ನವದೆಹಲಿ: ಭಾರತದ ನೂತನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ನೇಮಕಕ್ಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಈ ಹಿನ್ನೆಲೆಯಲ್ಲಿ ತಮ್ಮ ಮುಂದಿನ ನೂತನ ಸಿಜೆಐ ಹೆಸರನ್ನು ಶಿಫಾರಸು ಮಾಡುವಂತೆ ಸುಪ್ರೀಂಕೋರ್ಟ್ ನ ಹಾಲಿ ಸಿಜೆಐ ಜಸ್ಟೀಸ್ ಲಲಿತ್ ಅವರಿಗೆ ಕೇಂದ್ರ ಸರ್ಕಾರ ಶುಕ್ರವಾರ (ಅ.07) ಪತ್ರ ಬರೆದಿರುವುದಾಗಿ ವರದಿ ತಿಳಿಸಿದೆ. ಜಸ್ಟೀಸ್ ಯು.ಯು. ಲಲಿತ್ ಅವರು ನವೆಂಬರ್ 8ರಂದು ಸಿಜೆಐ ಸ್ಥಾನದಿಂದ ನಿವೃತ್ತರಾಗಲಿದ್ದಾರೆ.
ಇದನ್ನೂ ಓದಿ:ವಂದೇ ಭಾರತ್ ರೈಲಿಗೆ ಢಿಕ್ಕಿಯಾದ ಎಮ್ಮೆಗಳ ಮಾಲೀಕರ ವಿರುದ್ಧ ಎಫ್ ಐಆರ್
ನಿವೇದನ ಪತ್ರದ ಕಾರ್ಯವಿಧಾನದ ಪ್ರಕಾರ, ಸುಪ್ರೀಂಕೋರ್ಟ್ ನ ನೂತನ ಸಿಜೆಐ ಹೆಸರನ್ನು ಶಿಫಾರಸು ಮಾಡುವಂತೆ ಕಾನೂನು ಮತ್ತು ನ್ಯಾಯ ಸಚಿವಾಲಯ ಇಂದು ಸಿಜೆಐ ಯು.ಯು.ಲಲಿತ್ ಅವರಿಗೆ ಪತ್ರ ಬರೆದಿರುವುದಾಗಿ ಟ್ವೀಟ್ ನಲ್ಲಿ ತಿಳಿಸಿದೆ.
ಸಚಿವಾಲಯ ಇದೇ ಮೊದಲ ಬಾರಿಗೆ ನೂತನ ಸಿಜೆಐ ನೇಮಕಾತಿ ಕುರಿತು ಟ್ವೀಟ್ ಮಾಡಿರುವುದಾಗಿ ವರದಿ ವಿವರಿಸಿದೆ. ನಿಯಮದ ಪ್ರಕಾರ ಅತೀ ಹಿರಿಯ ಜಡ್ಜ್ ಗಳ ಹೆಸರನ್ನು ಶಿಫಾರಸು ಮಾಡುವುದು ಪದ್ಧತಿಯಾಗಿದೆ.
ವರದಿಯ ಪ್ರಕಾರ, ಜಸ್ಟೀಸ್ ಡಿ.ವೈ.ಚಂದ್ರಚೂಡ್ ಅವರು ಅತೀ ಹಿರಿಯ ಜಡ್ಜ್ ಆಗಿದ್ದು, ನವೆಂಬರ್ 9ರಂದು ಸುಪ್ರೀಂಕೋರ್ಟ್ ನ ನೂತನ ಸಿಜೆಐ ಆಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದ್ದಿರುವುದಾಗಿ ತಿಳಿಸಿದೆ.