Advertisement

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ

11:51 PM Oct 23, 2021 | Team Udayavani |

ಹೊಸದಿಲ್ಲಿ: ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಮೂಲ ಸೌಕರ್ಯಗಳ ಕೊರತೆಯ ಬಗ್ಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ದನಿಯೆತ್ತಿದ್ದಾರೆ.

Advertisement

ಹೊಸದಿಲ್ಲಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಅವರ ಸಮ್ಮುಖದಲ್ಲೇ ಈ ವಿಚಾರವನ್ನು ಅವರು ಪ್ರಸ್ತಾವಿಸಿದ್ದಾರೆ.

“ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವ ವಿಚಾರ ಯಾವತ್ತಿಗೂ ನಿರ್ಲಕ್ಷಿತ ವಿಚಾರವಾಗಿಯೇ ಉಳಿದಿದೆ. ಇಂಥ ಮನಃಸ್ಥಿತಿಗಳಿಂದಾಗಿ, ದೇಶದ ನ್ಯಾಯಾಲಯಗಳು ಶಿಥಿಲಗೊಂಡಿರುವ ವ್ಯವಸ್ಥೆಗಳಡಿ ಕಾರ್ಯ ನಿರ್ವಹಿಸುತ್ತಿವೆ. ಇದರಿಂದಾಗಿ, ನ್ಯಾಯಾಲಯಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ಕಷ್ಟವಾಗುತ್ತಿದೆ’ ಎಂದು ನ್ಯಾ| ರಮಣ ವಿಷಾದಿಸಿದ್ದಾರೆ.

“ದೇಶದ ಒಟ್ಟಾರೆ ನ್ಯಾಯಾಲಯಗಳ ಪೈಕಿ ಕೇವಲ ಶೇ.5ರಷ್ಟರಲ್ಲಿ ಮಾತ್ರ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಿವೆ. ಶೇ. 26ರಷ್ಟು ನ್ಯಾಯಾಲಯಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯವೇ ಇಲ್ಲ. ಶೇ.16ರಷ್ಟು ಕೋರ್ಟ್‌ಗಳಲ್ಲಿ ಪುರು ಷರಿಗೆ ಶೌಚಾಲಯವಿಲ್ಲ ಎಂದು ತಿಳಿಸಿದ ಅವರು, ಶೇ. 50ರಷ್ಟು ನ್ಯಾಯಾಲಯಗಳಲ್ಲಿ ಗ್ರಂಥಾಲಯಗಳಿಲ್ಲ. ಶೇ. 46ರಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ’ ಎಂದು ಅವರು ವಿವರಿಸಿದ್ದಾರೆ.

ಇದನ್ನೂ ಓದಿ:ಭೀಮಾ ಕೋರೆಗಾಂವ್‌ ಪ್ರಕರಣ: ವಿಚಾರಣೆಗೆ ರಶ್ಮಿ ಶುಕ್ಲಾ, ಪರಂಬೀರ್‌ ಸಿಂಗ್‌ಗೆ ಸಮನ್ಸ್‌ ಜಾರಿ

Advertisement

ಈ ಅವ್ಯವಸ್ಥೆಗಳನ್ನು ಸರಿಪಡಿಸಲು, ರಾಷ್ಟ್ರೀಯ ನ್ಯಾಯಾಂಗ ಮೂಲಸೌಕರ್ಯ ಪ್ರಾಧಿಕಾರ ರಚಿಸಬೇಕು ಎಂದು ಅವರು ರಿಜಿಜು ಅವರನ್ನು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next