ಇಡುಕ್ಕಿ: ಪೊಲೀಸ್ ಡೇಟಾಬೇಸ್‌ನಿಂದ ಆರ್‌ಎಸ್‌ಎಸ್ ಕಾರ್ಯಕರ್ತರ ಗೌಪ್ಯ ಮಾಹಿತಿಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಸದಸ್ಯರಿಗೆ ಸೋರಿಕೆ ಮಾಡಿದ ಆರೋಪದ ಮೇಲೆ ಕೇರಳದ ಪೊಲೀಸ್‌ನ ಸಿವಿಲ್ ಪೊಲೀಸ್ ಅಧಿಕಾರಿ (ಸಿಪಿಒ) ಯನ್ನು ಅಮಾನತುಗೊಳಿಸಲಾಗಿದೆ.
ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್‌ನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಡಿಪಿಐನ ಕೆಲವು ಕಾರ್ಯಕರ್ತರನ್ನು ಬಂಧಿಸಿದ ನಂತರ ಪೊಲೀಸ್ ಅಧಿಕಾರಿಗೆ ಎಸ್‌ಡಿಪಿಐ ಜೊತೆಗಿದ್ದ ಸಂಪರ್ಕವು ತಿಳಿದು ಬಂದಿದೆ ಎಂದು ತೊಡುಪುಳ ಡಿವೈಎಸ್‌ಪಿ ತಿಳಿಸಿದ್ದಾರೆ.
ಬಂಧಿತ ಎಸ್‌ಡಿಪಿಐ ಕಾರ್ಯಕರ್ತರ ಫೋನ್‌ಗಳನ್ನು ಪರಿಶೀಲಿಸಿದಾಗ ಆ ಪೈಕಿ ಒಬ್ಬಾತ ಸಿಪಿಒ ಅನಾಸ್ ನಂಬರ್ ಹೊಂದಿದ್ದ ಮತ್ತು ಅಧಿಕಾರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಎಂದು ತಿಳಿದುಬಂದಿದೆ. ಈ ವಿಚಾರವನ್ನು ಮೇಲಧಿಕಾರಿಗಳಿಗೆ ತಿಳಿಸಲಾಗಿದೆ” ಎಂದು ಡಿವೈಎಸ್ಪಿ ಹೇಳಿದ್ದಾರೆ.
ಪೊಲೀಸ್ ಡೇಟಾಬೇಸ್‌ನಿಂದ ಆರ್‌ಎಸ್‌ಎಸ್ ಕಾರ್ಯಕರ್ತರ ಮಾಹಿತಿಯನ್ನು ಸಿಪಿಒ ಎಸ್‌ಡಿಪಿಐಗೆ ಸೋರಿಕೆ ಮಾಡಿರುವುದು ಹೆಚ್ಚಿನ ತನಿಖೆಯಿಂದ ಕಂಡುಬಂದಿದೆ ಮತ್ತು ಇದರ ಪರಿಣಾಮವಾಗಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಇಡುಕ್ಕಿ ಜಿಲ್ಲೆಯ ಕರಿಮನ್ನೂರು ಪೊಲೀಸ್ ಠಾಣೆಯಲ್ಲಿ ಸಿಪಿಒ ಆಗಿದ್ದ ಅನಸ್ ತಪ್ಪಿತಸ್ಥ ಅಧಿಕಾರಿಯಾಗಿದ್ದು, ಈತನ ವಿರುದ್ಧ ಶೀಘ್ರವೇ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಸ್ಲಾಂ ವಿರೋಧಿ ಪೋಸ್ಟ್ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಕ್ಕಾಗಿ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.