Advertisement
ಮುಂದುವರಿದ ದೇಶಗಳಲ್ಲಿರುವಂತೆ ಅತ್ಯಾಧುನಿಕ ಅನಿಲ ಸಂಪರ್ಕ ಸೌಲಭ್ಯ ಈ ಮೂಲಕ ಕರಾವಳಿಯ ಈ ಪ್ರದೇಶದ ಜನತೆಗೆ ದೊರೆಯು ವಂತಾಗಲಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಸಂತಸ ವ್ಯಕ್ತಪಡಿಸಿದರು. ಪ್ರಧಾನಿಯವರ ಈ ಮಹತ್ವಾಕಾಂಕ್ಷಿ ಯೋಜನೆ ಆಧುನಿಕ ಭಾರತದ ನಿರ್ಮಾಣಕ್ಕೆ ವರದಾನವಾಗಲಿದೆ. ಮುಂದಿನ 8 ವರ್ಷಗಳಲ್ಲಿ ಜಿಲ್ಲೆಯ 4,861 ಚ.ಕಿ.ಮೀ. ವ್ಯಾಪ್ತಿಯಲ್ಲಿ ಈ ಪೈಪ್‌ಲೈನ್ ಸೌಲಭ್ಯವಿರುತ್ತದೆ. ಕೊಚ್ಚಿಯಿಂದ ಗ್ಯಾಸ್ ಪೈಪ್‌ಲೈನ್ ಅಂತಿಮ ಹಂತದಲ್ಲಿದೆ ಎಂದರು.
ವಿಶೇಷ ಅತಿಥಿಯಾಗಿದ್ದ ಸಂಸದ ನಳಿನ್ ಕುಮಾರ್ ಕಟೀಲು, ಮಂಗಳೂರು ಕೇಂದ್ರವಾಗಿ ಜಿಲ್ಲೆಯ ಈ ಯೋಜನೆ ಬಗ್ಗೆ ವಿಶೇಷ ಆಸಕ್ತಿ ತಾಳಿರುವ ಪ್ರಧಾನಿ ಮೋದಿಗೆ ಕೃತಜ್ಞತೆ ವ್ಯಕ್ತಪಡಿಸಿದರು. ಭೂಗತ ಚರಂಡಿ ನವೀಕರಣ, ಸ್ಮಾರ್ಟ್‌ಸಿಟಿಯ ಮೂಲಕ ಸಮಗ್ರ ಆಧುನೀಕರಣ, ಅತ್ಯಾಧುನಿಕ ತಂತ್ರಜ್ಞಾನ ಇತ್ಯಾದಿಗಳ ಮೂಲಕ ಮಂಗಳೂರು ಮಹಾನಗರವು ದೇಶಕ್ಕೆ ಮಾದರಿಯಾಗಿದೆ ಎಂದರು. ಶಾಸಕ ವೇದವ್ಯಾಸ ಕಾಮತ್, ಮೇಯರ್ ಭಾಸ್ಕರ್ ಕೆ., ಅಪರ ಜಿಲ್ಲಾಧಿಕಾರಿ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು. ಗೇಲ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಮುರುಗೇಶನ್ ಅತಿಥಿಗಳನ್ನು ಸಮ್ಮಾನಿಸಿದರು. ಹಿರಿಯ ಮಹಾ ಪ್ರಬಂಧಕ ವಿವೇಕ್ ವಾಥೋಡ್ಕರ್ ಸ್ವಾಗತಿಸಿದರು.
Related Articles
ಅತೀ ಸುರಕ್ಷಿತ ಮತ್ತು ಮಿತವ್ಯಯಕಾರಿ ಎಂಬ ವಿಶೇಷಣಗಳ ಪಿಎನ್‌ಜಿ ಮತ್ತು ಸಿಎನ್‌ಜಿಗಳು ಮನೆಗಳು ಮತ್ತು ಉದ್ಯಮ, ವಾಹನಗಳಿಗೆ ವರದಾಯಕ ಎಂದು ಗೇಲ್ ಗ್ಯಾಸ್ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ನೇರಪ್ರಸಾರ ವ್ಯವಸ್ಥೆಮಂಗಳೂರು ಸಹಿತ ದೇಶದ 129 ಕೇಂದ್ರಗಳಲ್ಲಿ ಸಿಟಿಗ್ಯಾಸ್ ಪೂರೈಕೆ ಯೋಜನೆಗೆ ಪ್ರಧಾನಿ ಮೋದಿ ಅವರು ದಿಲ್ಲಿಯ ವಿಜ್ಞಾನ ಭವನದಲ್ಲಿ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಡಾ| ಹರ್ಷವರ್ಧನ್ ಅವರ ಉಪಸ್ಥಿತಿಯಲ್ಲಿ ಶಂಕುಸ್ಥಾಪನೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಮಂಗಳೂರು ಪುರಭವನದಲ್ಲಿ ಸಚಿವ ಡಿ.ವಿ. ಸದಾನಂದ ಗೌಡ ಅವರು ನಳಿನ್ ಕುಮಾರ್ ಕಟೀಲು, ವೇದವ್ಯಾಸ ಕಾಮತ್, ಭಾಸ್ಕರ ಮೊಲಿ ಅವರ ಉಪಸ್ಥಿತಿಯಲ್ಲಿ ಉದ್ಘಾಟಿಸಿದರು. ಪ್ರಧಾನಿ ಶಂಕುಸ್ಥಾಪನೆ- ಭಾಷಣದ ನೇರಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು.