Advertisement

ಮೊದಲ ಸಾಹಸಿ ತಂಡದಲ್ಲಿ ಇಬ್ಬರು ಕನ್ನಡಿಗರು

01:44 AM Oct 15, 2019 | mahesh |

ಉಪ್ಪುಂದ: ಕೇಂದ್ರ ಸರಕಾರವು ಲಡಾಖನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿದ ಬಳಿಕ ಭಾರತೀಯ ಸೇನೆ ಸಿಯಾಚಿನ್‌ ಪ್ರದೇಶವನ್ನು ನಾಗರಿಕರ ಚಾರಣಕ್ಕೆ ಮುಕ್ತಗೊಳಿಸಿದೆ. ಪ್ರಪಂಚದ ಅತ್ಯುನ್ನತ ಯುದ್ಧಭೂಮಿಯಾಗಿರುವ ಇಲ್ಲಿಗೆ ಯಶಸ್ವೀ ಚಾರಣ ನಡೆಸಿರುವ ತಂಡದ ಸದಸ್ಯರಲ್ಲಿ ಬೆಂಗಳೂರಿನ ಜಯ
ಕುಮಾರ್‌ ಭಕ್ತವತ್ಸಲಂ ಒಬ್ಬರಾಗಿದ್ದು, ಉಡುಪಿ ಜಿಲ್ಲೆಯ ಮರವಂತೆಯ ಜತೆಗೆ ನಿಕಟ ಸಂಬಂಧ ಹೊಂದಿದ್ದಾರೆ. ಈ ಚಾರಣ ಸಾಹಸಿಯ ಪತ್ನಿ ಯೋಗಿತಾ ಬಾಲಿ ಅವರು ಮರವಂತೆಯ ಚಂದ್ರಶೇಖರ- ಸಿಂಗಾರಿ ಟೀಚರ್‌ ದಂಪತಿಯ ಪುತ್ರಿ.

Advertisement

ನಿವೃತ್ತ ಕರ್ನಲ್‌ ಸುನಿಲ್‌ ಪೋಖ್ರಿಯಾಲ್‌ ಮತ್ತು ನಿವೃತ್ತ ಮೇಜರ್‌ ಕುಲವಂತ ಸಿಂಗ್‌ ಧಾಮಿ ನೇತೃತ್ವದ ಏಳು ಮಂದಿಯ ತಂಡದಲ್ಲಿದ್ದ ಇನ್ನೋರ್ವ ಕನ್ನಡಿತಿ, ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರ ವ್ಯವಸ್ಥಾಪಕಿ ಮೇಘನಾ ಮೋಹನ್‌. ಗೋವಾದ ತುಷಾರ್‌ ಜೋಗಳೇಕರ್‌, ಪುಣೆಯ ಹರ್ಷ ಮುತಾ ಮತ್ತು ಹೊಸದಿಲ್ಲಿಯ ಅಮೃತ್‌ಕೌರ್‌ ಗ್ರೋವರ್‌ ಉಳಿದ ಮೂವರು.

ಯೋಧರ ಮಾರ್ಗ ಸಾಹಸ ಪ್ರವಾಸಗಳನ್ನು ಸಂಘಟಿಸುವ ಹೊಸದಿಲ್ಲಿಯ ನ್ಯಾಶನಲ್‌ ಅಡ್ವೆಂಚರ್‌ ಫೌಂಡೇಶನ್‌ ಈ ಚಾರಣ ಹಮ್ಮಿಕೊಂಡಿತ್ತು. ಇಬ್ಬರು ನಿವೃತ್ತ ಸೇನಾ
ಧಿಕಾರಿಗಳ ಜತೆಗೆ ಐವರು ನಾಗರಿಕರು ಅವಕಾಶ ಪಡೆದಿದ್ದರು. ಈ ಮೊದಲ ಅವಕಾಶವನ್ನು ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸುವ ಭಾರತೀಯ ಯೋಧರ ಬದುಕಿನ ಪ್ರತ್ಯಕ್ಷ ಅರಿವು, ಅನುಭವ ಪಡೆಯಲು ಚಾರಣಿಗರು ಬಳಸಿಕೊಂಡರು. ಯಾತ್ರೆಯನ್ನು “ಸಿಯಾಚಿನ್‌-ಯೋಧರ ಮಾರ್ಗ’ ಎಂದು ಕರೆಯಲಾಗಿತ್ತು.

ಕಠಿನ ದೈಹಿಕ ಮತ್ತು ಮಾನಸಿಕ ಪರೀಕ್ಷೆ ಮತ್ತು ತರಬೇತಿ ಪಡೆದ ತಂಡ ಮಾರ್ಗದರ್ಶಿಯ ಜತೆಗೆ ಸೆ.16ರಂದು ಆರಂಭಿಕ ನೆಲೆ ತಲುಪಿ ಅಲ್ಲಿ ಸೈನಿಕರಿಂದ ಮಾರ್ಗದರ್ಶನ ಪಡೆದು ಸೆ.25ರಂದು ಆರೋಹಣ ಆರಂಭಿಸಿತ್ತು.
ದಿನಕ್ಕೆ 12 ಕಿ.ಮೀ. ಯಾತ್ರೆ ಸಿಯಾಚಿನ್‌ ಪ್ರದೇಶಕ್ಕೆ 60 ಕಿ.ಮೀ. ದೂರ ಚಾರಣ ನಡೆಯಿತು. ದಿನಕ್ಕೆ ಸರಾಸರಿ 12 ಕಿ.ಮೀ. ಕ್ರಮಿಸುತ್ತ ನಾಲ್ಕು ದಿನಗಳ ಬಳಿಕ ತಂಡ ಅಂತಿಮ ಗುರಿಯಾದ ಕುಮಾರ ನೆಲೆ ಎಂಬ ಬ್ರಿಗೇಡ್‌ ಹೆಡ್‌ಕಾÌರ್ಟರ್ ತಲುಪಿತು.

ಅಲ್ಲಿ ಒಂದು ದಿನ, ಒಂದು ರಾತ್ರಿ ಕಳೆಯುವ ಮೂಲಕ ನಮ್ಮ ಸೈನಿಕರು ಹವಾಮಾನ, ಆಹಾರ, ವಸತಿ, ಸಂಚಾರ ಎಲ್ಲವೂ ಸವಾಲಾಗಿರುವ ಭೂಪ್ರದೇಶದ‌ಲ್ಲಿ ನಿರಂತರ ಕಟ್ಟೆಚ್ಚರದಲ್ಲಿ ನಡೆಸುವ ಗಡಿ ರಕ್ಷಣೆಯ ಕಾಯಕವನ್ನು ಹತ್ತಿರದಿಂದ ಕಂಡಿತು. ಮರುದಿನ ಮರು ಪಯಣ ಆರಂಭಿಸಿ, ಅ.4ರಂದು ಮೂಲ ನೆಲೆ ಸೇರಿತು.

Advertisement

ಜಯಕುಮಾರ್‌ ಭಕ್ತವತ್ಸಲಂ ಮೆಕ್ಯಾನಿಕಲ್‌ ಎಂಜಿನಿಯರ್‌. ಬ್ಯಾಂಕ್‌ನಲ್ಲಿ ಉನ್ನತ ಹುದ್ದೆ ನಿರ್ವಹಿಸಿದ್ದ ಅವರು ಈಗ ತನ್ನದೇ ಫಿನ್‌ಟೆಕ್‌ ಕಂಪೆನಿ ನಡೆಸುತ್ತಿದ್ದಾರೆ. 2018ರ ಜೂನ್‌ನಲ್ಲಿ ಎವರೆಸ್ಟ್‌ ಬೇಸ್‌ ಕ್ಯಾಂಪ್‌ಗೆ ಚಾರಣ ನಡೆಸಿದ್ದರು. 2019ರ ಜೂನ್‌ನಲ್ಲಿ ರಷ್ಯಾದಲ್ಲಿ ಆ್ಯಕ್ಸಿಲರೇಟೆಡ್‌ ಫ್ರೀ ಫಾಲ್‌ ಸ್ಕೈಡೆ„ವಿಂಗ್‌ ತರಬೇತಿ ಪಡೆದು ಎ ದರ್ಜೆಯ ಅರ್ಹತಾ ಪತ್ರ ಸಂಪಾದಿಸಿದ್ದಾರೆ.

ತಂಡದ ಎಲ್ಲ ಸದಸ್ಯರು ಸದೃಢರೂ ಉತ್ಸಾಹಿಗಳೂ ಆಗಿದ್ದುದರಿಂದ ಚಾರಣದಲ್ಲಿ ತೊಂದರೆ ಎದುರಾಗಲಿಲ್ಲ. ಇಡೀ ಪಯಣ ಅತ್ಯಂತ ರೋಚಕ ಅನುಭವ ನೀಡಿತು. ಎಲ್ಲಕ್ಕಿಂತ ಮಿಗಿಲಾಗಿ ಭಾರತೀಯ ಸೈನಿಕರ ಬಗೆಗಿನ ಗೌರವ ನೂರ್ಮಡಿಯಾಯಿತು.
– ಜಯಕುಮಾರ್‌ ಭಕ್ತವತ್ಸಲಂ

Advertisement

Udayavani is now on Telegram. Click here to join our channel and stay updated with the latest news.

Next