Advertisement

ಬಾಲಮಂದಿರಕ್ಕೆ ಸಿವಿಲ್‌ ನ್ಯಾಯಾಧೀಶರ ಭೇಟಿ

05:54 AM May 26, 2020 | Lakshmi GovindaRaj |

ಚಾಮರಾಜನಗರ: ಕೋವಿಡ್‌-19 ಹಿನ್ನೆಲೆಯಲ್ಲಿ ಮಕ್ಕಳ ರಕ್ಷಣೆ ಮತ್ತು ಪಾಲನೆಯ ಬಗ್ಗೆ ಕೈಗೊಂಡಿರುವ ಕ್ರಮಗಳ ಕುರಿತು ಹಿರಿಯ ಸಿವಿಲ್‌ ನ್ಯಾಯಾಧೀಶ ಮತ್ತು ಬಾಲನ್ಯಾಯ ಮಂಡಳಿ ಅಧ್ಯಕ್ಷ ರಮೇಶ್‌ ನಗರದ ಬಾಲಕಿಯರ  ಬಾಲಮಂದಿರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Advertisement

ಮೊದಲಿಗೆ ನ್ಯಾಯಾಧೀಶರು ಮಕ್ಕಳೊಂದಿಗೆ ಬಾಲಮಂ ದಿರದಲ್ಲಿ ಕಲ್ಪಿಸಿರುವ ವ್ಯವಸ್ಥೆಗಳ ಕುರಿತು ಸಮಾಲೋಚಿಸಿ ದರು. ಕೋವಿಡ್‌-19 ಸಂಬಂಧ ಮಕ್ಕಳ ಆರೋಗ್ಯ ರಕ್ಷಣೆ, ಆಹಾರ,  ಸುರಕ್ಷತೆ ಬಗ್ಗೆ ಮಕ್ಕಳಿಂದಲೇ ಮಾಹಿತಿ ಪಡೆದುಕೊಂಡರು. ಜಿಲ್ಲಾ ಮಕ್ಕಳ ರಕ್ಷಣಾ ಧಿಕಾರಿ ವಿಜಯ್‌, 30 ಬಾಲಮಂದಿರಗಳಿದ್ದು, 2 ಸರ್ಕಾರಿ, ಉಳಿದ 28 ಬಾಲಮಂದಿರಗಳನ್ನು ಎನ್‌ಜಿಒ ಸಂಸ್ಥೆಗಳು ನಡೆಸುತ್ತಿವೆ.

ಜಿಲ್ಲೆಯ ಎಲ್ಲಾ  ಬಾಲಮಂದಿರ  ಗಳಲ್ಲಿ ಒಟ್ಟು 1200 ಮಕ್ಕಳಿದ್ದಾರೆ. ಕೊರೊನಾ ಹಿನ್ನೆಲೆ ಯಲ್ಲಿ 895 ಮಕ್ಕಳನ್ನು ಪೋಷಕರ ಮನೆಗಳಿಗೆ ಕಳುಹಿ ಸಿದ್ದು, ಪ್ರತಿನಿತ್ಯ ದೂರವಾಣಿ, ವಿಡಿಯೋ ಕರೆ ಮೂಲಕ ಸಂಪರ್ಕಿಸಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗಿದೆ ಎಂದರು. ಸಿಡಬ್ಲೂಸಿ ಅಧ್ಯಕ್ಷೆ ಸರಸ್ವತಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next