Advertisement

ಜಸ್ಟಿಸ್‌ ಗೊಗೋಯ್‌ ಮುಂದಿನ ಸಿಜೆಐ: ಕೇಂದ್ರಕ್ಕೆ ಜ|ದೀಪಕ್‌ ಮಿಶ್ರಾ

12:10 PM Sep 04, 2018 | Team Udayavani |

ಹೊಸದಿಲ್ಲಿ : ಸುಪ್ರೀಂ ಕೋಟಿನ ವರಿಷ್ಠ ನ್ಯಾಯಮೂರ್ತಿ (ಸಿಜೆಐ) ದೀಪಕ್‌ ಮಿಶ್ರಾ ಅವರು ಇಂದು ಮಂಗಳವಾರ ಕೇಂದ್ರ ಸರಕಾರಕ್ಕೆ ಪತ್ರ ಬರೆದು ತಮ್ಮ ಉತ್ತರಾಧಿಕಾರಿಯಾಗಿ (ಮುಂದಿನ ವರಿಷ್ಠ ನ್ಯಾಯಮೂರ್ತಿ) ಜಸ್ಟಿಸ್‌ ರಂಜನ್‌ ಗೊಗೋಯ್‌ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ. 

Advertisement

ಸಿಜೆಐ ದೀಪಕ್‌ ಮಿಶ್ರಾ ಅವರ ನಿವೃತ್ತಿಗೆ ಇನ್ನು ಒಂದು ತಿಂಗಳಿದೆ. ಜಸ್ಟಿಸ್‌ ಗೊಗೋಯ್‌ ಅವರು ಹಿರಿತನಕ್ಕೆ ಆದ್ಯತೆ ಇರುವ ನೆಲೆಯಲ್ಲಿ ಜಸ್ಟಿಸ್‌ ಗೊಗೋಯ್‌ ತಮ್ಮ ಉತ್ತರಾಧಿಕಾರಿಯಾಗಬಲ್ಲರು ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯಕ್ಕೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ. 

ಸಿಜೆಐ ದೀಪಕ್‌ ಮಿಶ್ರಾ ಅವರು ಅ.2ರಂದು ತಮ್ಮ ಹುದ್ದೆಯಿಂದ ನಿವೃತ್ತರಾಗುತ್ತಾರೆ. ಜಸ್ಟಿಸ್‌ ಗೊಗೋಯ್‌ ಅವರಿಗೆ 2012ರ ಎ.23ರಂದು ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಿಗೆ ಭಡ್ತಿ ದೊರೆತಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next