Advertisement
ಇಂಥದ್ದೊಂದು ಕುತೂಹಲ ಹಳ್ಳಿಯಲ್ಲಿರೋರಿಗೆ ಇರುತ್ತದೆ. ಆ ಕುತೂಹಲ ಸುಲಭಕ್ಕೆ ಮುಗಿಯುವಂತದ್ದಲ್ಲ.
ಮಲೆನಾಡಿನ ಹುಡ್ಗಿ. ಮಾಸ್ಟರ್ ಡಿಗ್ರಿ ಹೋಲ್ಡರ್. ಮಹಾನಗರಕ್ಕೆ ಬಂದು ಒಂದು ವರ್ಷ ಆಗಿರಬಹುದು. ನಾನು ಕೆಲಸ ಮಾಡಲೇಬೇಕು ಅಂತ ಮನೆಯಲ್ಲಿ ಹಠ ಮಾಡಿ ಬೆಂಗಳೂರಿಗೆ ಬಂದಿದ್ದಳು. ಕಷ್ಟ ಪಟ್ಟು ಪಿಜಿಯಲ್ಲಿದ್ದುಕೊಂಡು ಬೆಂಗಳೂರು ಜೀವನವನ್ನು ಸಹಿಸಿಕೊಂಡು ಏನಾದರೂ ಸಾಧಿಸಬೇಕು ಅಂತ ಒದ್ದಾಡುತ್ತಿದ್ದಳು. ಅಂಥಾ ಹುಡ್ಗಿ ಒಂದು ದಿನ ಕೆಲ್ಸ ಬಿಟ್ಟು ಮನೆಗೆ ಹೋಗುವಾಗ ತಡವಾಗಿತ್ತು.
Related Articles
Advertisement
ಅವಳು ನಿರ್ಲಿಪ್ತಳಾಗಿರಲು ಪ್ರಯತ್ನಪಡುತ್ತಾ ಆ ಕಾರಿನ ಸಮೀಪ ಬಂದಳು. ಅವಳು ಹತ್ತಿರಾಗಿದ್ದೇ ತಡ ಕಾರಿನ ಬಾಗಿಲು ಧಡಕ್ಕನೆ ತೆರೆದುಕೊಂಡಿತ್ತು. ಅವಳು ಆತಂಕದಿಂದ ಕಾರಿನೊಳಗೆ ನೋಡಿದರೆ ಅಲ್ಲಿ ಮಧ್ಯ ವಯಸ್ಕ ಮನುಷ್ಯನೊಬ್ಬ “ನೇಕೆಡ್’ ಆಗಿ ಕೂತಿದ್ದ. ಇವಳು ತಕ್ಷಣ ಕಿರುಚಿಕೊಂಡಳು. ಅವನು ತಕ್ಷಣ ಕಾರಿನ ಬಾಗಿಲು ಎಳೆದುಕೊಂಡು ಭರ್ರನೆ ಹೊರಟು ಹೋದ. ಇವಳು ಶಾಕ್‌ನಿಂದ ಆಚೆ ಬರಲು ಐದು ನಿಮಿಷ ಬೇಕಾಯಿತು.
ಈ ಕತೆಯನ್ನು ಅವಳು ಹೇಳುವಾಗ ನಗುತ್ತಿದ್ದಳು. ಭಯ ಆಗಿಲ್ವಾ ಎಂದೆ. ಭಯಕ್ಕಿಂತ ಜಾಸ್ತಿ ಆಘಾತವಾಗಿತ್ತು, ನನ್ನ ಜೀವನದ ಮೊತ್ತ ಮೊದಲ ಶಾಕ್ ಎಂದಳು. ಆಮೇಲೆ ತಡ ಆಗಿಲ್ವಾ ಅಂತ ಕೇಳಿದೆ. ಈಗಲೂ ಒಂದೊಂದ್ಸಲ ತಡವಾಗಿ ಹೋಗ್ತಿàನಿ, ಅವನನ್ನು ಹುಡುಕ್ತಾ ಇದ್ದೀನಿ, ಇನ್ನೊಂದ್ಸಲ ಸಿಕ್ಲಿ ಗ್ರಹಟಾರ ಬಿಡಿಸ್ತೀನಿ ಅಂತ ಮೊನ್ನೆ ಮೊನ್ನೆ ಸಿಕ್ಕಿದಾಗ ಹೇಳಿದ್ದಳು.
ಮತ್ತೂಬ್ಬಳು ಹೆಲ್ಮೆಟ್ ಹುಡ್ಗಿ ದಾರಿಯಲ್ಲಿ ಹೋಗುವಾಗ ಶಿಳ್ಳೆ ಹೊಡೆಯೋರಿಗೆ, ಗುರಾಯಿಸೋರಿಗೆ, ಕಮೆಂಟ್ ಪಾಸ್ ಮಾಡೋರಿಗೆ, ವಿಚಿತ್ರವಾಗಿ ಕಾಡುವವರಿಗೆ ಕಮ್ಮಿ ಇಲ್ಲ ಇಲ್ಲಿ. ಏನಾದರೊಂದು ಮಾಡುತ್ತಲೇ ಇರುತ್ತಾರೆ. ಹುಡ್ಗಿಯರು ಅದನ್ನು ಕೆಲವೊಮ್ಮೆ ಸಹಿಸಿಕೊಳ್ಳುತ್ತಾ ಮತ್ತೂಮ್ಮೆ ಅಲ್ಲಿಂದ ಓಡಿ ಹೋಗಿ ಪಾರಾಗುತ್ತಾ ತುಂಬಾ ಸಿಟ್ಟು ಬಂದರೆ ಬೈಯುತ್ತಾ ಬದುಕುತ್ತಿರುತ್ತಾರೆ. ಅವಳೊಬ್ಬಳಿದ್ದಾಳೆ. ಭಯಂಕರ ಪಾಪದ ಹುಡ್ಗಿ. ಅವಳಿಗೆ ಮಹಾನಗರದಲ್ಲಿ ತಿರುಗಾಡೋದು ಅಂದ್ರೆ ಭಯ ಇತ್ತು. ಅವಳು ಪಿಜಿಯಿಂದ ಒಂದೊಂದ್ಸಲ ಹೊರಗೆ ಕಾಲಿಡೋಕೆ ಹೆದರುತ್ತಿದ್ದಳು. ಇಂಥಾ ಹುಡ್ಗಿ ಅದೊಂದು ದಿನ ಬಸ್‌ಸ್ಟಾಂಡಲ್ಲಿ ಗೆಳತಿಯೊಬ್ಬಳನ್ನು ಪಿಜಿಗೆ ಕರೆದುಕೊಂಡು ಹೋಗಬೇಕೆಂದು ನಿಂತಿದ್ದಳು. ಸ್ಕೂಟಿಯನ್ನು ಅಲ್ಲೆಲ್ಲೋ ಪಾರ್ಕ್ ಮಾಡಿ ಬಂದಿದ್ದ ಅವಳ ಕೈಯಲ್ಲಿ ಹೆಲ್ಮೆಟ್ ಇತ್ತು. ಇಂಥಾ ಸಂದರ್ಭದಲ್ಲಿ ಅವಳು ಗೆಳತಿಯನ್ನು ಹುಡುಕಿಕೊಂಡು ಅಲೆದಾಡುತ್ತಿದ್ದಾಗ ಯಾರೋ ಒಬ್ಬ ಅವಳ ಹಿಂಭಾಗವನ್ನು ಟಚ್ ಮಾಡಿದ. ಅದೆಲ್ಲಿತ್ತೋ ಕೋಪ. ಅವಳು ಕೈಯಲ್ಲಿದ್ದ ಹೆಲ್ಮೆಟ್‌ನಿಂದ ಟಪಾರನೆ ಅವಳಿಗೆ ಬಾರಿಸಿದಳು. ಅವನು ಗಾಬರಿಯಿಂದ ಅವಳನ್ನೇ ನೋಡುತ್ತಿರಲು ಬಾಯಿಗೆ ಬಂದಂತೆ ಬೈದಳು. ಒಂದಿಬ್ಬರು ಹಿರಿಯರು ಏನಾಯ್ತಮ್ಮಾ ಅಂತ ಕೇಳುವಾಗ ಇನ್ನೂ ಉತ್ಸಾಹದಿಂದ ಮತ್ತೆ ಹೊಡೆಯಲು ಹೋದ ಅವಳನ್ನು ತಕ್ಷಣ ಅಲ್ಲಿಗೆ ಬಂದ ಗೆಳತಿ ಹಿಡಿದುಕೊಂಡಿದ್ದಳು. ಅವಳ ಗೆಳತಿಗೆ ಬದುಕಿನ ಅತ್ಯಂತ ದೊಡ್ಡ ಶಾಕ್ ಅದು. ಇವಳು ಯಾರನ್ನೋ ಹೊಡೆಯುತ್ತಾಳೆ ಅಂದ್ರೆ ಅದನ್ನು ನಂಬಲು ಅವಳು ತಯಾರಿರಲಿಲ್ಲ. ಹೀಗೆ ಹುಡುಕುತ್ತಾ ಹೋದಾಗ ಹತ್ತಾರು ಕತೆಗಳು ಕಣ್ಣೆದುರು ಹೀಗೆ ಹಾದು ಹೋದವು. ಒಂದೆರಡು ದುರಂತ ಕತೆಗಳು ಸಿಕ್ಕವಾದರೂ ಜಾಸ್ತಿ ಕಣ್ಣಿಗೆ ಬಿದ್ದದ್ದು ಗೆಲುವಿನ ಕತೆಗಳೇ. ಈ ನಗರದಲ್ಲಿ ಹುಡ್ಗಿಯರನ್ನು ಕಾಡಿಸುವವರ ಸಂಖ್ಯೆ ಜಾಸ್ತಿಯೇ ಇದೆ. ಎಲ್ಲಿ ನೋಡಿದರಲ್ಲಿ ಏನಾದರೂ ಕಾಟ ಕೊಡುತ್ತಿರುತ್ತಾರೆ. ಮುಟ್ಟುವುದು, ಮುಟ್ಟದೆಯೇ ಕಣ್ಣಲ್ಲೇ ಟಚ್ ಮಾಡೋದು, ನೋಡಬಾರದ ಜಾಗವನ್ನು ನೋಡ್ತಾ ಇರೋದು- ಇಂಥದ್ದೆಲ್ಲಾ ಪ್ರತಿ ಕ್ಷಣ ನಡೆಯುತ್ತಾ ಇರುತ್ತದೆ. ಅಲ್ಲೆಲ್ಲೋ ಹುಡ್ಗಿ ಒಂದು ಗಳಿಗೆ ಆತಂಕಗೊಂಡಿರುತ್ತಾಳೆ. ಮತ್ತೂಬ್ಬಳು ಹುಡ್ಗರು ಜಾಸ್ತಿ ಇದ್ದಾಗ ಒಂದು ಕ್ಷಣ ಭಯಗೊಂಡಿರುತ್ತಾಳೆ. ಸಂಜೆ ಹೊತ್ತು ಪಿಜಿಯತ್ತ ನಡೆದು ಹೋಗುತ್ತಿರುವಾಗ ಸ್ವಲ್ಪ ಕತ್ತಲೆ ಇದ್ದರೆ ಆ ಕತ್ತಲೆ ಹಾದು ಹೋಗುವ ತನಕ ಅವಳ ಎದೆ ದಡಬಡ ದಡಬಡ ಅಂತ ಹೊಡೆದು ಕೊಳ್ಳುತ್ತಿರುತ್ತದೆ. ಪಿಜಿಯಲ್ಲಿ ಮಲಗಿರುವ ಹೊತ್ತಿಗೆ ಹೊರಗಡೆ ಜೋರಾದ ಸದ್ದು ಕೇಳಿಸಿದರೆ, ಯಾರೋ ಜಗಳಾಡಿದಂತೆ ಅನ್ನಿಸಿದರೆ ಅವಳ ಕಣ್ಣಲ್ಲಿ ಆತಂಕದ ಛಾಯೆ ಕಾಣಿಸಿಕೊಳ್ಳುತ್ತದೆ. ಇದು ಪ್ರತಿದಿನದ ಸತ್ಯ ಮತ್ತು ಯಾವತ್ತೂ ಮುಗಿಯದ ಕತೆ. ಇಷ್ಟೆಲ್ಲಾ ಇದ್ದು ಮರುದಿನ ಬೆಳಿಗ್ಗೆ ಮತ್ತೆ ಎದ್ದು ಕೆಲಸಕ್ಕೋ ಕಾಲೇಜಿಗೋ ಹೋಗಲು ಹೇಗೆ ಸಾಧ್ಯವಾಗುತ್ತದೆ? ನಿನ್ನೆ ರಾತ್ರಿ ಹೊತ್ತು ಯಾರೋ ಒಬ್ಬ ಫಾಲೋ ಮಾಡಿದ್ದಾನೆ ಎಂದು ಗೊತ್ತಾದ ನಂತರವೂ ಇವತ್ತು ಸಂಜೆ ಮತ್ತೆ ಅದೇ ಹೊತ್ತಿಗೆ ಪಿಜಿಗೆ ಬರೋ ಧೈರ್ಯ ಹೇಗೆ ಬರುತ್ತದೆ? ಸುಮ್ಮನೆ ಅಲ್ಲ ಹೆಣ್ಮಕ್ಕಳು
ಹುಡ್ಗಿàರಿಗೊಂದು ಭಯಂಕರ ಶಕ್ತಿ ಇದೆ. ಅವರು ನಾಚಿಕೊಳ್ಳಬಲ್ಲರು. ಮರುಕ್ಷಣ ಕೋಪಿಸಿಕೊಳ್ಳಲೂ ಬಲ್ಲರು. ಒಮ್ಮೆ ಆತಂಕದಿಂದ ಕಿರುಚಿಕೊಳ್ಳಬಲ್ಲರು. ಮತ್ತೂಂದು ಗಳಿಗೆಯಲ್ಲಿ ವೀರವನಿತೆ ಓಬವ್ವನಂತೆ ಜಗಳಕ್ಕೆ ನಿಂತುಕೊಳ್ಳಬಲ್ಲರು. ಈಗ ಅತ್ತರೆ ನಂತರ ಬೈಯಬಲ್ಲರು. ಈಕ್ಷಣ ಹೆದರಿಕೊಂಡರೆ ಮತ್ತೂಂದು ಕ್ಷಣ ಹೊಡೆಯಲೂ ಬಲ್ಲರು. ಹಾಗಾಗಿಯೇ ಬೆಂಗಳೂರಂಥಾ ಮಹಾನಗರದಲ್ಲಿ ಹುಡ್ಗಿಯರು ಹ್ಯಾಪ್ಪಿಯಾಗಿಯೇ ಬದುಕುತ್ತಿರುವುದು. ಅವರು ಹೆದರು ಪುಕ್ಕಲರಲ್ಲ. ಅವರು ಓಡಿ ಹೋಗುವವರಲ್ಲ. ಅವರಿಗೆ ಭಯವಾಗುತ್ತದೆ ನಿಜ. ಅದರರ್ಥ ಅವರಿಗೆ ಧೈರ್ಯ ಇರಲ್ಲ ಅಂತಲ್ಲ. ಕೆಲವು ಹುಡ್ಗಿàರು ತನಗೊಬ್ಬ ವೀರಾಗ್ರೇಸರನನ್ನು ದಯಪಾಲಿಸೋ ಭಗವಂತಾ ಅಂತ ಕೇಳಿಕೊಳ್ಳುತ್ತಿರುತ್ತಾರೆ. ಅವರಿಗೆ ಭಯಪಡುವ ಹುಡ್ಗನನ್ನು ಒಪ್ಪಿಕೊಳ್ಳಲು ಯಾವತ್ತೂ ಸಾಧ್ಯವಾಗುವುದೇ ಇಲ್ಲ. ಇನ್ನು ಕೆಲವು ಹುಡ್ಗಿàರಿರ್ತಾರೆ. ಯಾವುದಕ್ಕೂ ಹೆದರಲ್ಲ, ನೀನು ಅಂದ್ರೆ ನಿಮ್ಮಪ್ಪ ಅನ್ನೋ ಸ್ವಭಾವದವರವರು. ಅಂಥದೊಂದು ಗುಣ ಎಲ್ಲಾ ಹುಡ್ಗಿಯರಲ್ಲೂ ಇರುತ್ತದೆ. ಕೆಲವರಲ್ಲಿ ಅಡಗಿಕೊಂಡಿರಬಹುದು. ಅಷ್ಟೇ. ಅವರ ಧೈರ್ಯವನ್ನು ಪ್ರೋತ್ಸಾಹಿಸಬೇಕು. ಅಷ್ಟಿದ್ದರೆ ಸಾಕು ಅವರು ಯಾವತ್ತಿಗೂ ವೀರಾಗ್ರೇಸರಿಯರೇ. ಎಂಥಾ ಕತೆಗಳೂ ಹೆದರಿಸಲಾರವು
ಮಲೆನಾಡಿನಿಂದ ಬಂದು ಬೆಂಗಳೂರಿನಂಥಾ ನಗರದಲ್ಲಿ ಬದುಕು ಕಟ್ಟಿಕೊಂಡ ಹುಡ್ಗಿಯನ್ನೊಮ್ಮೆ ಕೇಳಿದ್ದೆ- ರೇಪ್ ಸುದ್ದಿಗಳನ್ನೆಲ್ಲಾ ಕೇಳಿದಾಗ ಭಯ ಆಗಲ್ವಾ ಅಂತ. ಅದಕ್ಕವಳು ಉತ್ತರಿಸಿದ್ದಳು- ನಿಂಗಾಗಲ್ವಾ? ಮನುಷ್ಯರು ಅಂದ ಮೇಲೆ ಭಯ ಆಗಲೇಬೇಕು. ಖುಷಿ, ಸಂತೋಷ ಎಲ್ಲವೂ ಆಗಬೇಕು. ಹುಡ್ಗಿಯರೇನೂ ದೇವರಲ್ಲವಲ್ಲ, ಅವರಿಗೂ ಭಯ ಆಗತ್ತೆ. ಆದರೆ ಭಯ ಪಟ್ಟುಕೊಂಡರೆ ಬದುಕ್ಲಿಕ್ಕಾಗಲ್ಲ ಅಂತ ಅವಳಂದಿದ್ದಳು. ಪಬ್ಬು, ಕ್ಲಬ್ಬು ಎಂದು ಸುತ್ತಾಡಿಕೊಂಡಿರುವ ಹುಡ್ಗಿಯರಿಗೂ ಭಯ ಆಗುತ್ತದೆ, ಪಿಜಿಯಲ್ಲೇ ಓದಿಕೊಂಡಿರುವ ಹುಡ್ಗಿಯರಿಗೂ ಭಯ ಆಗುತ್ತದೆ. ಆದರೆ ಮನೆಯಿಂದ ಸಾಕು ಅಲ್ಲಿದ್ದದ್ದು, ಬಾ ಮನೆಗೆ ಅಂತ ಫೋನ್ ಬಂದರೆ ಮಾತ್ರ ಅವರ ಪಿತ್ತ ಕೆರಳುತ್ತದೆ. ಏನಂದುಕೊಂಡಿದ್ದೀಯಾ ಅಂತ ಅಮ್ಮನಿಗೆ ಗದರಿದರೂ ಅಚ್ಚರಿಯಿಲ್ಲ. ಹೆದರಿ ಊರಿಗೆ ಹೋಗುವ ವಿಚಾರ ಹುಡ್ಗಿಯ ಮನಸ್ಸಲ್ಲಿರುವುದಿಲ್ಲ. ಮದ್ವೆಯಾಗಿ ಹೋಗಬಹುದಷ್ಟೇ. ಹೆದರಿ ಹೋಗುವ ಸಂಗತಿ ಇಲ್ವೇ ಇಲ್ಲ. ಎಷ್ಟೇ ಹಾಳು ಬಿದ್ದು ಹೋದರೂ ಮಹಾನಗರವೊಂದು ಆಕರ್ಷಣೆಯಾಗಿಯೇ ಉಳಿಯುತ್ತದೆ. ಹುಡ್ಗಿಯರು ಕೈಯಲ್ಲೊಂದು ಸ್ಮಾರ್ಟ್‌ಫೋನನ್ನು ಖಡ್ಗದಂತೆ ಹಿಡಿದುಕೊಂಡು ವೀರಾಗ್ರೇಸರಿಯಾಗಿಯೇ ಬದುಕುತ್ತಿರುತ್ತಾರೆ. – ಯಾಮಿನಿ