕೋಣೆಗಳಿಗೆ ಬೀಗ ಹಾಕಿದ್ದಲ್ಲದೆ, ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದಾಗಿ ಕಾಲೇಜು ಮಂಡಳಿ ದೂರಿತ್ತು. ಆದರೆ ಎಬಿವಿಪಿ ಈ ಆರೋಪವನ್ನು ಅಲ್ಲಗಳೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next