ಕೋಲ್ಕತ್ತಾ: ಕರ್ನಾಟಕದಲ್ಲಿ ದೊಡ್ಡ ಮಟ್ಟದ ವಿವಾದ ಸೃಷ್ಟಿಸಿದ್ದ “ಶಾಲೆಗಳಲ್ಲಿ ಹಿಜಾಬ್ ಪ್ರಕರಣ’ ಈಗ ಪಶ್ಚಿಮ ಬಂಗಾಳಕ್ಕೂ ಕಾಲಿಟ್ಟಿದೆ. ಇಲ್ಲಿ ಹೌರಾದ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ಹಿಜಾಬ್ ಮತ್ತು ಕೇಸರಿ ಶಾಲು ಧರಿಸಿಕೊಂಡು ಬಂದ ಕಾರಣ, ಎರಡು ಗುಂಪುಗಳ ನಡುವೆ ಗದ್ದಲ ಉಂಟಾಗಿದೆ.
ಜತೆಗೆ, ಕೆಲವು ವಿದ್ಯಾರ್ಥಿಗಳು ಶಾಲಾ ಆಸ್ತಿಪಾಸ್ತಿಗಳಿಗೆ ಹಾನಿ ಉಂಟುಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಲೆಯಲ್ಲಿ ನಡೆಯುತ್ತಿದ್ದ 11 ಮತ್ತು 12ನೇ ತರಗತಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಬಳಿಕ ಆಡಳಿತ ಮಂಡಳಿ ಸಭೆ ನಡೆಸಿ, ಎಲ್ಲ ವಿದ್ಯಾರ್ಥಿಗಳೂ ಶಾಲಾ ಸಮವಸ್ತ್ರದಲ್ಲೇ ಬರಬೇಕು ಎಂದು ಸೂಚಿಸಿದೆ.
ಈ ವಿಚಾರವು ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿ ನಡುವೆ ವಾಕ್ಸಮರಕ್ಕೂ ಕಾರಣವಾಗಿದೆ.
Related Articles