Advertisement

ಜಮ್ಮು-ಕಾಶ್ಮೀರದ ಕುಪ್ವಾರದಲ್ಲಿ ಮತ್ತೆ ಕಲ್ಲು ತೂರಾಟ: ಓರ್ವನಿಗೆ ಗಂಭೀರ ಗಾಯ

09:35 AM Sep 03, 2019 | Mithun PG |

ಶ್ರೀನಗರ: ಜಮ್ಮು ಕಾಶ್ಮೀರ ದಲ್ಲಿ ಮತ್ತೆ ಪುಂಡರು ಅಟ್ಟಹಾಸ ಮೆರೆಯುತ್ತಿದ್ದು ಕಲ್ಲು ತೂರಿದ ಪರಿಣಾಮ ನಾಗರಿಕರೋರ್ವರು ಗಂಭೀರ ಗಾಯಗೊಂಡಿದ್ದಾರೆ.

Advertisement

ಮನೆಗೆ ಹಿಂದಿರುಗುತ್ತಿದ್ದ ವೇಳೆ, ತೋಟದಲ್ಲಿ ಅವಿತಿದ್ದ ಯುವಕನೋರ್ವ ಈ ಕೃತ್ಯ ಎಸಗಿದ್ದು ಈ ವಾರದಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. ಕಲ್ಲೇಟಿನಿಂದ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಶ್ರೀನಗರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದಕ್ಕೂ ಮೊದಲು ಆಗಸ್ಟ್ 25ರಂದು ನೂರ್ ಮೊಹಮ್ಮದ್ ದಾರ್ ಎಂಬ ಟ್ರಕ್ ಡ್ರೈವರ್ ಕಲ್ಲು ತೂರಾಟದಿಂದ ಮೃತಪಟ್ಟಿದ್ದರು . ಭೀಜ್ ಬೇರಾ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. ಟ್ರಕ್ ಅನ್ನು ಸೇನಾ ವಾಹನವೆಂದು ತಿಳಿದ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರು. ಅನಂತರ  ಪೊಲೀಸರು ಅವರನ್ನು ಬಂಧಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next