Advertisement
ಶುಕ್ರವಾರ ತಮ್ಮ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಅವರು ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸುತ್ತಾ ಈ ವಿಷಯ ತಿಳಿಸಿದರು.
Related Articles
Advertisement
ವಂಚನೆ ದೂರುವ್ಯಕ್ತಿಯೊಬ್ಬರು 80,000 ರೂ. ಪಡೆದು ಮೋಸ ಮಾಡಿದ್ದಾರೆ ಎಂದು ಫಳ್ನೀರ್‌ನ ನಾಗರಿಕರೊಬ್ಬರು ದೂರು ನೀಡಿದರು. ಮೀನು ಸಾಗಿಸುವ ವಾಹನಗಳಿಂದ ಆಗುತ್ತಿರುವ ಪರಿಸರ ಮಾಲಿನ್ಯ ಸಮಸ್ಯೆ ಶೇ. 50ರಷ್ಟು ಬಗೆ ಹರಿದಿದೆ. ಉಳಿದಿರುವ ಶೇ. 50 ಸಮಸ್ಯೆಯನ್ನು ಕೂಡ ಪರಿಹರಿಸಬೇಕು ಎಂದು ಜಪ್ಪು ಪ್ರದೇಶದ ನಾಗರಿಕರೊಬ್ಬರು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಆಯುಕ್ತರು, ಮೀನು ಸಾಗಿಸುವ ವಾಹನಗಳು ನಗರದ ಬಂದರು ಪ್ರದೇಶದ ಗೂಡ್ಸ್ ಶೆಡ್ ರಸ್ತೆಯಲ್ಲಿ ಮಾತ್ರ ಸಂಚರಿಸುವಂತೆ ವ್ಯವಸ್ಥೆ ಮಾಡಲಾಗುವುದು. ಈಗ ಈ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು, ಪೂರ್ತಿಗೊಂಡ ಬಳಿಕ ಮೀನು ಸಾಗಾಟದ ಎಲ್ಲ ವಾಹನಗಳು ಇಲ್ಲೇ ಈ ರಸ್ತೆಯಲ್ಲಿ ಮಾತ್ರ ಸಂಚರಿಸುವಂತೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು. ಕೊಣಾಜೆ ಕಡೆಗೆ ಸಂಚರಿಸುವ ಎಲ್ಲ ಸಿಟಿ ಬಸ್‌ಗಳು ಕೊಣಾಜೆ ಪಂ. ಕಚೇರಿ ತನಕ ಹೋಗುವಂತಾಗಬೇಕು ಎಂದು ನಾಗರಿಕರೊಬ್ಬರು ಆಗ್ರಹಿಸಿದರು. ಈ ಬಗ್ಗೆ ಬಸ್ ಮಾಲಕರ ಸಂಘ ಮತ್ತು ಆರ್‌ಟಿಒ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಆಯುಕ್ತರು ತಿಳಿಸಿದರು. ಬಿಜೈ ಕಾವೂರು ಕ್ರಾಸ್ ಬಳಿ ಫುಟ್ಪಾತ್ ಮತ್ತು ರಸ್ತೆ ಬದಿಯಲ್ಲಿ ಫಾಸ್ಟ್ ಫುಡ್ ಅಂಗಡಿಗಳವರು ಗಲೀಜು ಮಾಡುತ್ತಾರೆ ಎಂದು ನಾಗರಿಕರೊಬ್ಬರು ದೂರು ನೀಡಿದರು. ಇದಕ್ಕೆ ಸ್ಪಂದಿಸಿದ ಆಯುಕ್ತರು, ಫಾಸ್ಟ್ ಫುಡ್‌ನವರಿಗೆ ವ್ಯವಹಾರ ನಡೆಸಲು ಪ್ರತ್ಯೇಕ ಸ್ಥಳಾವಕಾಶವನ್ನು ಗುರುತಿಸಲು ಸಾಧ್ಯವೇ ಎಂದು ಪಾಲಿಕೆಯ ಜತೆ ಚರ್ಚಿಸಲಾಗುವುದು ಎಂದರು. ಶಾಲೆ, ಕಾಲೇಜು ಹತ್ತಿರದ ಅಂಗಡಿಗಳಲ್ಲಿ ಬೀಡಿ, ಸಿಗರೇಟು ಮಾರಾಟ ಮಾಡಲಾಗುತ್ತಿದೆ ಎಂದ ನಾಗರಿಕರೊಬ್ಬರ ದೂರಿಗೆ ಸ್ಪಂದಿಸಿದ ಆಯುಕ್ತರು ಕೋಟ್ಪಾ ಕಾಯ್ದೆಯಡಿ ಹೆಚ್ಚು ಹೆಚ್ಚು ಕೇಸುಗಳನ್ನು ಹಾಕಲು ಸೂಚಿಸಲಾಗುವುದು ಎಂದರು. ಬರ್ಕೆ, ಕದ್ರಿ ಪೊಲೀಸ್ ಠಾಣೆಗಳಲ್ಲಿ ವಿವಿಧ ಪ್ರಕರಣಗಳಲ್ಲಿ ಮುಟ್ಟುಗೋಲು ಹಾಕಿದ ವಾಹನಗಳನ್ನು ರಸ್ತೆ ಬದಿ ರಾಶಿ ಹಾಕಿದು ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದವು. ನ್ಯಾಯಾಲಯದ ಆದೇಶ ಬಂದ ಬಳಿಕವೇ ಅವುಗಳನ್ನು ವಿಲೆವಾರಿ ಮಾಡಲಾಗುವುದು ಎಂದು ಆಯುಕ್ತರು ತಿಳಿಸಿದರು. ಪಾಸ್ಟಿಕ್ ಬದಲು ಲೋಟ ಬಳಕೆ
ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಡೆಯುವ ವಿವಿಧ ಸಭೆ, ಫೋನ್ ಇನ್ ಇತ್ಯಾದಿ ಕಾರ್ಯಕ್ರಮಗಳಲ್ಲಿ ಇನ್ನು ಮುಂದೆ ನೀರು ಮತ್ತು ಇತರ ಪಾನೀಯಗಳ ವಿತರಣೆಗೆ ಪ್ಲಾಸ್ಟಿಕ್ ಲೋಟದ ಬದಲು ಸ್ಟೀಲ್/ಪಿಂಗಾಣಿ/ ಗಾಜಿನ ಲೋಟವನ್ನು ಬಳಸಲಾಗುವುದು ಎಂದು ಪ್ಲಾಸ್ಟಿಕ್ ಬಳಕೆ ನಿಷೇಧದ ಬಗ್ಗೆ ನಾಗರಿಕರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ತಿಳಿಸಿದರು. ಪೊಲೀಸ್ ಸಿಬಂದಿ ವಿರುದ್ಧ ದೂರು
ಬಲ್ಮಠದಿಂದ ಕರೆ ಮಾಡಿದ ಮಹಿಳೆಯೊಬ್ಬರು, ತನ್ನನ್ನು ಚುಡಾಯಿಸಿದ್ದಾನೆ ಎಂದು ಪೊಲೀಸ್ ಸಿಬಂದಿಯೊಬ್ಬರ ವಿರುದ್ಧವೇ ದೂರು ನೀಡಿದರು. ‘ಕಳೆದ ಸೋಮವಾರ ನಾನು ಬಲ್ಮಠದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ವ್ಯಕ್ತಿಯೊಬ್ಬರು ನನ್ನನ್ನು ಏನು ದಪ್ಪಗಿದ್ದೀಯಾ ಎಂದು ಚುಡಾಯಿಸಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ, ಆ ವ್ಯಕ್ತಿ ಪಾಂಡೇಶ್ವರ ಠಾಣೆಯ ಸಿಬಂದಿ ಎಂದು ಗೊತ್ತಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಕೆ ಆಗ್ರಹಿಸಿದರು. ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಆಯುಕ್ತರು ಭರವಸೆ ನೀಡಿದರು. ಇದು 113ನೇ ಫೋನ್ ಇನ್ ಕಾರ್ಯಕ್ರಮ ವಾಗಿದ್ದು, ಒಟ್ಟು 23 ಕರೆಗಳು ಬಂದವು. ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀ ಗಣೇಶ್, ಟ್ರಾಫಿಕ್ ಇನ್‌ಸ್ಪೆಕ್ಟರ್‌ಗಳಾದ ಸಿ.ಎನ್. ದಿವಾಕರ್, ಹರೀಶ್ ಕೆ. ಪಟೇಲ್, ಅಶೋಕ್, ಎಎಸ್‌ಐ ಪಿ. ಯೋಗೇಶ್ವರನ್, ಹೆಡ್‌ಕಾನ್ಸ್‌ಟೆಬಲ್ ಪುರುಷೋತ್ತಮ ಉಪಸ್ಥಿತರಿದ್ದರು. ಇತರ ಪ್ರಮುಖ ದೂರು
•ಕೂಳೂರು ಸಫಾ ನಗರದಲ್ಲಿ ಕೆಲವರು ಗಾಂಜಾ ಸೇವಿಸಿ, ಟ್ಯಾಬ್‌ನಲ್ಲಿ ಗೇಮ್ಸ್ ಆಡುತ್ತಾ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದಾರೆ. •ಜೋಕಟ್ಟೆ ರೈಲ್ವೇ ಗೇಟ್ ಬಳಿ ಲಾರಿ, ಟಿಪ್ಪರ್‌ಗಳಿಂದ ಇತರ ವಾಹನ ಚಾಲಕರಿಗೆ ಸಮಸ್ಯೆಯಾಗುತ್ತಿದೆ. •ಉಳ್ಳಾಲದ ಕೆಲವು ಪ್ರದೇಶಗಳಲ್ಲಿ ಅಪ್ರಾಪ್ತ ವಯಸ್ಕರು ದ್ವಿಚಕ್ರ ವಾಹನ ಚಲಾಯಿಸುತ್ತಿದ್ದಾರೆ. •ಕೊಟ್ಟಾರ ಚೌಕಿಯಲ್ಲಿ ಫ್ಲೈಓವರ್ ಬಳಿ ಪಾದಚಾರಿಗಳಿಗೆ ರಸ್ತೆ ದಾಟಲು ವ್ಯವಸ್ಥೆ ಬೇಕು. • ಹಳೆಯಂಗಡಿಯಲ್ಲಿ ಎಕ್ಸ್‌ಪ್ರೆಸ್ ಬಸ್‌ಗಳಿಗೆ ನಿಲುಗಡೆ ಬೇಕು. • ಕಾಟಿಪಳ್ಳದಲ್ಲಿ ಬೀದಿ ದೀಪಗಳು ಸರಿಯಾಗಿ ಉರಿಯುತ್ತಿಲ್ಲ. •ಗೂಡ್ಸ್ ವಾಹನಗಳಲ್ಲಿ ಮತ್ತು ಕಸ ಸಾಗಿಸುವ ವಾಹನಗಳಲ್ಲಿ ಜನರು ಅಪಾಯಕಾರಿಯಾಗಿ ನೇತಾಡಿಕೊಂಡು ಪ್ರಯಾಣಿಸುತ್ತಾರೆ. •ಪೊಲೀಸರ ಪಿಸಿಆರ್ ವಾಹನಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. • ಯೆಯ್ನಾಡಿಯಲ್ಲಿ ಟ್ರಾಫಿಕ್ ಸಮಸ್ಯೆ ಇದ್ದು, ಪರಿಹರಿಸಬೇಕು. •ಚೊಕ್ಕಬೆಟ್ಟು- ಸುರತ್ಕಲ್ ರಸ್ತೆಯಲ್ಲಿ ಇರುವ ಹಂಪ್‌ಗ್ಳಿಗೆ ಬಳಿ ಬಣ್ಣ ಬಳಿಯ ಬೇಕು, ರಸ್ತೆಯುದ್ದಕ್ಕೂ ಅಲ್ಲಲ್ಲಿ ರಾಶಿ ಹಾಕಿರುವ ಕೇಬಲ್ ವೈರ್‌ಗಳನ್ನು ವಿಲೆವಾರಿ ಮಾಡಬೇಕು. •ಮೂಡುಬಿದಿರೆಯಲ್ಲಿ ಸಂಚಾರ ಸಮಸ್ಯೆ ಇದ್ದು, ಬಗೆ ಹರಿಸಿ. • ಜಪ್ಪಿನಮೊಗರು- ಎಕ್ಕೂರು ನಡುವಣ ಫಿಶರೀಸ್ ಕಾಲೇಜಿನ ಮೈದಾನ್ ಪಕ್ಕದಲ್ಲಿ ಹಾದು ಹೋಗುವ ಸೂಟರ್‌ಪೇಟೆ ಸಂಪರ್ಕಿಸುವ ರಸ್ತೆಯಲ್ಲಿ ಗಾಂಜಾ ಮಾರಾಟ ವ್ಯವಹಾರ ನಡೆಯುತ್ತಿದೆ.