ಹೊಸದಿಲ್ಲಿ: ಇನ್ನು ಮುಂದೆ ಜಡ್ಜ್ಗಳು ಕೆಲಸದ ದಿನಗಳಲ್ಲಿ ರಜೆ ತೆಗೆದು ಕೊಳ್ಳುವಂತಿಲ್ಲ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿರುವ ರಂಜನ್ ಗೊಗೋಯ್ ಅವರೇ ವಾರದ ದಿನಗಳಲ್ಲಿ ನ್ಯಾಯಮೂರ್ತಿಗಳು ರಜೆ ತೆಗೆದುಕೊಳ್ಳುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ. ಸುಪ್ರೀಂಕೋರ್ಟ್ ನ್ಯಾಯ ಮೂರ್ತಿಗಳು, ದೇಶದ ಹೈಕೋರ್ಟ್ ನ್ಯಾಯಮೂರ್ತಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಸಂದರ್ಭದಲ್ಲಿ ಸಿಜೆಐ ಗೊಗೋಯ್ ಈ ವಿಚಾರ ಸ್ಪಷ್ಟಪಡಿಸಿದ್ದಾರೆ. ಸುಪ್ರೀಂ ಕೋರ್ಟ್, ಹೈಕೋರ್ಟ್ ಮತ್ತು ಕೆಳ ಹಂತದ ಕೋರ್ಟ್‌ಗಳಲ್ಲಿ 3 ಕೋಟಿಗೂ ಅಧಿಕ ಕೇಸುಗಳು ವಿಚಾರಣೆಗೆ ಬಾಕಿ ಇವೆ. ಈ ಹೊರೆ ತಗ್ಗಿಸಲು ಅನುಸರಿಸ ಬೇಕಾದ ಕ್ರಮಗಳ ಬಗ್ಗೆ ಮುಖ್ಯ ನ್ಯಾಯಮೂರ್ತಿ ಚರ್ಚಿಸಿದ್ದಾರೆ. ಈ ವೇಳೆ, ಇಂಥದ್ದೊಂದು ಘೋಷಣೆ ಮಾಡಿದ್ದಾರೆ.
ಕೇವಲ ಜರೂರಿನ ಕೆಲಸ ಅಥವಾ ತುರ್ತಿನ ಸಂದರ್ಭಗಳಲ್ಲಿ ಮಾತ್ರ ಕೆಲಸದ ದಿನಗಳಲ್ಲಿ ನ್ಯಾಯಮೂರ್ತಿಗಳು ರಜೆ ತೆಗೆದುಕೊಳ್ಳಬಹುದು. ಅದು ಹೊರ ತಾಗಿ ಅವರು ರಜೆಯಲ್ಲಿ ತೆರಳುವಂತಿಲ್ಲ. ಅಲ್ಲದೆ, ಕೆಲಸದ ದಿನಗಳಲ್ಲಿ ವಿಚಾರ ಸಂಕಿರಣಗಳಲ್ಲೂ ಜಡ್ಜ್ಗಳು ಭಾಗವಹಿಸ ಬಾರದು ಎಂದೂ ಸಿಜೆಐ ಹೇಳಿದ್ದಾರೆ. ಇದರಿಂದಾಗಿ ಆ ದಿನಕ್ಕೆ ನಿಗದಿಯಾಗಿರುವ ಪ್ರಕರಣಗಳ ವಿಚಾರಣೆ ಮಾರನೇ ದಿನಕ್ಕೆ ಮುಂದೂಡಿಕೆಯಾಗುತ್ತದೆ ಎಂದಿದ್ದಾರೆ ಮುಖ್ಯ ನ್ಯಾಯಮೂರ್ತಿ.
ಕಠಿಣ ಕ್ರಮಕ್ಕೆ ಸೂಚನೆ: ನ್ಯಾಯದಾನ ಕ್ರಮಕ್ಕೆ ಮತ್ತು ನಿಯಮಕ್ಕೆ ಒಳಪಟ್ಟು ವರ್ತಿಸದ ನ್ಯಾಯಮೂರ್ತಿಗಳ ವಿರುದ್ಧ ಕಠಿಣವಾಗಿ ವರ್ತಿಸಿ. ಅಂಥ ನ್ಯಾಯ ಮೂರ್ತಿಗಳಿಗೆ ಕೇಸುಗಳ ಹಂಚಿಕೆ ಮಾಡ ಬೇಡಿ. ಇದರ ಹೊರತಾಗಿಯೂ ಸಮಸ್ಯೆ ಗಳು ಉಂಟಾದರೆ, ನಿಯಮ ಪಾಲಿಸದ ಜಡ್ಜ್ಗಳ ಬಗ್ಗೆ ನಮಗೆ ಹೈಕೋರ್ಟ್‌ನ ನ್ಯಾಯಮೂರ್ತಿಗಳು ಮಾಹಿತಿ ನೀಡಲಿ. ಅಂಥವರ ಜತೆ ಸುಪ್ರೀಂಕೋರ್ಟ್ ವೈಯಕ್ತಿಕವಾಗಿ ವ್ಯವಹರಿಸಲಿದೆ ಎಂದು ಹೇಳಿದ್ದಾರೆ. ಇದರ ಜತೆಗೆ ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾದ ನ್ಯಾಯಮೂರ್ತಿ ಗಳಿಗೂ ಕೆಲಸದ ಹಂಚಿಕೆ ಬೇಡ ಎಂದಿದ್ದಾರೆ.
ಹೈಕೋರ್ಟ್‌ನ ಮುಖ್ಯ ನ್ಯಾಯಮೂ ರ್ತಿಯೊಬ್ಬರು ಹತ್ತು ಅಂಶಗಳ ಕಾರ್ಯ ಸೂಚಿಯನ್ನು ಮುಂದಿಟ್ಟು ಅದರ ಮೂಲಕ ವಿಚಾರಣೆಗೆ ಬಾಕಿ ಇರುವ ಕೇಸುಗಳ ವಿಲೇವಾರಿಗೆ ಸಲಹೆ ಮುಂದಿಟ್ಟಿ ದ್ದಾರೆ ಎಂದು ಎರಡು ಪ್ರಮುಖ ಆಂಗ್ಲ ಪತ್ರಿಕೆಗಳು ವರದಿ ಮಾಡಿವೆ.
24 ದೇಶದಲ್ಲಿರುವ ಹೈಕೋರ್ಟ್‌ಗಳು
43 ಲಕ್ಷ ಹೈಕೋರ್ಟ್‌ಗಳಲ್ಲಿ ವಿಚಾರಣೆಗೆ ಬಾಕಿ ಇರುವ ಕೇಸುಗಳು
55,946 ಸುಪ್ರೀಂಕೋರ್ಟಲ್ಲಿ ವಿಚಾರಣೆಗೆ ಬಾಕಿ ಇರುವ ಕೇಸುಗಳು
3 ಕೋಟಿ ದೇಶಾದ್ಯಂತ ಕೋರ್ಟ್‌ಗಳಲ್ಲಿ ಬಾಕಿಯಿರುವ ಕೇಸುಗಳು