Advertisement

ಸುಪ್ರೀಂ ಮುಖ್ಯ ನ್ಯಾಯಮೂರ್ತಿ ತಾಯಿಗೆ 2.5 ಕೋಟಿ ರೂ. ವಂಚನೆ: ಆರೋಪಿ ಬಂಧನ

10:13 AM Dec 10, 2020 | keerthan |

ನಾಗ್ಪುರ: ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೋಬ್ಡೆ ಅವರ ತಾಯಿ ಮುಕ್ತಾ ಬೋಬ್ಡೆ ಅವರಿಗೆ 2.5 ಕೋಟಿ ರೂ. ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಅವರ ಆಸ್ತಿಯ ನೋಡಿಕೊಳ್ಳುತ್ತಿದ್ದ ತಪಸ್‌ ಘೋಷ್‌ (49) ಎಂಬಾತನೇ ಈ ಕೃತ್ಯವನ್ನೆಸಗಿದ್ದು, ಆತನನ್ನು ಬಂಧಿಸಲಾಗಿದೆ ಎಂದು ನಾಗ್ಪುರ ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ನಾಗ್ಪುರ ಪೊಲೀಸ್‌ ಅಮಿತೇಶ್‌ ಕುಮಾರ್‌ “ಡಿಸಿಪಿ ವನಿತಾ ಸಾಹು ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಅದು ತನಿಖೆಯ ನೇತೃತ್ವ ವಹಿಸಿಕೊಂಡಿದೆ’ ಎಂದು ಹೇಳಿದ್ದಾರೆ.

ನಾಗ್ಪುರದ ಆಕಾಶವಾಣಿ ಸ್ಕ್ವೇರ್‌ ಸಮೀಪ ಇರುವ ಹಾಲ್‌ನ ಮಾಲೀಕತ್ವವನ್ನು ಮುಕ್ತಾ ಬೋಬ್ಡೆ ಹೊಂದಿದ್ದಾರೆ. ಅದನ್ನುಕಾರ್ಯಕ್ರಮಗಳನ್ನು ಆಯೋಜಿಸಲು ಬಾಡಿಗೆಗೆ ನೀಡಲಾಗುತ್ತಿತ್ತು. ಅದರ ಉಸ್ತುವಾರಿಗಾಗಿ 2007ರಲ್ಲಿ ತಪಸ್‌ ಘೋಷ್‌ನನ್ನು ನೇಮಿಸಲಾಗಿತ್ತು. ಆತನೇ ಹಾಲ್‌ನ ಬುಕಿಂಗ್‌ ಮತ್ತು ಇತರ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ. ಮುಖ್ಯ ನ್ಯಾಯಮೂರ್ತಿ ಬೋಬ್ಡೆಅವರ ತಾಯಿಯವರ ವಯಸ್ಸು, ಆರೋಗ್ಯ ಸ್ಥಿತಿ ಗಮನಿಸಿ ಘೋಷ್‌ ಮತ್ತು ಪತ್ನಿ ವಹಿವಾಟಿನ ಬಗ್ಗೆ ಸೂಕ್ತ ಮಾಹಿತಿ ನೀಡುತ್ತಿರಲಿಲ್ಲ.

ಕಾರ್ಯಕ್ರಮಗಳಿಂದ ಬಂದ ಮೊತ್ತವನ್ನು ನೀಡುತ್ತಿರಲಿಲ್ಲ. ಲಾಕ್‌ಡೌನ್‌ ಅವಧಿಯಲ್ಲಿ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಗಳು ರದ್ದುಗೊಂಡು, ಮುಂಗಡವನ್ನು ನೀಡಿರಲಿಲ್ಲ. 2017ರಿಂದ ಇದುವರೆಗೆ ಆತ 2.5 ಕೋಟಿ ರೂ. ವಂಚಿಸಿದ್ದಾನೆಂದು ಗೊತ್ತಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next