ನವದೆಹಲಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡೆ ಅವರು ನಿವೃತ್ತಿ ನಂತರ ನೂತನ ಉತ್ತರಾಧಿಕಾರಿಯನ್ನಾಗಿ ಜಸ್ಟೀಸ್ ಎನ್ ವಿ ರಮಣ ಅವರ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. 2021ರ ಏಪ್ರಿಲ್ 23ರಂದು ಸಿಜೆಐ ಬೋಬ್ಡೆ ನಿವೃತ್ತಿಯಾಗುತ್ತಿದ್ದು, ಎನ್ ವಿ ರಮಣ ಅವರ ಹೆಸರನ್ನು ನೂತನ ಸಿಜೆಐಗೆ ಶಿಫಾರಸು ಮಾಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಏಪ್ರಿಲ್ 27 ರಂದು ಪತ್ರಕರ್ತ ತರುಣ್ ತೇಜ್ ಪಾಲ್ ವಿರುದ್ಧದ ಅತ್ಯಾಚಾರ ಪ್ರಕರಣದ ತೀರ್ಪು
ಜಸ್ಟೀಸ್ (ನಿವೃತ್ತ) ರಂಜನ್ ಗೊಗೊಯಿ ಅವರ ನಂತರ 2019ರ ನವೆಂಬರ್ ನಲ್ಲಿ ಜಸ್ಟೀಸ್ ಬೋಬ್ಡೆ ಅವರು ಸುಪ್ರೀಂಕೋರ್ಟ್ ನ 47ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ನಿವೃತ್ತಿಯ ನಂತರ ನೂತನ ಸಿಜೆಐಯ ಹೆಸರನ್ನು ಶಿಫಾರಸು ಮಾಡುವಂತೆ ಕೇಂದ್ರ ಸರ್ಕಾರ ಕೇಳಿದ ನಂತರ ಈ ಬೆಳವಣಿಗೆ ನಡೆದಿದೆ.
ಸುಪ್ರೀಂಕೋರ್ಟ್ ನ ಹಾಲಿ ಮುಖ್ಯ ನ್ಯಾಯಾಧೀಶರು ನಿವೃತ್ತಿಯಾಗುವ ಮುನ್ನ ನೂತನ ಸಿಜೆಐ ಹೆಸರನ್ನು ಶಿಫಾರಸು ಮಾಡುವುದು ಸಂಪ್ರದಾಯವಾಗಿದೆ. ಸಿಜೆಐ ಬೋಬ್ಡೆ ಅವರ ನಂತರ ಜಸ್ಟೀಸ್ ಎನ್ ವಿ ರಮಣ ಸುಪ್ರೀಂಕೋರ್ಟ್ ನಲ್ಲಿ ಹಿರಿಯ ನ್ಯಾಯಾಧೀಶರಾಗಿದ್ದಾರೆ.
1957ರ ಆಗಸ್ಟ್ 27ರಂದು ಜನಿಸಿರುವ ಜಸ್ಟೀಸ್ ರಮಣ ಅವರ ಸೇವಾವಧಿ 2022ರ ಆಗಸ್ಟ್ 26ರವರೆಗೆ ಇದ್ದಿರುವುದಾಗಿ ವರದಿ ತಿಳಿಸಿದೆ. ಎನ್ ವಿ ರಮಣ ಅವರು ದಿಲ್ಲಿ ಹೈಕೋರ್ಟ್ ನ ಚೀಫ್ ಜಸ್ಟೀಸ್ ಆಗಿ ಸೇವೆ ಸಲ್ಲಿಸಿದ್ದರು.