Advertisement
ಅಲ್ಲದೆ, ಈ ಹಿಂದೆ ವಾಜಪೇಯಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ಬೆಂಬಲ ನೀಡಿದ್ದ ತಮಿಳುನಾಡಿನ ಡಿಎಂಕೆ ನಾಯಕ ಕರುಣಾನಿಧಿ ಮುಂದೆ 2004 ಮತ್ತು 2009ರ ಚುನಾವಣೆಯಲ್ಲಿ ಬೆಂಬಲ ಭಿಕ್ಷೆ ಕೋರಿದ್ದ ಕಾಂಗ್ರೆಸ್‌ಗೆ ಡಿಎಂಕೆ ಸ್ವತ್ಛವಾಗಿ ಕಂಡಿತ್ತೇ? ಆ ಸ್ವತ್ಛತೆಗೆ ಕಾಂಗ್ರೆಸ್ ಯಾವ ಸೋಪು ಬಳಸಿತ್ತೆಂದು ಹೇಳಲಿ. ಆ ಸೋಪಿನಲ್ಲೇ ತೊಳೆದುಕೊಳ್ಳುತ್ತೇವೆ ಎಂದು ತೀಕ್ಷ್ಮವಾಗಿ ತಿರುಗೇಟು ನೀಡಿದ್ದಾರೆ.
Related Articles
– 2004ರಲ್ಲಿ ಸೋನಿಯಾ ಗಾಂಧಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾಗಿ ಆಯ್ಕೆಯಾಗುವ ವೇಳೆ ಅವರು ದೇಶದ ಪ್ರಜೆಯೇ ಅಲ್ಲ ಎಂಬ ಮಾತು ಕೇಳಿಬಂತು. ಆಗ ಪ್ರತಿಪಕ್ಷ ನಾಯಕಿಯಾಗಿದ್ದ ಸೋನಿಯಾ ಆಡಳಿತ ಪಕ್ಷದ ನಾಯಕಿ ಆಗಬಹುದು ಎಂದು ನಾನು ಹೇಳಿದ್ದೆ.
Advertisement
– 3 ಮತಗಳ ಕೊರತೆಯಿಂದ ಮನಮೋಹನ್ ಸಿಂಗ್ ಸರ್ಕಾರ ಉರುಳುವ ಸಂದರ್ಭ ಎದುರಾದಾಗ ಬೆಂಬಲ ಸೂಚಿಸಿ ಸರ್ಕಾರಉರುಳದಂತೆ ನೋಡಿಕೊಂಡೆ. ಈ ಕೃತಜ್ಞತೆಯೂ ಇಲ್ಲದೆ ರಾಹುಲ್ ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತಿರುವುದು ಬೆಳೆಯುವ ಯುವ ನಾಯಕನಿಗೆ ತಕ್ಕುದಲ್ಲ. – ಯಾರೋ ಚೀಟಿಯಲ್ಲಿ ಬರೆದುಕೊಟ್ಟಿದ್ದನ್ನು ಓದುವುದಲ್ಲ. ಈ ದೇವೇಗೌಡ ಅಂದರೆ ಏನೆಂದು ತಿಳಿದುಕೊಂಡಿದ್ದೀರಿ? ಬಾಬರಿ ಮಸೀದಿ ಕೆಡವಿದಾಗ ದೇಶದಲ್ಲಿ ಯಾರ ಸರ್ಕಾರವಿತ್ತು? ಈ ದೇಶ ಇಷ್ಟು ಕೆಟ್ಟ ಸ್ಥಿತಿಗೆ ಬರಲು ಕಾರಣರಾರು? ದೇಶದ ಇತಿಹಾಸ ಗೊತ್ತಿದೆಯಾ? ನನ್ನ ತಾಳ್ಮೆಗೂ ಮಿತಿಯಿದೆ. 85ನೇ ವಯಸ್ಸಿನಲ್ಲೂ ಹೋರಾಡುತ್ತಿದ್ದೇನೆ. ಅದರ ಉದ್ದೇಶ ಅರ್ಥಮಾಡಿಕೊಂಡು ಮಾತನಾಡಿ. – ರಾಹುಲ್ 5ನೇ ಸುತ್ತಿನ ರಾಜ್ಯ ಪ್ರವಾಸಕ್ಕೆ ಬರುತ್ತಿದ್ದಾರಂತೆ. ಐದಲ್ಲ, 20 ಬಾರಿ ಬೇಕಾದರೂ ಕರ್ನಾಟಕಕ್ಕೆ ಬರಲಿ. ನಾನೂ ನೋಡಿಯೇ ಬಿಡುತ್ತೇನೆ. ಅಧಿಕಾರ ದುರ್ಬಳಗೆ ಮಾಡಿಕೊಂಡು ಜೆಡಿಎಸ್ ಕಾರ್ಯಕರ್ತರನ್ನು ರೌಡಿ ಪಟ್ಟಿಗೆ ಸೇರಿಸಿದ ಕೂಡಲೇ ಜೆಡಿಎಸ್ ನಾಶವಾಗುತ್ತದೆ ಎಂದು ಭಾವಿಸಿದ್ದೀರಾ? ಈ ಸವಾಲನ್ನು ನಾನು ಸ್ವೀಕರಿಸುತ್ತೇನೆ. ಅಖಾಡದಲ್ಲಿ ನೋಡಿಯೇ ಬಿಡೋಣ.