Advertisement
ಸಭೆಯಲ್ಲಿ ಜಿಲ್ಲಾಧಿಕಾರಿ, ಬಸ್ ಮಾಲಕರು ಸಹಿತ ಪ್ರಾದೇಶಿಕ ಸಾರಿಗೆ ಅಧಿಕಾರಿ, ಪೊಲೀಸ್ ಕಮಿಷನರ್ ಇರಲಿದ್ದು, ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಬಸ್ ಮಾಲಕರೊಂದಿಗೆ ಚರ್ಚೆ ನಡೆಯಲಿದೆ.
ನಗರದ ಸಿಟಿ ಬಸ್‌ಗಳು ಕೂಡ ದಿನದಿಂದ ದಿನಕ್ಕೆ ಡಿಜಿಟಲೀಕೃತವಾಗುತ್ತಿದೆ. ಒಂದೆಡೆ ಆ್ಯಪ್‌ನಲ್ಲಿ ಸಿಟಿ ಬಸ್‌ಗಳ ಚಲನ -ವಲನ ನೋಡಬಹುದಾಗಿದ್ದರೆ, ಹೆಚ್ಚಿನ ಬಸ್‌ಗಳಿಗೆ ಈಗಾಗಲೇ ಜಿಪಿಎಸ್ ಅಳವಡಿಸಲಾಗಿದೆ. ಕೆಲವೊಂದು ಬಸ್‌ಗಳಲ್ಲಿ ಟ್ಯಾಬ್ ಆಧಾರಿತ ಟಿಕೆಟ್ ನೀಡುವ ವ್ಯವಸ್ಥೆ ಬಂದಿದೆ. ನಿರ್ವಾಹಕರು ಪ್ರಯಾಣಿಕರಿಗೆ ಟಿಕೆಟ್ ನೀಡಬೇಕು ಎಂಬ ಉದ್ದೇಶದಿಂದ ನಗರದ ಸಿಟಿ ಬಸ್‌ಗಳಲ್ಲಿ ಟಿಕೆಟ್ ಚೆಕ್ಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಆದರೂ ಕೆಲವೊಂದು ಬಸ್‌ಗಳಿಂದ ನಿಯಮ ಉಲ್ಲಂಘನೆಯಾಗುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ ಇದೀಗ ಗಂಭೀರವಾಗಿ ಚಿಂತಿಸಿದೆ. ಕಠಿನ ಕ್ರಮ
ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಚಂದ್ರ ಉಪ್ಪಾರ್ ಅವರು “ಉದಯವಾಣಿ ಸುದಿನ’ಕ್ಕೆ ಈ ಬಗ್ಗೆ ಪ್ರತಿಕ್ರಿಯಿಸಿ, ಮಂಗಳೂರು ಆರ್‌ಟಿಒನಲ್ಲಿ ಈವರೆಗೆ ಪ್ರಭಾರ ಸಾರಿಗೆ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದರು. ಒಂದು ತಿಂಗಳ ಹಿಂದೆ ನಾನು ಅಧಿಕಾರ ವಹಿಸಿಕೊಂಡಿದ್ದು, ಸಿಟಿ ಬಸ್‌ಗಳಲ್ಲಿ ಟಿಕೆಟ್ ನೀಡದಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ಈಗಾಗಲೇ ನಿಯಮ ಉಲ್ಲಂಘಿಸುವ ಬಸ್‌ಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸುತ್ತೇವೆ ಎಂದಿದ್ದಾರೆ.
Related Articles
ಪ್ರಯಾಣಿಕರು ಬಸ್‌ನಲ್ಲಿ ತೊಂದರೆ ಅನುಭವಿಸುತ್ತಿದ್ದರೆ, ಟಿಕೆಟ್ ನೀಡದಿದ್ದರೆ, ಸಿಬಂದಿ ಸಮವಸ್ತ್ರ ಧರಿಸದಿದ್ದರೆ, ಕರ್ಕಶವಾಗಿ ಹಾರ್ನ್ ಹಾಕಿದರೆ ಸಹಿತ ಮತ್ತಿತರ ದೂರುಗಳಿದ್ದರೆ ಪ್ರಯಾಣಿಕರು 7996999977ಈ ನಂಬರ್‌ಗೆ ವಾಟ್ಸಪ್ ಮಾಡಬಹುದು. ಅಲ್ಲದೆ, ಯಾವುದೇ ಸಲಹೆಗಳನ್ನು ನೀಡ ಬಹುದಾಗಿದೆ ಎಂದು ಸಿಟಿ ಬಸ್ ಮಾಲಕರ ಸಂಘದಿಂದ ಬಸ್‌ನ ಒಳಗೆ ಈ ಹಿಂದೆಯೇ ಸ್ಟಿಕ್ಕರ್ ಅಂಟಿಸಲಾಗಿತ್ತು. ಆದರೆ ಕೆಲವು ಬಸ್‌ಗಳಲ್ಲೀಗ ಈ ಸ್ಟಿಕ್ಕರ್ ಮಾಯವಾಗಿದೆ.
Advertisement
ಆರ್‌ಟಿಒ ಗಮನಕ್ಕೆ ತನ್ನಿಸಿಟಿ ಬಸ್‌ಗಳಲ್ಲಿ ಟಿಕೆಟ್ ಸಮಸ್ಯೆ ಸಹಿತ ಯಾವುದೇ ದೂರುಗಳಿದ್ದರೆ ಆರ್‌ಟಿಒ ಗಮನಕ್ಕೆ ತರಬಹುದು. ನಿಯಮ ಉಲ್ಲಂ ಸುವ ಬಸ್‌ಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳುತಿದ್ದು, ಮತ್ತಷ್ಟು ಪರಿಣಾಮಕಾರಿಯಾಗಲು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಿಟಿ ಬಸ್ ಮಾಲಕರ ಸಭೆ ಕರೆಯಲಾಗಿದೆ.
ಚಂದ್ರ ಉಪ್ಪಾರ,ಆರ್‌ಟಿಒ ಮಂಗಳೂರು