Advertisement

ಆಂಧ್ರ ಪ್ರದೇಶ : ಕೈಕೊಟ್ಟ ಮತಯಂತ್ರಗಳು, TDP-YSRC ಕಾರ್ಯಕರ್ತರ ಮಾರಾಮಾರಿ

09:45 AM Apr 12, 2019 | Sathish malya |

ಅಮರಾವತಿ : ಆಂಧ್ರ ಪ್ರದೇಶದಲ್ಲಿ ತೆಲುಗು ದೇಶಂ ಪಕ್ಷ ಮತ್ತು ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರ ಪರಸ್ಪರ ಹೊಡೆದಾಡಿಕೊಂಡಿರುವ ಘಟನೆಗಳು ವರದಿಯಾಗಿವೆ.

Advertisement

ಇದೇ ವೇಳೆ ಆಂಧ್ರ ಪ್ರದೇಶದ ಅನೇಕ ಮತಗಟ್ಟೆಗಳಲ್ಲಿ ಇಂದು ಮತದಾನದ ವೇಳೆ ಇವಿಎಂ ಗಳಲ್ಲಿ ತಾಂತ್ರಿಕ ದೋಷ ಕಂಡು ಬಂದು ಮತದಾನಕ್ಕೆ ಅಡಚಣೆ ಉಂಟಾದ ವರದಿಗಳೂ ಬಂದಿವೆ. ಮತದಾನಕ್ಕೆ ಬಂದಿದ್ದವರಿಗೆ ದೀರ್ಘ‌ ಕಾಲ ಕಾಯುವ ಸ್ಥಿತಿ ಉಂಟಾಯಿತು

ಆಂಧ್ರ ಪ್ರದೇಶದ 25 ಲೋಕಸಭಾ ಮತ್ತು 175 ವಿಧಾನಸಭಾ ಸ್ಥಾನಗಳಿಗೆ ಇಂದು ಏಕಕಾಲದಲ್ಲಿ ಮತದಾನ ನಡೆಯುತ್ತಿದೆ.

ಮತ ಯಂತ್ರದ ಬ್ಯಾಲೆಟ್‌ ಯೂನಿಟ್‌ನಲ್ಲಿ ಪಕ್ಷದ ಚಿಹ್ನೆಗಳು ಸರಿಯಾಗಿ ಕಂಡುಬರುತ್ತಿಲ್ಲ ಎಂಬ ಕಾರಣಕ್ಕೆ ಕೋಪೋದ್ರಿಕ್ತರಾದ ಜನ ಸೇನಾ ಪಕ್ಷದ ಸ್ಪರ್ಧಾಳು ಅಭ್ಯರ್ಥಿ, ಮಾಜಿ ಗುಂತಕಲ್‌ ಶಾಸಕ ಮಧುಸೂದನ್‌ ಗುಪ್ತಾ ಅವರು ಸಿಟ್ಟಿನ ಆವೇಶದಲ್ಲಿ ಮತಯಂತ್ರವನ್ನೇ ಧ್ವಂಸಗೊಳಿಸಿದರು.

ಮಾತ್ರವಲ್ಲದೆ ಕರ್ತವ್ಯ ನಿರತ ಚುನಾವಣಾಧಿಕಾರಿಗಳನ್ನು ತಾರಕ ಸ್ವರದಲ್ಲಿ ತರಾಟೆಗೆ ತೆಗೆದುಕೊಂಡರು. ಗುಪ್ತಾ ಅವರನ್ನು ಒಡನೆಯೇ ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡರು.

Advertisement

TDP ಕಾರ್ಯಕರ್ತರೊಂದಿಗಿನ ಜಗಳದಲ್ಲಿ ವೈಎಸ್‌ಆರ್‌ಸಿ ಮಂಡಲ ಪರಿಷತ್‌ ಸದಸ್ಯರೊಬ್ಬರು ಗಾಯಗೊಂಡ ಘಟನೆ ಏಲೂರು ಜಿಲ್ಲೆಯಲ್ಲಿ ನಡೆಯಿತು.

ಕಡಪ ಜಿಲ್ಲೆಯ ಜಮ್ಮಲಮಡುಗು ತಾಲೂಕಿನ ಪೊನ್ನ ತೋಟ ಗ್ರಾಮದಲ್ಲಿ ವೈಎಸ್‌ಆರ್‌ಸಿ ಮತ್ತು ಟಿಡಿಪಿ ಕಾರ್ಯಕರ್ತರು ಪರಸ್ಪರ ಕಲ್ಲೆಸೆತದಲ್ಲಿ ತೊಡಗಿಕೊಂಡರು.

ಪೊಲೀಸರು ಕೂಡಲೇ ಎರಡೂ ಕಡೆಯ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next