Advertisement
ಹೌದು, ಗಾಂಧಿನಗರದಲ್ಲಿ ಎಲ್ಲಾ ಬಗೆಯ ಜನರು ಇದ್ದಾರೆ. ಎಲ್ಲಾ ವರ್ಗದವರೂ ಅಡ್ಡಾಡುತ್ತಾರೆ. ಹೆಚ್ಚಾಗಿ ಗಾಂಧಿನಗರ ಗುರುತಿಸಿಕೊಂಡಿರೋದೇ ಸಿನಿಮಾ ಚಟುವಟಿಕೆಗಳಿಂದ. ಕನ್ನಡ ಚಿತ್ರರಂಗದ ಹೃದಯ ಎಂದೇ ಕರೆಯಲ್ಪಡುವ ಈ ಗಾಂಧಿನಗರದಲ್ಲೀಗ ನೀರವ ಮೌನ. ನಿಜ ಹೇಳಬೇಕೆಂದರೆ, ಇಲ್ಲಿ ಸದಾ ಒಂದಿಲ್ಲೊಂದು ಚಿತ್ರರಂಗದ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ಸಿನಿಮಾದ ವ್ಯಾಪಾರ ವಹಿವಾಟು ಬಹುತೇಕ ಗಾಂಧಿನಗರದಲ್ಲೇ ಇದೆ. ದಿನಕ್ಕೆ ಕೋಟಿಗಟ್ಟಲೆ ವಹಿವಾಟು ನಡೆಸುತ್ತಿದ್ದ ಗಾಂಧಿನಗರದಲ್ಲಿ ಈಗಂತೂ ಒಂದು ರುಪಾಯಿಯ ಮಾತೂ ಇಲ್ಲ. ಇಲ್ಲಿ ಚಿತ್ರಮಂದಿರಗಳಿಗಿಂತಲೂ ಹೆಚ್ಚು ವಿತರಕರ ಕಚೇರಿಗಳು, ನಿರ್ಮಾಪಕರ ಕಚೇರಿಗಳು, ಪ್ರದರ್ಶಕರ ಕಚೇರಿಗಳು, ಪೋಸ್ಟರ್ ಹಂಚುವವರ ಸಂಘದ ಕಚೇರಿಗಳೇ ಹೆಚ್ಚು. ಇವುಗಳೊಂದಿಗೆ ಸಿನಿಮಾ ಪೋಸ್ಟರ್ ವಿನ್ಯಾಸಗೊಳಿಸುವ,ಜಾಹಿರಾತು ವಿನ್ಯಾಸ ಮಾಡುವ ತಂತ್ರಜ್ಞರ ಕಚೇರಿಗಳೂ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲೂ ಇವೆ. ಸದಾ ಸಿನಿಮಾ ಮಂದಿಯಿಂದ ತುಂಬಿ ತುಳುಕುತ್ತಿದ್ದ ಈ ಕಚೇರಿಗಳೀಗ ಬೀಗ ಹಾಕಿವೆ. ಇನ್ನು, ಶುಕ್ರವಾರ ಬಂತೆಂದರೆ, ಸಿನಿಪ್ರೇಮಿಗಳ ಮೊಗದಲ್ಲಿ ಮಂದಹಾಸ. ಕಾರಣ, ಅಂದು ಹೊಸ ಸಿನಿಮಾಗಳ ಬಿಡುಗಡೆ. ಹಾಗಾಗಿ ಅದೊಂದು ಹಬ್ಬದ ವಾತಾವರಣವೇ ತುಂಬಿರುತ್ತಿತ್ತು. ದೊಡ್ಡ ದೊಡ್ಡ ಹಾರಗಳು, ಬಿಡಿ ಹೂಗಳ ಹಾರಾಟವೇ ಕಾಣಸಿಗುತ್ತಿತ್ತು. ಹೂವಿನ ವ್ಯಾಪಾರಿಗಳಿಗಂತೂ ಶುಕ್ರವಾರ ಬೇಡಿಕೆ ಹೆಚ್ಚುತ್ತಿತ್ತು. ಅದೀಗ ಕಳೆದ ಒಂದುವರೆ ತಿಂಗಳಿನಿಂದಲೂ ಆ ಸಂಭ್ರಮವೇ ಅಲ್ಲಿಲ್ಲ.
Advertisement
ರಂಗಿನ ನಗರ ಈಗ ಫುಲ್ ಡಲ್
10:24 AM Apr 22, 2020 | Suhan S |
Advertisement
Udayavani is now on Telegram. Click here to join our channel and stay updated with the latest news.